ಪಾಕಿಸ್ತಾನದಲ್ಲಿ ಹಿಂದೂಗಳ ಅಸಹಾಯಕತೆಯನ್ನು ತಿಳಿಯಿರಿ !

೧. ಪಾಕಿಸ್ತಾನದಲ್ಲಿ ಹಿಂದೂಗಳ ಅಸಹಾಯಕತೆಯನ್ನು ತಿಳಿಯಿರಿ !

ಪಾಕಿಸ್ತಾನದಲ್ಲಿ ಕಳೆದ ವರ್ಷ ಮತಾಂಧರ ಸಮೂಹವು ಹಿಂದೂಗಳ ಪ್ರಾಚೀನ ಮಂದಿರ ಮತ್ತು ಅಲ್ಲಿನ ಶ್ರೀ ಪರಮಹಂಸಜಿ ಮಹಾರಾಜರ ಸಮಾಧಿಯನ್ನು ಧ್ವಂಸಗೈದು ಬೆಂಕಿ ಹಚ್ಚಿತ್ತು. ಈಗ ಅಲ್ಲಿಯ ಹಿಂದೂಗಳು ಈ ಪ್ರಕರಣದಲ್ಲಿ ಆ ಸಮೂಹವನ್ನು ಕ್ಷಮಿಸುವ ತೀರ್ಮಾನವನ್ನು ಕೈಗೊಂಡಿದ್ದಾರೆ.

೨. ಪ್ರಗತಿ(ಅಧೋಗತಿ)ಪರರು ಈ ಬಗ್ಗೆ ಏಕೆ ಮೌನವಾಗಿದ್ದಾರೆ ?

ಈಶ್ವರನು ಹೇಳಿದಂತೆ ವಿವಾಹವೆಂದರೆ ಒಬ್ಬ ಸ್ತ್ರೀ ಮತ್ತು ಪುರುಷ ಇವರು ಜೀವನದುದ್ದಕ್ಕೂ ಸಂತೋಷದಿಂದ ಒಟ್ಟಿಗೆ ಬಾಳುವ ಪದ್ಧತಿಯಾಗಿದೆ. ಆದುದರಿಂದಲೇ ಈಶ್ವರನು ಸಲಿಂಗಿಕ ವಿವಾಹಗಳಂತಹ ‘ಕೆಟ್ಟ ವಿಷಯಗಳಿಗೆ ಆಶೀರ್ವಾದ ನೀಡುವುದಿಲ್ಲ, ಎಂದು ವ್ಯಾಟಿಕನ್ ಚರ್ಚ್ ಸ್ಪಷ್ಟನೆ ನೀಡಿದೆ.

೩. ಪೊಲೀಸರು ಕಿವುಡರಾಗಿದ್ದಾರೆಯೇ ?

ಪ್ರಯಾಗರಾಜ (ಉತ್ತರಪ್ರದೇಶ) ಇಲ್ಲಿಯ ಅಲಾಹಾಬಾದ ಕೇಂದ್ರೀಯ ವಿದ್ಯಾಪೀಠದ ಉಪಕುಲಪತಿ ಪ್ರೊ. ಸಂಗೀತಾ ಶ್ರೀವಾಸ್ತವ ಇವರು ಮಸೀದಿಯ ಬೋಂಗಾದಿಂದ ಮುಂಜಾನೆ ನೀಡಲಾಗುವ ಅಜಾನದಿಂದಾಗಿ ನಿದ್ದೆಗೆಡುತ್ತಿದೆ ಎಂದು ಜಿಲ್ಲಾಧಿಕಾರಿ ಭಾನುಚಂದ್ರ ಗೋಸ್ವಾಮಿಯವರಿಗೆ ಪತ್ರ ಬರೆದು ದೂರು ನೀಡಿದ್ದಾರೆ.

೪. ಇಸ್ಲಾಮಿ ದೇಶಗಳಲ್ಲಿ ಹಿಂದೂಗಳ ದುಸ್ಥಿತಿ !

