ವಿದೇಶಗಳಲ್ಲಿ ಹೆಚ್ಚಾಗುತ್ತಿರುವ ಹಿಂದೂ ಸಂಸ್ಕೃತಿಯ ಮಹತ್ವ !
ಪ್ಯಾರೀಸ್ (ಫ್ರಾನ್ಸ್) – ಕೊರೋನಾದಿಂದಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದ್ದು ಜನಸಾಮಾನ್ಯರಿಂದ ಹಿಡಿದು ದೇಶದ ಮುಖಂಡರ ತನಕ ಅದನ್ನು ಪಾಲಿಸಲಾಗುತ್ತಿದೆ. ಇದೇ ನಿಟ್ಟಿನಲ್ಲಿ ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ ಇಮನ್ಯುಯಲ್ ಮೆಕ್ರಾನ್ ಇವರು ಜರ್ಮನಿಯ ಚಾನ್ಸೆಲರ ಎಂಜೆಲಾ ಮರ್ಕೆಲ್ ಇವರೊಂದಿಗೆ ಹಸ್ತಲಾಘವ ಮಾಡುವ ಬದಲು ಕೈ ಜೋಡಿಸಿ ನಮಸ್ಕಾರ ಮಾಡಿ ಸ್ವಾಗತಿಸಿದರು. ಮರ್ಕೆಲ್ ಸದ್ಯ ಫ್ರಾನ್ಸ್‌ನ ಪ್ರವಾಸದಲ್ಲಿದ್ದಾರೆ. ಅವರು ದಕ್ಷಿಣ ಫ್ರಾನ್ಸ್‌ನ ಫೋರ್ಟ್ ಡಿ ಬ್ರೆಗಾಕಾನಾನ್‌ನಲ್ಲಿರುವ ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷರ ನಿವಾಸಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಮರ್ಕೆಲ್ ವಾಹನದಿಂದ ಇಳಿಯುತ್ತಿದ್ದಂತೆ ಮೆಕ್ರಾನ್ ಇವರು ಎರಡೂ ಕೈಗಳನ್ನು ಜೋಡಿಸಿ ‘ನಮಸ್ತೆ’ ಎಂದು ಹೇಳುತ್ತಾ ಅವರನ್ನು ಸ್ವಾಗತಿಸಿದರು. ಮೆಕ್ರಾನ್‌ರವರೇ ಟ್ವೀಟರ್‌ನಲ್ಲಿ ಈ ೧೨ ಸೆಕೆಂಡಿನ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ.