ರಾಜಸ್ಥಾನ ಉಚ್ಚ ನ್ಯಾಯಾಲಯದ ಆನ್‌ಲೈನ್ ಆಲಿಕೆಯ ಸಮಯದಲ್ಲಿ ಧೂಮಪಾನ ಮಾಡಿದ ಹಿರಿಯ ನ್ಯಾಯವಾದಿ ರಾಜಿವ ಧವನ್

ಧವನ್‌ರಿಗೆ ನೀಡಿದ್ದ ‘ಹಿರಿಯ ನ್ಯಾಯವಾದಿ’ ಈ ಗೌರವವನ್ನು ಹಿಂಪಡೆಲು ಅರ್ಜಿ ಸಲ್ಲಿಕೆ

ನ್ಯಾಯವಾದಿ ರಾಜೀವ ಧವನ್ ಶ್ರೀರಾಮಜನ್ಮಭೂಮಿ ಖಟ್ಲೆಯ ಸುನ್ನಿ ವಕ್ಫ್ ಬೋರ್ಡ್‌ನ ನ್ಯಾಯವಾದಿಯಾಗಿದ್ದರು ಹಾಗೂ ಆಲಿಕೆಯ ಸಮಯದಲ್ಲೇ ಸರ್ವೋಚ್ಚ ನ್ಯಾಯಾಲಯದಲ್ಲಿ ಶ್ರೀರಾಮಜನ್ಮಭೂಮಿಯ ನಕಾಶೆಯನ್ನು ಹರಿದಿದ್ದರು. ಈಗ ಅವರು ಧೂಮಪಾನ ಮಾಡುತ್ತಿದ್ದಾರೆ. ಆದ್ದರಿಂದ ಇಂತಹವರಿಗೆ ‘ಹಿರಿಯ’ ಎಂದು ಹೇಳಿದರೆ ‘ಹಿರಿಯ’ ಶಬ್ದದ ಅವಮಾನವೇ ಆಗಿದೆ !

ಹಿರಿಯ ನ್ಯಾಯವಾದಿ ರಾಜೀವ ಧವನ್

ನವ ದೆಹಲಿ – ರಾಜಸ್ಥಾನ ಉಚ್ಚ ನ್ಯಾಯಾಲಯದ ಆನ್‌ಲೈನ್ ಆಲಿಕೆಯ ಸಮಯದಲ್ಲಿ ಧೂಮಪಾನ ಮಾಡುವ ಹಿರಿಯ ನ್ಯಾಯವಾದಿ ರಾಜೀವ ಧವನ್ ಇವರಿಗೆ ನೀಡಲಾಗಿದ್ದ ‘ಹಿರಿಯ’ ಈ ಗೌರವವನ್ನು ಹಿಂಪಡೆಯಬೇಕು, ಎಂಬ ಬೇಡಿಕೆಯ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ನ್ಯಾಯವಾದಿ ರಾಜೀವ ಧವನ್ ಇವರು ಧೂಮಪಾನ ಮಾಡುತ್ತಿರುವ ವಿಡಿಯೋ ಪ್ರಸಾರವಾದಾಗ ಮಾನವ ಹಕ್ಕುಗಳ ಕಾರ್ಯಕರ್ತ ರಾಶಿದ ಪಠಾಣ ಇವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ನ್ಯಾಯವಾದಿ ಧವನ್ ಧೂಮಪಾನ ಮಾಡುತ್ತಿರುವಾಗ ನ್ಯಾಯಧೀಶ ಮಹೇಂದ್ರ ಗೋಯಲ್ ಇವರು ಈ ಅಭ್ಯಾಸವನ್ನು ಬಿಡುವಂತೆ ಹೇಳಿದರು ಹಾಗೂ ಧವನ್ ಇವರು ಅದಕ್ಕೆ ಒಪ್ಪಿದ್ದಾರೆ ಎಂದು ಹೇಳಿದ್ದರು. (ಧೂಮಪಾನ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಜನರ ಅಪೇಕ್ಷೆಯಾಗಿದೆ ! – ಸಂಪಾದಕರು)