ಬಾಂಗ್ಲಾದೇಶದಲ್ಲಿ ಹಿಫಾಜತ-ಎ-ಇಸ್ಲಾಮ್ ಎಂಬ ಸಂಘಟನೆಯ ಸಾವಿರಾರು ಮತಾಂಧರು ಹಿಂದೂಗಳ ನೌಗಾವ ಎಂಬ ಗ್ರಾಮದ ಮೇಲೆ ದಾಳಿ ನಡೆಸಿ ಹಿಂದೂಗಳ ೮೮ ಮನೆಗಳನ್ನು ಧ್ವಂಸ ಮಾಡಿದ್ದು, ೮ ಮಂದಿರಗಳನ್ನು ಒಡೆದರು. ಹಾಗೆಯೇ ಲೂಟಿ ಮಾಡಲಾಯಿತು.

೫. ಇಂತಹ ಅಧಿಕಾರಿಗಳ ಮೇಲೆ ಯಾವಾಗ ಕ್ರಮ ಕೈಗೊಳ್ಳಲಾಗುವುದು ?

‘ನಾನು ರಾಮ, ಕೃಷ್ಣ ಇವರ ಮೇಲೆ ವಿಶ್ವಾಸ ಇಡುವುದಿಲ್ಲ. ಹಿಂದೂ ಧರ್ಮ ಮತ್ತು ಪರಂಪರೆ ಇವುಗಳನ್ನು ಪಾಲಿಸುವುದಿಲ್ಲ ಎಂದು ತೆಲಂಗಾಣ ಸರಕಾರದ ‘ತೆಲಂಗಾಣ ಸೋಶಿಯಲ್ ವೆಲ್‌ಫೇರ ರೆಸಿಡೆನ್ಸಿಶಯಲ್ ಎಜ್ಯುಕೇಶನಲ್ ಇನ್‌ಸ್ಟಿಟ್ಯೂಶನ್ ಸೋಸೈಟಿಯ ಕಾರ್ಯದರ್ಶಿ ಪ್ರವೀಣ ಕುಮಾರ ಇವರು ಹಿಂದೂ ವಿದ್ಯಾರ್ಥಿಗಳಿಂದ ವಚನವನ್ನು ಪಡೆದುಕೊಂಡಿದ್ದಾರೆ.

೬. ಭಾರತದ ಜನಪ್ರತಿನಿಧಿಗಳ ನಿಜ ಸ್ವರೂಪವನ್ನು ತಿಳಿಯಿರಿ !

ಅಸೋಸಿಯೇಶನ್ ಫಾರ್ ಡೆಮೊಕ್ರೆಟಿಕ್ ರಿಫಾರ್ಮ್ಸ್‌ನ ವರದಿಗನುಸಾರ ತೃಣಮೂಲ ಕಾಂಗ್ರೆಸ್ ಶಾಸಕಿ ಜ್ಯೋತ್ಸ್ನಾ ಮಂಡಿ ಇವರಲ್ಲಿ ೨೦೧೬ ರಲ್ಲಿ ೧ ಲಕ್ಷ ೯೬ ಸಾವಿರ ರೂಪಾಯಿಗಳಷ್ಟಿದ್ದ ಸಂಪತ್ತು ೨೦೨೧ ರಲ್ಲಿ ೪೧ ಲಕ್ಷ ರೂಪಾಯಿಯಾಗಿದೆ.

೭. ಇಂತಹ ಮತಾಂಧರಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕು !

ಮಧ್ಯಪ್ರದೇಶದ ಮುರವಾಸ ಗ್ರಾಮದಲ್ಲಿ ಮತಾಂಧ ಅರಣ್ಯ ಮಾಫಿಯಾಗಳು ತಮ್ಮ ವಿರುದ್ಧ ಧ್ವನಿ ಎತ್ತಿದನೆಂದು ಸಂತರಾಮ ವಾಲ್ಮೀಕಿಯವರ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಹತ್ಯೆ ಮಾಡಿದರು. ಮತಾಂಧ ಅರಣ್ಯ ಮಾಫಿಯಾಗಳು ಭ್ರಷ್ಟ ಅರಣ್ಯಾಧಿಕಾರಿಗಳ ಸಹಾಯದಿಂದ ಸರಕಾರಿ ಭೂಮಿಯ ಮೇಲೆ ಅತಿಕ್ರಮಣ ಮಾಡುತ್ತಿದ್ದರು.