ಹಿಂದೂ ಧರ್ಮದ ಹಬ್ಬಗಳು ಪರಿಸರಸ್ನೇಹಿಯಾಗಿದ್ದು ಜೇಡಿಮಣ್ಣಿನ ಗಣೇಶಮೂರ್ತಿಯನ್ನು ಪೂಜಿಸಿ ! – ಶ್ರೀ. ಗುರುಪ್ರಸಾದ ಗೌಡ, ಹಿಂದೂ ಜನಜಾಗೃತಿ ಸಮಿತಿ
ಗಣೇಶಮೂರ್ತಿ ವಿಸರ್ಜನೆಯಿಂದ ಮಾಲಿನ್ಯವುಂಟಾಗುತ್ತದೆ ಎಂದು ಬೀಜಗಳಿರುವ ಮಣ್ಣಿನ ಗಣೇಶಮೂರ್ತಿ ಇಡುತ್ತಾರೆ. ಹಬ್ಬದ ನಂತರ ನೀರಿನಿಂದ ಆ ಮೂರ್ತಿ ಕರಗಿ ಅದರಿಂದ ಸಸಿಗಳು ಹುಟ್ಟುತ್ತವೆ. ಹೀಗೆ ಅಶಾಸ್ತ್ರೀಯ ಪದ್ಧತಿಯನ್ನು ಧರ್ಮಶಾಸ್ತ್ರದಲ್ಲಿ ಎಂದಿಗೂ ಹೇಳಲಿಲ್ಲ.ನಿಮಗೆ ಗಿಡಗಳನ್ನು ನೆಡಲು ಗಣೇಶಮೂರ್ತಿಯೇ ಏಕೆ ಬೇಕು? ವರ್ಷವಿಡಿ ಗಿಡ ನೆಡುವ ಬಗ್ಗೆ ನೀವು ನಿದ್ರೆ ಮಾಡುತ್ತಿದ್ದಿರೇನು? ವರ್ಷವಿಡೀ ಆಗುತ್ತಿರುವ ಪ್ರದೂಷಣೆಯ ವಿಷಯದಲ್ಲಿ ಈ ಪರಿಸರವಾದಿ ಮಂಡಳಿಗಳು ಎಂದೂ ಬಾಯಿ ತೆರೆಯುವುದಿಲ್ಲ. ಬಕ್ರಿ-ಈದ್, ಕ್ರಿಸ್‌ಮಸ್, ೩೧ ಡಿಸೆಂಬರ್ ಕಾಲದಲ್ಲಿ ಪರಿಸರ ರಕ್ಷಿಸುವಂತಹ ಇಂತಹ ಕರೆ ನೀಡಿದ್ದನ್ನು ಎಲ್ಲಿಯಾದರೂ ಕೇಳಿದ್ದೇವಾ ? ಆದರೆ ಗಣೇಶೋತ್ಸವ ಬಂದೊಡನೆ ಡಾಂಭಿಕ ಪರಿಸರಪ್ರೇಮಿಗಳ ತೋರಿಕೆಯ ಪರಿಸರಪ್ರೇಮವು ಜಾಗೃತವಾಗುತ್ತದೆ, ವಾಸ್ತವದಲ್ಲಿ ಹಿಂದೂ ಮತ್ತು ಹಿಂದೂಗಳ ಪ್ರತಿಯೊಂದು ಹಬ್ಬವು ಪರಿಸರಕ್ಕೆ ಪೂರಕವಾಗಿದೆ. ಅದರ ಪ್ರತಿಯೊಂದು ಕೃತಿಯಲ್ಲಿ ಪರಿಸರದ ಕಾಳಜಿಯನ್ನು ವಹಿಸಲಾಗಿರುತ್ತದೆ. ಗಣೇಶಮೂರ್ತಿಯನ್ನು ಜೇಡಿ ಮಣ್ಣಿನಿಂದ ತಯಾರಿಸಲು ಧರ್ಮಶಾಸ್ತ್ರವು ಹೇಳುತ್ತದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ ಗೌಡ ಇವರು ಹೇಳಿದ್ದಾರೆ. ಅವರು ಆಗಸ್ಟ್ ೧೮ ರಂದು ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯಿಂದ ನಡೆಸಲಾದ ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸೌ. ಲಕ್ಷ್ಮ ಪೈ ಮತ್ತು ಪುತ್ತೂರಿನ ವಕೀಲರಾದ ಶ್ರೀ. ಶ್ಯಾಮಪ್ರಸಾದ ಕೈಲಾರ. ಇವರು ಪಾಲ್ಗೊಂಡಿದ್ದರು, ಇದರ ನಿರೂಪಣೆಯನ್ನು ಸಮಿತಿಯ ದಕ್ಷಿಣಕನ್ನಡ ಜಿಲ್ಲಾಸಮನ್ವಯಕಾರ ಶ್ರೀ. ಚಂದ್ರ ಮೊಗೇರ ಇವರು ಮಾಡಿದರು.
