ಚೀನಾದ ಕಂಪನಿಗಳಿಂದ ‘ಮೇಡ್ ಇನ್ ಪಿ.ಆರ್.ಸಿ’ ಎಂದು ಬರೆದ ಉತ್ಪನ್ನಗಳು ಭಾರತದಲ್ಲಿ ಮಾರಾಟ

ಭಾರತೀಯರನ್ನು ಮೋಸಗೊಳಿಸುವ ಚೀನಾದ ಹೊಸ ಪಿತೂರಿ

ಕೇಂದ್ರ ಸರಕಾರವು ಇದರತ್ತ ತಕ್ಷಣ ಗಮನ ಹರಿಸಿ ಇಂತಹ ವಸ್ತುಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಜನರಿಗೆ ಜಾಗರೂಕತೆಯಿಂದ ಇರಲು ಹೇಳಬೇಕು !

ನವ ದೆಹಲಿ – ಚೀನಾದೊಂದಿಗಿನ ಲಡಾಖ ಘರ್ಷಣೆಯ ನಂತರ ದೇಶದಾದ್ಯಂತ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲಾಗುತ್ತಿರುವಾಗ ಈಗ ಚೀನಾವು ಹೊಸ ಉಪಾಯವನ್ನು ಕಂಡುಹಿಡಿದು ಭಾರತೀಯರನ್ನು ಮೋಸಗೊಳಿಸುತ್ತಿರುವುದು ಬೆಳಕಿಗೆ ಬಂದಿದೆ.

ತನ್ನನ್ನು ಭಾರತೀಯ ಎಂದು ಹೇಳುವ ‘ಬೋಟ್’ ಕಂಪನಿ ಭಾರತೀಯರನ್ನು ಮೋಸ ಮಾಡುತ್ತಿದೆ. ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ‘ಮೇಡ್ ಇನ್ ಚೈನಾ’, ಎಂದು ಬರೆಯಲಾಗುತ್ತಿತ್ತು. ಈಗ ಅಲ್ಲಿ ‘ಮೇಡ್ ಇನ್ ಪಿ.ಆರ್.ಸಿ.’ ಎಂದು ಬರೆಯಲಾಗುತ್ತಿದೆ. ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ’ ಎಂದು ಇದರ ಅರ್ಥವಾಗಿದೆ. ಆದ್ದರಿಂದ ಭಾರತೀಯ ಗ್ರಾಹಕರಿಗೆ ‘ಇದು ಚೀನಾದ ಉತ್ಪನ್ನವಾಗಿದೆ’, ಎಂಬುದು ಗಮನಕ್ಕೆ ಬರುವುದಿಲ್ಲ. ಇದಕ್ಕೆ ಗ್ರಾಹಕರೊಬ್ಬರು ಟ್ವೀಟ್ ಮಾಡಿ ಸಂಸ್ಥೆಯ ಟ್ವಿಟರ್ ಖಾತೆಯಲ್ಲಿ ಪ್ರಶ್ನಿಸಿದಾಗ ಸಂಸ್ಥೆಯು ಸ್ಪಷ್ಟೀಕರಣ ನೀಡುತ್ತಾ ‘ನಾವು ಶೇ. ೧೦೦ ಭಾರತೀಯರಾಗಿದ್ದೇವೆ. ಭಾರತದಲ್ಲೇ ಕೆಲಸವನ್ನು ನೀಡುತ್ತೇವೆ ಹಾಗೂ ಇತರ ಕಂಪನಿಗಳಂತೆ ಚೀನಾಗೆ ಹಣವನ್ನು ನೀಡುವುದಿಲ್ಲ’, ಎಂದು ಉತ್ತರಿಸಿದ್ದಾರೆ.