‘ಸಾವರಕರ ಇವರಿಗೆ ೧೯೨೪ ರಲ್ಲಿ ಬ್ರಿಟೀಶರಿಂದ ಪ್ರತಿ ತಿಂಗಳು ೬೦ ರೂಪಾಯಿ ಏಕೆ ಸಿಗುತ್ತಿತ್ತು ?’

ಸ್ವಾತಂತ್ರ್ಯವೀರ ಸಾವರಕರರ ಮೇಲೆ ಕೆಸರೆರಚಿದ ಹಿಂದೂದ್ವೇಷಿ ಕಾಂಗ್ರೆಸ್ ನಾಯಕಿ ಅರ್ಚನಾ ದಾಲಮಿಯಾ

ಸ್ವತಃ ಐಷಾರಾಮಿಯಾಗಿರುವ ಕಾಂಗ್ರೆಸ್ಸಿನ ಅಂದಿನ ಹಾಗೂ ಇಂದಿನ ನಾಯಕರಿಗೆ ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಕ್ರಾಂತಿಕಾರರ ಬೆಲೆ ಹೇಗೆ ತಿಳಿಯಬಹುದು ? ಇಂತಹ ಹಿಂದೂದ್ವೇಷಿ ಕಾಂಗ್ರೆಸ್ ಕಾಲಾಂತರದಲ್ಲಿ ನಾಮಾವಶೇಷವಾಗಲಿದೆ ಹಾಗೂ ಸಾವರಕರರು ಮಾತ್ರ ಅಜರಾಮರರಾಗಿರುವರು, ಇದನ್ನು ಕಾಂಗ್ರೆಸ್‌ನವರು ಗಮನದಲ್ಲಿಡಬೇಕು !

ಸ್ವಾತಂತ್ರ್ಯವೀರ ಸಾವರಕರರ ಮೇಲೆ ಕೆಸರೆರಚುವ ಮೊದಲು ರಾಜೀವ ಗಾಂಧಿ ಫೌಂಡೇಶನ್‌ಗೆ ಚೀನಾವು ಏಕೆ ಹಣ ನೀಡಿತ್ತು ?, ಇದನ್ನೂ ಕಾಂಗ್ರೆಸ್ ನಾಯಕರು ಹೇಳಬೇಕು !

ಅರ್ಚನಾ ದಾಲ್ಮಿಯಾ

ನವ ದೆಹಲಿ – ‘೧೯೨೪ ರಲ್ಲಿ ಸಾವರಕರ ಇವರಿಗೆ ಆಂಗ್ಲರಿಂದ ಪ್ರತಿ ತಿಂಗಳು ೬೦ ರೂಪಾಯಿ ಪೆನ್ಶನ್ ಏಕೆ ಸಿಗುತ್ತಿತ್ತು ? ಎಂಬುದರ ಬಗ್ಗೆ ಯಾರಾದರು ಹೇಳಬಹುದೇ ?, ಎಂದು ಕಾಂಗ್ರೆಸ್ ನಾಯಕಿ ಅರ್ಚನಾ ದಾಲಮಿಯಾ ಇವರು ‘ಟ್ವೀಟ್’ ಮಾಡಿ ಪ್ರಶ್ನಿಸಿದ್ದಾರೆ.