ರಾಜ್ಯಪಾಲರ ಒಪ್ಪಿಗೆಯೊಂದಿಗೆ ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ವಿರುದ್ಧ ಕಾನೂನನು ಜಾರಿಗೆ

ಉತ್ತರ ಪ್ರದೇಶ ಸರಕಾರ ಸಮ್ಮತಿಸಿದ ‘ಲವ್ ಜಿಹಾದ್’ ವಿರುದ್ಧ ಸುಗ್ರೀವಾಜ್ಞೆಯ ಕರಡನ್ನು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರಿಗೆ ಅನುಮೋದನೆಗಾಗಿ ಕಳುಹಿಸಿತ್ತು. ರಾಜ್ಯಪಾಲರು ಇದಕ್ಕೆ ಸಹಿ ಹಾಕಿ ಒಪ್ಪಿಗೆ ನೀಡಿದ್ದಾರೆ. ಆದ್ದರಿಂದ ನವೆಂಬರ್ ೨೮ ರಿಂದ ಈ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಈಗ ಈ ಸುಗ್ರೀವಾಜ್ಞೆಯನ್ನು ವಿಧಾನಸಭೆಯ ಉಭಯ ಸದನಗಳಲ್ಲಿ ೬ ತಿಂಗಳೊಳಗೆ ಅಂಗೀಕರಿಸಬೇಕಾಗಿದೆ.

ಜನರು ಮಾಸ್ಕಅನ್ನು ಸರಿಯಾಗಿ ಧರಿಸದಿದ್ದರೆ, ಮಾರ್ಗಸೂಚಿಗಳ ಉಪಯೋಗ ಏನು ? – ಸರ್ವೋಚ್ಚ ನ್ಯಾಯಾಲಯ

ಹೆಚ್ಚಿನ ಜನರು ಮಾಸ್ಕ್‌ಗಳನ್ನು ಸರಿಯಾಗಿ ಧರಿಸದಿದ್ದರೆ, ಇಂತಹ ಮಾರ್ಗಸೂಚಿಗಳ ಉಪಯೋಗ ಏನು ?, ಎಂಬ ಕಟುವಾದ ಶಬ್ಧಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತು. ಗುಜರಾತಿನ ರಾಜಕೋಟದಲ್ಲಿ ಕೊರೋನಾ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ ೬ ರೋಗಿಗಳ ಸಾವನ್ನಪ್ಪಿದ ಪ್ರಕರಣದ ವಿಚಾರಣೆ ನಡೆಸುತ್ತಿರುವಾಗ ನ್ಯಾಯಾಲಯ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

ಝಾರಖಂಡನಲ್ಲಿ ಯುವತಿಯೊಬ್ಬಳನ್ನು ಪ್ರೀತಿ ಬಲೆಗೆ ಸಿಲುಕಿಸಿ ಆಕೆಗೆ ಲೈಂಗಿಕ ಶೋಷಣೆ ಮಾಡಿದ ಮತಾಂಧನ ಬಂಧನ

ಸ್ಥಳೀಯ ಮೆರಾಲ ಗ್ರಾಮದಲ್ಲಿ ವಾಸಿಸುತ್ತಿದ್ದ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ, ಮದುವೆಯ ಆಮೀಷವೊಡ್ಡಿದ ಅಹಮದ ಅನ್ಸಾರಿ ೨ ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ. ಪರಿಣಾಮವಾಗಿ ಅವಳು ಗರ್ಭಿಣಿಯಾದಳು. ನಂತರ ಅವನು ಅವಳನ್ನು ಮದುವೆಯಾಗಲು ನಿರಾಕರಿಸಿದನು.

ಪಾಕಿಸ್ತಾನದಿಂದ ಬಂದ ಹಿಂದೂ ಮತ್ತು ಸಿಖ್ ನಿರಾಶ್ರಿತರಿಗೆ ಭಾರತೀಯ ಪೌರತ್ವ ಸಿಗದೇ ಇದ್ದರಿಂದ ಮತ್ತೆ ಪಾಕಿಸ್ತಾನಕ್ಕೆ ಮರಳಲಿದ್ದಾರೆ !

ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದ ನಂತರವೂ ಪಾಕಿಸ್ತಾನದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದ ಹಿಂದೂಗಳು ಮತ್ತು ಸಿಖ್ಖರಿಗೆ ಭಾರತೀಯ ಪೌರತ್ವ ಸಿಗಲಿಲ್ಲ. ಅದರೊಂದಿಗೆ ಹಣಕಾಸಿನ ತೊಂದರೆಯಿಂದಾಗಿ ಅವರು ಪಾಕಿಸ್ತಾನಕ್ಕೆ ಮರಳಲು ನಿರ್ಧರಿಸಿದ್ದಾರೆ.

‘ಕೌನ್ ಬನೇಗಾ ಕರೋಡಪತಿ’ ಕಾರ್ಯಕ್ರಮದ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದಕ್ಕಾಗಿ ದೂರು

ದೂರದರ್ಶನ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡಪತಿ’ ವಿರುದ್ಧ ಧಾರ್ಮಿಕ ಭಾವನೆಗಳನ್ನು ನೋಯಿಸಿರುವುದರ ವಿರುದ್ಧ ಸಿಕಂದರ್‌ಪುರದ ಆಚಾರ್ಯ ಚಂದ್ರಕಿಶೋರ ಪರಾಶರ್ ಸ್ಥಳೀಯ ಮುಖ್ಯ ಜಿಲ್ಲಾದಂಡಾಧಿಕಾರಿ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಡಿಸೆಂಬರ್ ೩ ರಂದು ವಿಚಾರಣೆ ನಡೆಯಲಿದೆ.

ಹುಡುಗಿ ಅಪ್ರಾಪ್ತೆ ಎಂಬುದನ್ನು ಪೊಲೀಸರು ನಿರಾಕರಿಸಿದರು, ಆದ್ದರಿಂದ ಆಕೆಯನ್ನು ಕರೆದುಕೊಂಡು ಹೋಗಿದ್ದ ಮತಾಂಧ ಯುವಕನಿಗೆ ಜಾಮೀನು

ಇಲ್ಲಿಯ ಅಪ್ರಾಪ್ತ ಬಾಲಕಿಯನ್ನು ಶಾಹಿದ್ ಎಂಬ ಹೆಸರಿನ ಮುಸ್ಲಿಂ ಯುವಕ ಪ್ರೇಮದ ಬಲೆಯಲ್ಲಿ ಸಿಲುಕಿಸಿ ಆಕೆಯನ್ನು ಅಪಹರಿಸಿದ್ದಾನೆ. ಈ ಪ್ರಕರಣದಲ್ಲಿ ಆತನನ್ನು ಬಂಧಿಸಿದನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಹೊರಗೆ ಬಂದ ನಂತರ ಆತ ಮತ್ತೆ ಆ ಬಾಲಕಿಯನ್ನು ಅಪಹರಿಸಿದ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರಿನಲ್ಲಿ ಲಷ್ಕರ್-ಎ-ತೋಯಬಾ ಮತ್ತು ತಾಲಿಬಾನ್ ಬೆಂಬಲವಾಗಿ ಗೋಡೆ ಬರಹ ಪತ್ತೆ

೨೦೦೮ ರ ಮುಂಬಯಿನ ಭಯೋತ್ಪಾದಕ ದಾಳಿಯ ೧೨ ನೇ ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ಲಷ್ಕರ್-ಎ-ತೋಯಬಾ ಮತ್ತು ತಾಲಿಬಾನ್ ಭಯೋತ್ಪಾದಕ ಸಂಘಟನೆಗಳ ಬೆಂಬಲವಾಗಿ ಮಂಗಳೂರಿನ ವಸತಿ ಕಟ್ಟಡವೊಂದರ ಗೋಡೆಯ ಮೇಲೆ ಪ್ರಚೋದನಕಾರಿ ಬರಹವೊಂದು ಬರೆದಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಬರೆದವರನ್ನು ಹುಡುಕುತ್ತಿದ್ದಾರೆ.

