ಕಾಂಗ್ರೆಸ್ಸಿನ ಢೋಂಗಿ ರೈತಪ್ರೇಮವನ್ನು ತಿಳಿಯಿರಿ !

೧. ಕಾಂಗ್ರೆಸ್ಸಿನ ಢೋಂಗಿ ರೈತಪ್ರೇಮವನ್ನು ತಿಳಿಯಿರಿ !

ಝಾರಖಂಡದಲ್ಲಿ ರೈತರ ಅಂದೋಲನಕ್ಕೆ ಬೆಂಬಲ ನೀಡುವುದಕ್ಕಾಗಿ ಕಾಂಗ್ರೆಸ್‍ನಿಂದ ‘ಜನ ಆಕ್ರೋಶ ಸಭೆ’ ಯ ಆಯೋಜನೆ ಮಾಡಲಾಗಿತ್ತು. ಈ ಸಮಯಕ್ಕೆ ವೇದಿಕೆಯ ಮೇಲೆ ನರ್ತಕಿಯರಿಂದ ಹಿಂದಿ ಚಲನಚಿತ್ರಗಳ ಹಾಡುಗಳ ತಾಳಕ್ಕೆ ನೃತ್ಯ ಮಾಡಲಾಯಿತು, ಆಗ ವೇದಿಕೆಯ ಮೇಲೆ ಪಕ್ಷದ ಕೆಲವು ಮಹಿಳಾ ಪದಾಧಿಕಾರಿಗಳೂ ಉಪಸ್ಥಿತರಿದ್ದರು.

೨. ಸಮಸ್ತ ಜನಪ್ರತಿನಿಧಿಗಳ ಆಸ್ತಿಯ ವಿಚಾರಣೆ ಮಾಡಿರಿ !

ಆದಾಯ ತೆರಿಗೆ ಇಲಾಖೆಯು ಮಧ್ಯಪ್ರದೇಶದ ಬೈತೂಲ ಇಲ್ಲಿಯ ಕಾಂಗ್ರೆಸ್ ಶಾಸಕ ನಿಲಯ ಡಾಗಾ ಇವರ ಸೋಯಾ ಉತ್ಪಾದನೆ ಮಾಡುವ ಕಂಪನಿಯ ಅವ್ಯವಹಾರದಿಂದ ಡಾಗಾ ಮತ್ತು ಕುಟುಂಬದವರ ೨೨ ಸ್ಥಳಗಳಲ್ಲಿ ಮುತ್ತಿಗೆ ಹಾಕಿ ೪೫೦ ಕೋಟಿ ರೂಪಾಯಿಗಳ ಲೆಕ್ಕವಿಲ್ಲದ ಸಂಪತ್ತಿಯನ್ನು ಜಪ್ತಿ ಮಾಡಿತು.

೩. ಕೇರಳದಲ್ಲಿನ ಹಿಂದೂಗಳ ರಕ್ಷಣೆ ಯಾವಾಗ ಆಗುತ್ತದೆ ?

ಅಲಪ್ಪುಝಾ(ಕೇರಳ)ದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಮತಾಂಧ ರಾಜಕೀಯ ಪಕ್ಷ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಇವರ ಕಾರ್ಯಕರ್ತರಲ್ಲಿ ನಡೆದ ಹೊಡೆದಾಟದಲ್ಲಿ ಸಂಘದ ನಂದೂ ಕೃಷ್ಣಾ ಎಂಬ ಸ್ವಯಂಸೇವಕರು ಮೃತಪಟ್ಟರು.

೪. ಸಾಯರೊ-ಮಲಬಾರ ಚರ್ಚ್‍ನ ಸಂವಿಧಾನವಿರೋಧಿ ಕೃತಿಯನ್ನು ತಿಳಿಯಿರಿ !

ಸಾಯರೊ-ಮಲಬಾರ ಚರ್ಚ್ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಚರ್ಚ್‍ದೊಂದಿಗೆ ಚರ್ಚಿಸದೇ ಕ್ರೈಸ್ತಬಹುಸಂಖ್ಯಾತ ಚುನಾವಣಾಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯನ್ನು ನಿಶ್ಚಯಿಸಬಾರದು, ಎಂದು ಎಚ್ಚರಿಕೆ ನೀಡಿದೆ.

೫. ಜಾತ್ಯತೀತ ‘ಆಪ್’ ನ ಮತಾಂಧತೆಯನ್ನು ತಿಳಿಯಿರಿ !

ದೆಹಲಿ ಗಲಭೆಯ ಪ್ರಕರಣದಲ್ಲಿ ರಾಜ್ಯದ ಆಮ ಆದಮಿ ಪಕ್ಷದ ಸರಕಾರ ಮತ್ತು ‘ಖಾಲಸಾ’ ಈ ಸಂಘಟನೆಯು ಮುಸಲ್ಮಾನ ಸಂತ್ರಸ್ತರಿಗೆ ಸಂಪೂರ್ಣ ನೆರವು ನೀಡಿದರೆ, ಸಂತ್ರಸ್ತ ಹಿಂದೂಗಳಿಗೆ ನೆರವು ನೀಡಲು ನಿರಾಕರಿಸಿರುವುದು ಕಂಡು ಬಂದಿತು.

೬. ಹಿಂದೂಗಳ ಧಾರ್ಮಿಕ ಪರಂಪರೆಗಳಲ್ಲಿ ಹಸ್ತಕ್ಷೇಪ ಅಪೇಕ್ಷಿತವಿಲ್ಲ !

ಹರಿದ್ವಾರ(ಉತ್ತರಾಖಂಡ)ದಲ್ಲಿ ಕುಂಭಮೇಳವು ಏಪ್ರಿಲ್ ೧ ರಿಂದ ಪ್ರಾರಂಭ ವಾಗಲಿದೆ ಎಂದು ರಾಜ್ಯ ಸರಕಾರವು ಘೋಷಿಸಿದೆ. ಆದುದರಿಂದ ಮಾರ್ಚ್ ೧೧ ರಂದು ಮಹಾಶಿವರಾತ್ರಿಯ ರಾಜಯೋಗಿ ಸ್ನಾನವನ್ನು ‘ಸಾಮಾನ್ಯ ಸ್ನಾನ’ ಎಂದು ನಿಗದಿಪಡಿಸಿದ್ದರಿಂದ ಅಖಿಲ ಭಾರತೀಯ ಅಖಾಡಾ ಪರಿಷತ್ತು ಸಂತಾಪ ವ್ಯಕ್ತಡಿಸಿದೆ.

೭. ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ ಎಂಬುದನ್ನು ತಿಳಿಯಿರಿ !

ಮೋಪಲಾ ಹತ್ಯಾಕಾಂಡಕ್ಕೆ ೧೦೦ ವರ್ಷಗಳು ಪೂರ್ಣವಾಗಿರುವ ನಿಮಿತ್ತದಿಂದ ಕೇರಳದ ತೆನಿಪಲಮ್ ನಗರದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಜಿಹಾದಿ ಸಂಘಟನೆಯು ಆ ಘಟನೆಯನ್ನು ಆಚರಿಸುವುದಕ್ಕಾಗಿ ಮೆರವಣಿಗೆಯನ್ನು ಹೊರಡಿಸಿತ್ತು. ಈ ನರಮೇಧದಲ್ಲಿ ಮತಾಂಧರು ಸಾವಿರಾರು ಹಿಂದೂಗಳನ್ನು ನರಮೇಧ ಮಾಡಲಾಗಿತ್ತು.