ಕೊರೋನಾದ ಸಂಕಟಕಾಲದಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ?

ಕೊರೋನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಹಿಂದೂ ಧರ್ಮವು ಧರ್ಮಾಚರಣೆಯಲ್ಲಿ ಕೆಲವು ಪರ್ಯಾಯಗಳನ್ನು ಹೇಳಿದೆ. ಇದನ್ನೇ ‘ಆಪದ್ಧರ್ಮ ಎಂದು ಹೇಳುತ್ತಾರೆ. ‘ಆಪದ್ಧರ್ಮ ಅಂದರೆ ‘ಆಪದ್ಧರ್ಮ ಕರ್ತವ್ಯೋ ಧರ್ಮಃ | ಅಂದರೆ ‘ಆಪತ್ಕಾಲದಲ್ಲಿ ಧರ್ಮಶಾಸ್ತ್ರದಲ್ಲಿ ಮಾನ್ಯತೆಯಿರುವ ಕೃತಿಗಳು.

ಶ್ರೀ. ದಾಮೋದರ ವಝೆ

ಸದ್ಯ ಕೊರೋನಾ ವೈರಾಣುವಿನ ಹಾವಳಿ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಿಂದ ಕೆಲವು ಸ್ಥಳಗಳಲ್ಲಿ ಮನೆಯಿಂದ ಹೊರಗೆ ಬರುವುದನ್ನೂ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಪದ್ಧರ್ಮ ಮತ್ತು ಧರ್ಮಶಾಸ್ತ್ರಗಳನ್ನು ಜೊತೆಗೂಡಿಸಿ ದೃಶ್ಯಾವಳಿ, ದೀಪಾಲಂಕಾರ ಇತ್ಯಾದಿಗಳನ್ನು ಮಾಡದೇ ಸರಳವಾಗಿ ಮಣ್ಣಿನ ಸಿದ್ಧಿವಿನಾಯಕನ ವ್ರತವನ್ನು ಮುಂದಿನ ಪದ್ಧತಿಯಿಂದ ಮಾಡಬಹುದು.

ಈ ವರ್ಷ ಯಾವ ಪ್ರದೇಶದಲ್ಲಿ ಕೊರೋನಾ ವೈರಾಣುವಿನ ಸೋಂಕು ಅಲ್ಪ ಪ್ರಮಾಣದಲ್ಲಿದೆಯೋ, ಅಂದರೆ ಸಂಚಾರಸಾರಿಗೆ ನಿಷೇಧ ಇಲ್ಲದ ಸ್ಥಳಗಳಲ್ಲಿ ಎಂದಿನಂತೆ ಗಣೇಶಮೂರ್ತಿಯನ್ನು ತಂದು ಅದನ್ನು ಪೂಜಿಸಬೇಕು.

ಯಾರಿಗೆ ಏನಾದರೂ ಕಾರಣದಿಂದ ಮನೆಯಿಂದ ಹೊರಗೆ ಬರುವುದು ಸಾಧ್ಯವಿಲ್ಲವೋ, ಉದಾ. ಕೊರೋನಾದ ಸಾಂಕ್ರಾಮಿಕತೆಯಿಂದ ಅಕ್ಕಪಕ್ಕದ ಪರಿಸರ ಅಥವಾ ಕಟ್ಟಡವನ್ನು ‘ನಿಷೇಧಿತ ವಲಯ ಎಂದು ಘೋಷಿಸಿದ್ದರೆ, ಅಲ್ಲಿಯ ಜನರು ತಮಗೆ ಗಣೇಶತತ್ತ್ವದ ಲಾಭವಾಗಬೇಕೆಂದು ತಮ್ಮ ಮನೆಯಲ್ಲಿನ ಗಣೇಶನ ಮೂರ್ತಿ ಅಥವಾ ಗಣೇಶನ ಚಿತ್ರದ ಶೋಡಷೋಪಚಾರ ಪೂಜೆಯನ್ನು ಮಾಡಬೇಕು. ಈ ಪೂಜೆಯನ್ನು ಮಾಡುವಾಗ ‘ಪೂಜೆಯ ‘ಪ್ರಾಣಪ್ರತಿಷ್ಠಾಪನೆ ಈ ವಿಧಿಯನ್ನು ಮಾತ್ರ ಮಾಡಬಾರದು, ಇದನ್ನು ಗಮನದಲ್ಲಿಡಬೇಕು.

ಕೊರೋನಾದ ಸಂಕಟದಿಂದ ಯಾರಿಗೆ ಪ್ರತಿವರ್ಷದಂತೆ ಕಲ್ಲುಗಳ ಸ್ವರೂಪದಲ್ಲಿ ಅಥವಾ ಮುಖವಾಡಗಳ ಸ್ವರೂಪದಲ್ಲಿ ಗೌರಿಯ ಪೂಜೆಯನ್ನು ಮಾಡಲು ಸಾಧ್ಯವಿಲ್ಲವೋ, ಅವರು ತಮ್ಮ ಮನೆಯಲ್ಲಿನ ಯಾವುದಾದರೂಂದು ದೇವಿಯ ಮೂರ್ತಿಯ ಅಥವಾ ದೇವಿಯ ಚಿತ್ರದ ಪೂಜೆಯನ್ನು ಮಾಡಬೇಕು.

ವಿಶೇಷ ಸೂಚನೆ

ಗಣೇಶಮೂರ್ತಿಯನ್ನು ತರುವಾಗ, ಹಾಗೆಯೇ ಮೂರ್ತಿಯ ವಿಸರ್ಜನೆಯನ್ನು ಮಾಡುವಾಗ ಮನೆಯ ಕೆಲವೇ ವ್ಯಕ್ತಿಗಳು ಹೋಗಬೇಕು. ಮೂರ್ತಿಯ ವಿಸರ್ಜನೆ ಮಾಡುವಾಗ ತಮ್ಮ ಮನೆಯ ಹತ್ತಿರದ ಕೆರೆ ಅಥವಾ ಬಾವಿಯಲ್ಲಿ ವಿಸರ್ಜನೆ ಮಾಡಬೇಕು. ಈ ಸಮಯದಲ್ಲಿ ಜನಜಂಗುಳಿಯಾಗುವ ಅಪಾಯ ಹೆಚ್ಚಿರುವುದರಿಂದ ಕೊರೋನಾ ಸಂದರ್ಭದಲ್ಲಿ ಸರಕಾರವು ಹೇಳಿರುವ ಮಾರ್ಗದರ್ಶಕ ಅಂಶಗಳನ್ನು ಚಾಚು ತಪ್ಪದೇ ಪಾಲಿಸುವುದು ನಮ್ಮೆಲ್ಲರ ಆದ್ಯಕರ್ತವ್ಯವೇ ಆಗಿದೆ. – ಶ್ರೀ. ದಾಮೋದರ ವಝೆ, ಸಂಚಾಲಕರು, ಸನಾತನ ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೭.೨೦೨೦)