ಹಿಂದೂ ವಿರೋಧಿ ಕಾರ್ಯಕರ್ತೆ ರೆಹಾನಾ ಫಾತಿಮಾ ‘ಗೋಮಾತೆ’ ಪದ ಬಳಸುವುದನ್ನು ನಿಷೇಧಿಸಿದೆ !

‘ಗೋಮಾತೆ’ ಎಂಬ ಪದವನ್ನು ಯಾವುದೇ ಮಾಧ್ಯಮದಲ್ಲಿ ಬಳಸದಂತೆ ಕೇರಳ ಉಚ್ಚನ್ಯಾಯಾಲಯ ಹಿಂದೂದ್ವೇಷಿ ಕಾರ್ಯಕರ್ತೆ ರೆಹಾನಾ ಫಾತಿಮಾಳನ್ನು ಆದೇಶಿಸಿದೆ. ಫಾತಿಮಾ ಇನ್ನು ಮುಂದೆ ಗೋಮಾತೆಯ ಬಗ್ಗೆ ಯಾವುದೇ ಅಭಿಪ್ರಾಯ ಅಥವಾ ಟಿಪ್ಪಣೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಫಾತಿಮಾ ಸ್ವಲ್ಪ ಸಮಯದ ಹಿಂದೆ ಗೋಮಾಂಸದಿಂದ ತಯಾರಿಸಿದ ತಿಂಡಿಯನ್ನು ‘ಗೋಮಾತಾ’ ಎಂದು ಉಲ್ಲೇಖಿಸಿದ್ದರು.

ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ಸಭೆಯಲ್ಲಿ ಕಾಶ್ಮೀರದ ಕುರಿತು ಚರ್ಚಿಸಲಾಗುವುದಿಲ್ಲ !

‘ಆರ್ಗನೈಜೆಶನ್ ಆಫ್ ಇಸ್ಲಾಮಿಕ್ ಕೊಆಪರೇಶನ್’ (ಒ.ಐ.ಸಿ.), ಇಸ್ಲಾಮಿ ದೇಶಗಳ ಸಂಘಟನೆಯ ಸಭೆಯಲ್ಲಿ ಕಾಶ್ಮೀರ ಕುರಿತು ಚರ್ಚಿಸಲಾಗುವುದಿಲ್ಲ. ಸಭೆಯ ಸೂಚಿಯಲ್ಲಿ ಈ ವಿಷಯವನ್ನು ಇಟ್ಟುಕೊಂಡಿಲ್ಲ. ಆದ್ದರಿಂದ ಪಾಕಿಸ್ತಾನ ಮತ್ತೊಮ್ಮೆ ಮುಜುಗರ ಉಂಟಾಗಿದೆ.

ತುಂಡುಡುಗೆಯ ಮೇಲೆ ಗಣಪತಿಯ ಚಿತ್ರಕ್ಕೆ ಬ್ರೆಜಿಲ್‌ನ ಸಂಸ್ಥೆಯಿಂದ ಕ್ಷಮಾಯಾಚನೆ !

ದಕ್ಷಿಣ ಅಮೆರಿಕಾದ ಬ್ರಾಜಿಲ್‌ನಲ್ಲಿ ಹಿಂದೂಗಳ ಸಂಘಟಿತ ವಿರೋಧದಿಂದಾಗಿ, ಇಲ್ಲಿಯ ‘ಜಾನ್ ಕೊಟ್ರೆ’ ಸಂಸ್ಥೆಯು ಪ್ರಸಾರ ಮಾಡಿದ್ದ ಗಣಪತಿಯ ವಿಡಂಬನಾತ್ಮಕ ಜಾಹೀರಾತುಗಳನ್ನು ಹಿಂಪಡೆದಿದೆ. ಈ ಜಾಹೀರಾತಿನಲ್ಲಿ ಪುರುಷರು ಮತ್ತು ಮಹಿಳೆಯರು ಗಣಪತಿಯ ಚಿತ್ರವಿರುವ ತುಂಡುಬಟ್ಟೆಗಳನ್ನು ಧರಿಸಿರುವುದನ್ನು ತೋರಿಸಲಾಗಿದೆ.