ಭಾರತದ ಭ್ರಷ್ಟ ರಾಜಕಾರಣಿಗಳಿಗೆ ಇಂತಹ ಶಿಕ್ಷೆಯನ್ನು ನೀಡಲಾಗುತ್ತದೆಯೇ ?

ನಿಕೋಲಸ್ ಸರ್ಕೋಝಿ

೧. ಚುನಾವಣಾ ಆಯೋಗವು ತೃಣಮೂಲ ಕಾಂಗ್ರೆಸ್ ಮೇಲೆ ಯಾವಾಗ ಕ್ರಮ ಕೈಗೊಳ್ಳುವುದು ?

ತೃಣಮೂಲ ಕಾಂಗ್ರೆಸ್ಸಿನ ಸಚಿವ ಫಿರಹಾದ ಹಾಕಿಮ್ ಇವರು ಒಂದು ಮಸೀದಿಯಲ್ಲಿ ಚುನಾವಣಾ ಪ್ರಸಾರದ ಸಮಯದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಮಮತಾ ಬ್ಯಾನರ್ಜಿಯವರ ಸರಕಾರ ಬಂದರೆ, ಇಮಾಮ ಮತ್ತು ಮೌಲ್ವಿಯವರ ಗೌರವಧನವನ್ನು ಹೆಚ್ಚಿಸಲಾಗುವುದು, ಎಂಬ ಭರವಸೆ ನೀಡಿದರು.

೨. ಭಾರತದ ಭ್ರಷ್ಟ ರಾಜಕಾರಣಿಗಳಿಗೆ ಇಂತಹ ಶಿಕ್ಷೆಯನ್ನು ನೀಡಲಾಗುತ್ತದೆಯೇ ?

ಫ್ರಾನ್ಸನ ೬೬ ವರ್ಷದ ಮಾಜಿ ರಾಷ್ಟ್ರಪತಿ ನಿಕೋಲಸ್ ಸರ್ಕೋಝಿ ಅವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ದೋಷಿ ಎಂದು ನಿರ್ಧರಿಸಿ ೩ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

೩. ಮತಾಂಧ ಕ್ರೈಸ್ತರ ಉದ್ಧಟತನವನ್ನು ತಿಳಿಯಿರಿ !

ಆಂಧ್ರಪ್ರದೇಶದ ಗುಂಟೂರು, ಇಡ್ಲಪಾಡು ಎಂಬಲ್ಲಿ ಸೀತಾಮಾತೆಯ ಪಾದಚಿಹ್ನೆಗಳಿದ್ದ ಸ್ಥಳದಲ್ಲಿ ಕ್ರೈಸ್ತರು ಬೃಹತ್ ಶಿಲುಬೆಯನ್ನು ನಿರ್ಮಿಸುತ್ತಿರುವುದರಿಂದ ಪಾದಚಿಹ್ನೆಗಳಿಗೆ ಹಾನಿಯಾಗಿದೆ.

೪. ವಿದೇಶಿ ಸಂಸ್ಥೆಗಳಿಂದಾಗುತ್ತಿರುವ ಭಾರತದ ತೇಜೋವಧೆಯನ್ನು ತಿಳಿಯಿರಿ !

ಅಮೇರಿಕದ ‘ಗ್ಲೋಬಲ್ ಫ್ರೀಡಮ್ ಹೌಸ್’ ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ ೨೦೧೪ ರಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಭಾರತದ ನಾಗರಿಕರಿಗೆ ನೀಡಲಾದ ಹಕ್ಕು ಮತ್ತು ಸ್ವಾತಂತ್ರ್ಯ ನಾಶವಾಗುತ್ತಿವೆ ಎಂದು ಹೇಳಲಾಗಿದೆ.

೫. ಇಂತಹ ಪಕ್ಷಗಳನ್ನು ನಿಷೇಧಿಸಿರಿ !

ಪೊಲೀಸರು ಬಂಗಾಲದ ಬಾರಿವೂಪೂರದಲ್ಲಿ ‘ಇಂಡಿಯನ್ ಸೆಕ್ಯುಲರ ಫ್ರಂಟ್ ಈ ರಾಜಕೀಯ ಪಕ್ಷದ ಕಾರ್ಯಕರ್ತ ಜಿಯಾರೂಲ ಮೊಲ್ಲಾಹ ಇವರ ಮನೆಯಿಂದ ಬಾಂಬ್, ಶಾಟಗನ್ ಮತ್ತು ಬಾಂಬ್ ತಯಾರಿಸುವ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

೬. ಭಾರತ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಬೇಕು !

‘ನಾವೀಗ ಪಾಕ್‌ನೊಂದಿಗೆ ಇರಬಯಸುವುದಿಲ್ಲ. ನಾವು ಭಾರತದೊಂದಿಗೆ ವಿಲೀನವಾಗಬಯಸುತ್ತೇವೆ, ಎಂದು ಪಾಕ್ ಆಕ್ರಮಿತ ಕಾಶ್ಮೀರದ ರಾಜಕೀಯ ಪಕ್ಷದ ನಾಯಕರು ಒಂದು ಸಭೆಯಲ್ಲಿ ಘೋಷಿಸಿದ್ದಾರೆ. ಸದ್ಯ ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

೭. ತೃಣಮೂಲ ಕಾಂಗ್ರೆಸ್ಸಿನ ಸರ್ವಾಧಿಕಾರಿ ಸಚಿವರನ್ನು ಗುರುತಿಸಿರಿ !

ನನಗೆ ಮತ ಸಿಗದ ಪ್ರದೇಶಗಳ ಜನರಿಗೆ ನೀರು ಮತ್ತು ವಿದ್ಯುತ್ ಸಿಗುವುದಿಲ್ಲ, ಎಂದು ಬಂಗಾಲದ ಕೃಷಿ ಸಚಿವ ತಪನ ದಾಸಗುಪ್ತಾ ಇವರು ಹುಗ್ಲಿಯಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಸಾರ ಸಭೆಯಲ್ಲಿ ಬೆದರಿಕೆಯೊಡ್ಡಿದ್ದಾರೆ.