ಇದು ಹಿಂದೂಗಳದ್ದೇ ಅಧಿಕಾರವಾಗಿದೆ !

೧. ಇದು ಹಿಂದೂಗಳದ್ದೇ ಅಧಿಕಾರವಾಗಿದೆ !

ಹಿಂದೂ ಯುವಾ ವಾಹಿನಿಯು ಡೆಹರಾಡೂನದಲ್ಲಿ (ಉತ್ತರಾಖಂಡ) ೧೫೦ ಕ್ಕೂ ಹೆಚ್ಚು ದೇವಸ್ಥಾನಗಳ ಹೊರಗಡೆ ‘ಈ ತೀರ್ಥಸ್ಥಾನ ಹಿಂದೂಗಳಿಗೆ ಪವಿತ್ರ ಸ್ಥಾನವಾಗಿದೆ. ಇಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ, ಎಂಬ ಫಲಕಗಳನ್ನು ಹಾಕಿದೆ. ಪೊಲೀಸರು ಇದರ ಮೇಲೆ ಕ್ರಮಕೈಗೊಳ್ಳುತ್ತಾ ಅವುಗಳನ್ನು ತೆಗೆದುಹಾಕಿದರು.

೨. ಇಂತಹ ಘಟನೆಗಳು ಯಾವಾಗ ನಿಲ್ಲುವುದು ?

ಬದಾಯೂ(ಉತ್ತರಪ್ರದೇಶ) ಎಂಬಲ್ಲಿನ ಮಿಹೌನಾ ಗ್ರಾಮ ದಲ್ಲಿ ಓರ್ವ ಸಾಧುವನ್ನು ಬರ್ಬರವಾಗಿ ಹತ್ಯೆಗೈದು ಅವರ ಅರ್ಧನಗ್ನ ಅವಸ್ಥೆಯ ಮೃತದೇಹವನ್ನು ರಸ್ತೆ ಬದಿಯಲ್ಲಿ ಎಸೆದ ಘಟನೆ ಬೆಳಕಿಗೆ ಬಂದಿದೆ. ಸಾಧೂ ಅವರ ಮುಖವನ್ನು ಜಜ್ಜಿರುವುದಾಗಿ ಕಂಡು ಬಂದಿದೆ.

೩. ಇಂತಹ ಆಡಳಿತಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿರಿ !

ಹೋಳಿ ಹಬ್ಬದಂದು ಜನರು ಮದ್ಯಪಾನ ಮಾಡುತ್ತಾರೆ. ಅದು ಮಾದಕದ್ರವ್ಯಗಳನ್ನೂ ಸೇವಿಸುವ ಹಬ್ಬವಾಗಿದೆ. ಈ ಬಗ್ಗೆ ಮಾಹಿತಿ ದೊರಕಿದಲ್ಲಿ, ಪೊಲೀಸರಿಗೆ ಕೊಡಬೇಕು, ಎಂದು ಉತ್ತರಪ್ರದೇಶದ ಫರುಕಾಬಾದನ ದಂಡಾಧಿಕಾರಿ ಅಶೋಕಕುಮಾರ ಮೌರ್ಯ ಇವರು ಶಾಂತಿ ಸಮಿತಿಯ ಸಭೆಯಲ್ಲಿ ಮಾಹಿತಿ ನೀಡಿದರು.

೪. ಇಂತಹ ಇಚ್ಛೆ ಪಡುವವರನ್ನು ಪಾಕಿಸ್ತಾನಕ್ಕೆ ಕಳುಹಿಸಿ !

ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪ್ರಚಾರದ ಸಮಯದಲ್ಲಿ ಆ ಪಕ್ಷದ ಮತಾಂಧ ನಾಯಕ ಶೇಖ ಆಲಮ್ ಇವರು ಒಂದುವೇಳೆ ಭಾರತದ ಶೇ. ೩೦ ರಷ್ಟು ಮುಸಲ್ಮಾನರು ಒಂದಾದರೆ, ಭಾರತದಲ್ಲಿ ೪ ಪಾಕಿಸ್ತಾನಗಳನ್ನು ನಿರ್ಮಿಸಬಹುದು, ಎಂಬ ಹೇಳಿಕೆಯನ್ನು ನೀಡಿದರು.

೫. ಹಿಂದೂಗಳು ಮುಸಲ್ಮಾನರಿಂದ ಧರ್ಮಾಭಿಮಾನವನ್ನು ಕಲಿಯುವರೇ ?

ಬ್ರಿಟನ್ನಿನ ಬ್ಯಾಟಲೆ ಗ್ರಾಮರ ಸ್ಕೂಲಿನಲ್ಲಿ ಶಾರ್ಲಿ ಹೆಬ್ಡೊ ಎಂಬ ಮಾಸಿಕ ಪತ್ರಿಕೆಯಲ್ಲಿ ಪ್ರಕಟವಾದ ಮಹಮ್ಮದ ಪೈಗಂಬರ ಅವರ ಚಿತ್ರವುಳ್ಳ ಸಂಚಿಕೆಯನ್ನು ಶಿಕ್ಷಕನು ವಿದ್ಯಾರ್ಥಿಗಳಿಗೆತೋರಿಸಿ ದ್ದರಿಂದ ಮುಸಲ್ಮಾನರು ಪ್ರತಿಭಟನೆ ಮಾಡಿದರು.ಇದರಿಂದಾಗಿ ಮುಖ್ಯೋಪಾದ್ಯಾಯರು ಕ್ಷಮೆಯಾಚಿಸಿ ಆ ಶಿಕ್ಷಕರನ್ನು ವಜಾಗೊಳಿಸಿದರು.

೬. ಸಿಕ್ಖ್‌ರ ಧಾರ್ಮಿಕ ಸಂಘಟನೆಯು ಖಲಿಸ್ತಾನವನ್ನು ವಿರೋಧಿಸುತ್ತದೆಯೇ ?

ಪ್ರಸ್ತುತ ಆಡಳಿತ ನಡೆಸುವವರು ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ, ಎಂದು ಸಿಕ್ಖ್‌ರ ಧಾರ್ಮಿಕ ಸಂಘಟನೆಯಾದ ಶಿರೋಮಣಿ ಗುರುದ್ವಾರಾ ಪ್ರಬಂಧಕ ಕಮಿಟಿಯು ಆರೋಪಿಸಿದೆ.

೭. ಇದನ್ನು ‘ಜನಸಂಖ್ಯಾ ಜಿಹಾದ್ ಎಂದು ಹೇಳಬಹುದೇ ?

ಅಮೆರಿಕಾದ ‘ಪ್ಯೂ ರೀಸರ್ಚ ಸೆಂಟರ್ ಇದು ನೀಡಿದ ವರದಿಯಲ್ಲಿ ಜಾಗತಿಕ ಜನಸಂಖ್ಯೆಯು ಒಂದೆಡೆಗೆ ದೊಡ್ಡ ಧರ್ಮಗಳು (ಕ್ರೈಸ್ತ, ಹಿಂದೂ ಇತ್ಯಾದಿ) ಶೇ. ೧೧ ರಿಂದ ಶೇ. ೩೫ ರಷ್ಟು ವೇಗದಿಂದ ಹೆಚ್ಚುತ್ತಿದೆ, ಇನ್ನೊಂದೆಡೆ ಮುಸಲ್ಮಾನರ ಜನಸಂಖ್ಯೆ ಶೇ. ೭೩ ಅಂದರೆ ಎಲ್ಲಕ್ಕಿಂತ ಹೆಚ್ಚು ವೇಗವಾಗಿ ಹೆಚ್ಚುತ್ತಿದೆ, ಎಂದು ಹೇಳಿದೆ.