ಚೀನಾದ ಅಪಾಯವನ್ನು ಎದುರಿಸಲು ಭಾರತೀಯರು ಸಿದ್ಧರಿರುವರೇ ?

೧. ವಿದ್ಯಾರ್ಥಿಗಳಿಗೆ ಸಾಧನೆಯನ್ನು ಕಲಿಸದಿರುವುದರ ಪರಿಣಾಮ !

ಗಾಝಿಯಾಬಾದ(ಉತ್ತರಪ್ರದೇಶ) ಇಲ್ಲಿಯ ಕೃಷ್ಣಾ ವಿದ್ಯಾಲಯದಲ್ಲಿ ತರಗತಿಯಲ್ಲಿ ಶಿಕ್ಷಕ ಸಚಿನ ತ್ಯಾಗಿಯವರು ಎಲ್ಲರ ಮುಂದೆ ೧೭ ವರ್ಷದ ವಿದ್ಯಾರ್ಥಿಯ ಮೇಲೆ ಸಿಟ್ಟು ಮಾಡಿಕೊಂಡಿದ್ದರು, ಅದರ ಸೇಡನ್ನು ತೀರಿಸಿಕೊಳ್ಳಲು ವಿದ್ಯಾರ್ಥಿಯು ಅವರ ಮೇಲೆ ಶಾಲೆಯ ಪರಿಸರದಲ್ಲಿಯೇ ಗುಂಡು ಹಾರಿಸಿದನು. ಅದೃಷ್ಠದಿಂದ ಶಿಕ್ಷಕನು ಇದರಿಂದ ಪಾರಾದನು.

೨. ಭ್ರಷ್ಟ ರಾಜಕಾರಣಿಗಳ ವಿಷಯದಲ್ಲಿ ಆದಾಯತೆರಿಗೆ ಇಲಾಖೆಯು ಇಷ್ಟೊಂದು ತತ್ಪರವಾಗಿರುತ್ತದೆಯೇ ?

ಪ್ರಯಾಗರಾಜ(ಉತ್ತರಪ್ರದೇಶ) ಇಲ್ಲಿ ೨೦೧೯ ರ ಕುಂಭಮೇಳದ ಸಮಯದಲ್ಲಿ ಸರಕಾರವು ಪೂರೈಸಿದ ಕೋಟ್ಯಂತರ ರೂಪಾಯಿಗಳ ಬಗ್ಗೆ ಲೆಕ್ಕ ಕೊಡದಿರುವುದರಿಂದ ಆದಾಯ ತೆರಿಗೆ ಇಲಾಖೆಯು ೧೩ ಆಖಾಡಾಗಳಿಗೆ ಮತ್ತು ೧೬ ಮಠಗಳಿಗೆ ನೋಟಿಸ್ ಕಳುಹಿಸಿದೆ.

೩. ಚೀನಾದ ಅಪಾಯವನ್ನು ಎದುರಿಸಲು ಭಾರತೀಯರು ಸಿದ್ಧರಿರುವರೇ ?

ಚೀನಾದ ರಾಷ್ಟ್ರಪತಿ ಶೀ ಜಿನಪಿಂಗ ಇವರು ದೇಶದ ಸದ್ಯದ ಭದ್ರತೆಯ ಸ್ಥಿತಿ ಅಸ್ಥಿರ ಮತ್ತು ಅನಿಶ್ಚಿತವಾಗಿದೆ. ಇಂತಹ ಸಮಯದಲ್ಲಿ ಸಂಪೂರ್ಣ ಸೈನ್ಯವು ಯುದ್ಧದ ಸಿದ್ಧತೆಯನ್ನು ಹೆಚ್ಚಿಸಬೇಕು ಮತ್ತು ಬಲವನ್ನು ಹೆಚ್ಚಿಸಲು ಸಮನ್ವಯ ಇಡಬೇಕು, ಎಂದು ಸೈನ್ಯಕ್ಕೆ ಕರೆ ನೀಡಿದ್ದಾರೆ.

೪. ಹಿಂದೂಗಳ ದೇವಸ್ಥಾನಗಳು ಯಾವಾಗ ಮುಕ್ತಗೊಳ್ಳಲಿವೆ ?