ಸಂಕಟಕಾಲದಲ್ಲಿ ಆಪದ್ಧರ್ಮದಲ್ಲಿ ಹೇಳಿದಂತೆ ಗಣೇಶ ಚತುರ್ಥಿ ಆಚರಿಸಿ ! – ಸೌ. ಲಕ್ಷ್ಮಿ ಪೈ. ಸನಾತನ ಸಂಸ್ಥೆ
ಈ ವರ್ಷ ಕೊರೊನಾ ಮಹಾಮಾರಿಯಿಂದಾಗಿ ಮನೆಯಲ್ಲಿ ಅಥವಾ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಸಾಮಾಜಿಕ ಬಂಧನಗಳಿವೆ. ಅರಾಜಕತೆ, ಬರಗಾಲ, ಸ್ಥಳಾಂತರ, ಮಹಾಮಾರಿ ಅಥವಾ ಯುದ್ಧಜನ್ಯ ಸ್ಥಿತಿ ಇತ್ಯಾದಿ ಅನಿವಾರ್ಯ ಕಾರಣಗಳಿಂದ ಧರ್ಮಾಚರಣೆ ಮಾಡಲು ಅಡ್ಡಿ ಬಂದಾಗ ಸನಾತನ ಹಿಂದೂ ಧರ್ಮದಲ್ಲಿ ಆಪದ್ಧರ್ಮವನ್ನು ಹೇಳಲಾಗಿದೆ. ಪ್ರಸ್ತುತ ಮೂರ್ತಿ ವಿಸರ್ಜನೆಯ ವೇಳೆ ಜಲಮೂಲಗಳ ಹತ್ತಿರ ಜನದಟ್ಟಣೆ ಉಂಟಾಗುವುದರಿಂದ ಸೊಶಿಯಲ್ ಡಿಸ್ಟೆಂಸಿಂಗ್ ಮುಂತಾದ ಸರಕಾರಿ ನಿಯಮಗಳನ್ನು ಪಾಲಿಸಬೇಕು. ಅದಕ್ಕಾಗಿ ಮೂರ್ತಿ ವಿಸರ್ಜನೆಯ ಸಮಯದಲ್ಲಿ ಮನೆಯ ಸದಸ್ಯರು ಅವಶ್ಯಕತೆ ಇದ್ದಷ್ಟು ಮಂದಿ ಮಾತ್ರ ಹೋಗಬೇಕು. ಮನೆಯ ಸಮೀಪ ಕೊಳವಿದ್ದರೆ ಅಥವಾ ಬಾವಿಯಿದ್ದಲ್ಲಿ ಅಲ್ಲಿಯೇ ವಿಸರ್ಜನೆ ಮಾಡಲು ಪ್ರಾಧಾನ್ಯತೆ ನೀಡಬೇಕು. ಒಂದು ವೇಳೆ ಕೊರೋನಾ ಕಾರಣದಿಂದಾಗಿ ಮೂರ್ತಿ ವಿಸರ್ಜನೆಗೆ ಅಡಚಣೆ ಬಂದಲ್ಲಿ ಆಪದ್ಧರ್ಮವೆಂದು ನಾವು ಸಾಧ್ಯವಿದ್ದಷ್ಟು ಮನೆಯಲ್ಲೇ ೬ ರಿಂದ ೭ ಇಂಚಿನ ಆವೆ ಮಣ್ಣಿನ ಗಣೇಶ ಮೂರ್ತಿಯನ್ನು ತಯಾರಿಸಿ ಅದನ್ನು ಪೂಜಿಸಬೇಕು ಮತ್ತು ಉತ್ತರ ಪೂಜೆಯ ನಂತರ ಅದನ್ನು ಮನೆಯ ಹೊರಗೆ ತಂದು ಅಂಗಳದಲ್ಲಿ ತುಳಸಿಯ ಹತ್ತಿರ ದೊಡ್ಡದೊಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದರಲ್ಲಿ ಮೂರ್ತಿಯನ್ನು ವಿಸರ್ಜಿಸಬೇಕು. ಅದು ನೀರಿನಲ್ಲಿ ಸಂಪೂರ್ಣ ಕರಗಿದ ನಂತರ ಯಾರೂ ಓಡಾಡದಂತಹ ಜಾಗದಲ್ಲಿ, ಸಾತ್ವಿಕ ವೃಕ್ಷಗಳ ಬುಡದಲ್ಲಿ, ಉದಾ: ತೆಂಗಿನಮರ, ಅಶ್ವತ್ಥ ಮರ, ಇತ್ಯಾದಿ ಮರಗಳ ಬುಡಕ್ಕೆ ಆ ನೀರನ್ನು ಹಾಕಬಹುದು. ದೊಡ್ಡ ಗಣೇಶ ಮೂರ್ತಿ ಪೂಜಿಸಿದ್ದೇವಾದರೆ ಅದನ್ನು ಉತ್ತರ ಪೂಜೆಯ ನಂತರ ದೇವರ ಕೋಣೆಯ ಹೊರಗೆ ಸಾತ್ವಿಕ ಜಾಗದಲ್ಲಿ ಇಡಬಹುದು. ಇದಕ್ಕೆ ಪುನಃ ಪೂಜೆ ಮಾಡುವ ಅವಶ್ಯಕತೆ ಇಲ್ಲ, ಮುಂದೆ ಪಿತೃಪಕ್ಷ ಮುಗಿದ ನಂತರ ಜನಸಂದಣಿ ಕಡಿಮೆಯಿರುವಾಗ ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬಹುದು.
ಗಣೇಶನ ವಿಡಂನೆ ಮಾಡುವವರ ಮೇಲೆ ದೂರನ್ನು ದಾಖಲಿಸಿ ! – ನ್ಯಾಯವಾದಿ ಶ್ಯಾಮಪ್ರಸಾದ ಕೈಲಾರ
ಗಣೇಶೋತ್ಸವದ ಸಂದರ್ಭದಲ್ಲಿ ಪತ್ರಿಕೆಗಳು, ಜಾಹೀರಾತುಗಳು ಇನ್ನಿತರ ಮಾಧ್ಯಮಗಳ ಮೂಲಕ ಗಣಪತಿಯ ವಿಡಂಬನೆಗಳನ್ನು ಮಾಡಲಾಗುತ್ತದೆ. ಇದನ್ನು ವಿರೋಧಿಸಲು ಹಿಂದೂಗಳು ಸ್ಥಳಯ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಬಹುದು. ಭಾ.ದಂ.ಸಂ. ೨೯೫ (ಅ) ಪ್ರಕಾರ ಧಾರ್ಮಿಕ ಭಾವನೆ ನೋವುಂಟು ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ವಿಡಂಬನೆ ಸಂದರ್ಭದಲ್ಲಿ ಎಲ್ಲ ಹಿಂದೂ ವಕೀಲರು ಇದನ್ನು ತಡೆಯಲು ಹಿಂದೂ ಸಂಘಟನೆಗಳಿಗೆ ಮತ್ತು ಹಿಂದುತ್ವವಾದಿಗಳಿಗೆ ಸಹಾಯ ಮಾಡಬೇಕೆಂದು ನ್ಯಾಯವಾದಿ ಶ್ಯಾಮಪ್ರಸಾದ ಕೈಲಾರ ಇವರು ಕರೆ ನೀಡಿದರು
ಹಲವಾರು ಹಿಂದೂಗಳು ಈ ‘ಆನ್‌ಲೈನ್’ನಲ್ಲಿ ಕಾರ್ಯಕ್ರಮವನ್ನು ಸಮಿತಿಯ ‘ಯೂ ಟ್ಯೂಬ್’ ಚಾನಲ್ ಹಾಗೂ ಫೇಸ್‌ಬುಕ್ ಮೂಲಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.