ಗಲಭೆಪೀಡಿತ ಪ್ರದೇಶಗಳಲ್ಲಿ ಸಂಚಾರ ನಿಷೇಧ ತೆಗೆಯಿರಿ ಒಂದು ವೇಳೆ ಅಲ್ಲಿ ಮತ್ತೇನಾದರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ ! – ಮೌಲ್ವಿಗಳಿಂದ ಬೆಂಗಳೂರು ಪೊಲೀಸ್ ಆಯುಕ್ತರಿಗೆ ‘ಮನವಿ’

ಇದಕ್ಕೆ ‘ಮನವಿ’ ಎನ್ನಬೇಕೋ ಬೆದರಿಕೆ ಎನ್ನಬೇಕೋ ? ‘ಗಲಭೆಯಾಗದಂತೆ ಪ್ರಯತ್ನಿಸುವೆವು’, ಎಂದು ಹೇಳುವ ಬದಲು ‘ಪುನಃ ಏನಾದರು ಅನಾಹುತವಾದರೆ, ಅದಕ್ಕೆ ನಾವು ಜವಾಬ್ದಾರರಲ್ಲ’, ಎಂದು ಹೇಳಿ ಸಂಚಾರ ನಿಷೇಧವನ್ನು ತೆಗೆಯುವಂತೆ ಒತ್ತಾಯಿಸುವುದು, ಇದನ್ನು ಕಳ್ಳನಿಗೊಂದು ಪಿಳ್ಳೆ ನೆವ ಎಂದು ಹೇಳುತ್ತಾರೆ ! ‘ಪೊಲೀಸರು ಇಂತಹವರಿಗೂ ಸೆರೆಮನೆಗೆ ಅಟ್ಟಬೇಕು’ ಎಂದು ಜನರಿಗೆ ಅನಿಸುತ್ತದೆ !

ಬೆಂಗಳೂರು – ಇಲ್ಲಿಯ ಗಲಭೆಯ ಪ್ರಕರಣದಲ್ಲಿ ಶಾಂತಿನಗರದ ಕಾಂಗ್ರೆಸ್‌ನ ಶಾಸಕ ಹ್ಯಾರಿಸ್‌ನೊಂದಿಗೆ ಮೌಲ್ವಿಯು ಪೊಲೀಸ್ ಆಯುಕ್ತ ಕಮಲ ಪಂತ ಇವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಆ ಸಮಯದಲ್ಲಿ ಮೌಲ್ವಿಗಳು ಆರೋಪಿಯ ಸಂದರ್ಭದಲ್ಲಿ ಆಯುಕ್ತರಲ್ಲಿ ‘ಗಲಭೆ ಪೀಡಿತ ಪ್ರದೇಶಗಳಲ್ಲಿ ಸಂಚಾರ ನಿಷೇಧ ತೆಗೆಯಿರಿ. ಅಲ್ಲಿ ಮತ್ತೇನಾದರೂ ಅನಾಹುತವಾದರೆ, ಅದಕ್ಕೆ ನಾವು ಜವಾಬ್ದಾರರಲ್ಲ’, ಎಂದು ‘ಮನವಿ’ಯನ್ನು ಮಾಡಿಕೊಂಡಿರುವ ವರದಿಯನ್ನು ಇಲ್ಲಿಯ ‘ಪಬ್ಲಿಕ್ ಟಿವಿ’ ವಾಹಿನಿಯು ಒಂದು ವಿಡಿಯೋದ ಸಂದರ್ಭವನ್ನು ನೀಡುತ್ತಾ ಹೇಳಿದೆ.
‘ನಾವು ಘಟನಾಸ್ಥಳಕ್ಕೆ ಭೇಟಿ ನೀಡಿದ್ದು ಪರಿಸ್ಥಿತಿ ಸರಿ ಇಲ್ಲ. ಅಲ್ಲಿಯ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಬಾಣಸವಾಡಿಯಲ್ಲಿ ೧೬ ಜನರನ್ನು ಬಂಧಿಸಲಾಗಿದೆ. ಅವರಿಗೂ ಈ ಪ್ರಕರಣಕ್ಕೂ ಏನು ಸಂಬಂಧ ? ಬಂಧಿತರ ಪೋಷಕರು ‘ನಮ್ಮ ಮಕ್ಕಳು ಅಮಾಯರು, ಅಪ್ರಾಪ್ತರು’, ಎಂದು ಹೇಳುತ್ತಿದ್ದಾರೆ. ಅಮಾಯಕರನ್ನು ಬಂಧಿಸಬೇಡಿ. ಪೋಷಕರು ಠಾಣೆಗೆ ಹೋದರೆ, ಪೊಲೀಸರು ‘ನಾವು ಬಂಧಿಸಿಲ್ಲ’ ಎಂದು ಹೇಳುತ್ತಿದ್ದಾರೆ. ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಎಲ್ಲೆಲ್ಲಿ ಬಂಧಿಸಲಾಗಿದೆ, ಇದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ’, ಎಂದೂ ಮೌಲ್ವಿಯವರು ಹೇಳುತ್ತಿದ್ದಾರೆ.