ಮಹಾಶಿವರಾತ್ರಿಯ ದಿನ ಹಿಂದೂ ಮಹಾಸಭೆಯ ೨ ಪುರುಷ ಕಾರ್ಯಕರ್ತರು ಮತ್ತು ೧ ಮಹಿಳಾ ಪದಾಧಿಕಾರಿ ಇವರು ತಾಜಮಹಲಗೆ ಹೋಗಿ ಶಿವಪೂಜೆ ಮಾಡಿದರು. ಪೊಲೀಸರು ಈ ಮೂವರನ್ನು ಬಂಧಿಸಿದ್ದಾರೆ. ತಾಜಮಹಲ ಇದು ತೇಜೊ ಮಹಲ ಎಂಬ ಹೆಸರಿನ ಶಿವಾಲಯವಾಗಿದೆ ಎಂಬುದಾಗಿ ಹಿಂದೂಗಳ ಭಾವನೆ ಇದೆ.

೫. ಹಿಂದೂಗಳ ಮತಗಳಿಗಾಗಿ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ನಾಟಕವನ್ನು ತಿಳಿಯಿರಿ !

೨೦೧೮ ರಲ್ಲಿ ಶಬರಿಮಲೈ ದೇವಸ್ಥಾನದಲ್ಲಿ ಮಹಿಳೆಯರು ಪ್ರವೇಶಿಸಲು ನೀಡಲಾಗಿದ್ದ ಅನುಮತಿ ಒಂದು ಮುಗಿದ ಅಧ್ಯಾಯವಾಗಿದೆ. ಹೀಗೆ ಆಗಬಾರದಿತ್ತು, ಎಂಬ ಹೇಳಿಕೆಯನ್ನು ನೀಡಿ ಕೇರಳದ ಮಾಕಪದ ಸರಕಾರದಲ್ಲಿನ ಮಂತ್ರಿ ಕೆ. ಸುರೇಂದ್ರನ್ ಇವರು ಚುನಾವಣಾ ಪ್ರಸಾರದ ಸಮಯದಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.

೬. ತಮಿಳುನಾಡಿನಲ್ಲಿ ದೇವಸ್ಥಾನಗಳ ದುಸ್ಥಿತಿಯನ್ನು ತಿಳಿಯಿರಿ !

ತಮಿಳುನಾಡಿನಲ್ಲಿ ೧೧ ಸಾವಿರ ೯೯೯ ದೇವಸ್ಥಾನಗಳಲ್ಲಿ ಆರ್ಥಿಕ ಸಂಕಟ ದಿಂದಾಗಿ ಒಂದು ಸಲವೂ ಪೂಜೆ ಮಾಡಲಾಗುತ್ತಿಲ್ಲ. ೩೭ ಸಾವಿರ ದೇವಸ್ಥಾನಗಳಲ್ಲಿ ಪೂಜೆ, ದುರುಸ್ಥಿ, ಭದ್ರತೆ, ಸ್ವಚ್ಛತೆ ಇವುಗಳ ಹೊಣೆ ಒಬ್ಬ ವ್ಯಕ್ತಿಯ ಮೇಲಿದೆ, ಎಂಬುದಾಗಿ ಸದ್ಗುರು ಜಗ್ಗೀ ವಾಸುದೇವ ಇವರು ಮಾಹಿತಿಯನ್ನು ನೀಡಿದ್ದಾರೆ.

೭. ಭಾರತದಲ್ಲಿ ಹೀಗಾಗುವುದು ಯಾವಾಗ ?

ಶ್ರೀಲಂಕಾದ ಸಾರ್ವಜನಿಕ ರಕ್ಷಣಾಸಚಿವ ಸರಥ ವೀರಶೇಖರ ಇವರು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಶ್ರೀಲಂಕಾದಲ್ಲಿ ಬುರಖಾ ಧರಿಸಲು ನಿರ್ಬಂಧ ಹೇರುವ ಪ್ರಸ್ತಾವನೆ ಇದೆ. ಹಾಗೆಯೇ ೧ ಸಾವಿರಕ್ಕೂ ಹೆಚ್ಚು ಮದರಸಾಗಳನ್ನೂ ಮುಚ್ಚಲಾಗುವುದು, ಎಂಬ ಮಾಹಿತಿಯನ್ನು ನೀಡಿದರು.