ದೂರಿನಲ್ಲಿ ಅಮಿತಾಬ್ ಬಚ್ಚನ್ ಸೇರಿದಂತೆ ೭ ಜನರ ಹೆಸರುಗಳು
ಮುಜಫ್ಫರಪುರ್ (ಬಿಹಾರ) – ದೂರದರ್ಶನ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡಪತಿ’ ವಿರುದ್ಧ ಧಾರ್ಮಿಕ ಭಾವನೆಗಳನ್ನು ನೋಯಿಸಿರುವುದರ ವಿರುದ್ಧ ಸಿಕಂದರ್‌ಪುರದ ಆಚಾರ್ಯ ಚಂದ್ರಕಿಶೋರ ಪರಾಶರ್ ಸ್ಥಳೀಯ ಮುಖ್ಯ ಜಿಲ್ಲಾದಂಡಾಧಿಕಾರಿ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ. ಇದರಲ್ಲಿ ನಟ ಅಮಿತಾಬ್ ಬಚ್ಚನ್, ನಿರ್ದೇಶಕ ಅರುಣೇಶ ಕುಮಾರ, ರಾಹುಲ ವರ್ಮಾ, ವಾಹಿನಿಯ ಅಧ್ಯಕ್ಷ ಮನಜೀತ್ ಸಿಂಗ್, ಸಿ.ಇ.ಒ. ಎನ್.ಪಿ. ಸಿಂಗ್ ಹಾಗೂ ಭಾಗವಹಿಸಿದ ಸ್ಪರ್ಧಿ ಬೆಜವಾರಾ ವಿಲ್ಸನ್ ಇತರ ಏಳು ಸ್ಪರ್ಧಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಈ ಬಗ್ಗೆ ಡಿಸೆಂಬರ್ ೩ ರಂದು ವಿಚಾರಣೆ ನಡೆಯಲಿದೆ.
(ಸೌಜನ್ಯ : Muzaffarpur Now)
ಅಕ್ಟೋಬರ್ ೩೦ ರಂದು ನಡೆದ ಕಾರ್ಯಕ್ರಮದಲ್ಲಿ ಬೆಜವಾರಾ ವಿಲ್ಸನ್ ಸ್ಪರ್ಧಿಯಾಗಿದ್ದಾಗ ಅಮಿತಾಬ್ ಬಚ್ಚನ್ ೬೪ ಲಕ್ಷ ರೂಪಾಯಿಗಳಿಗೆ ‘ಸಪ್ಟೆಂಬರ ೨೫, ೧೯೨೭ ರಂದು ಡಾ. ಭೀಮರಾವ ಅಂಬೇಡಕರ ಇವರ ಅನುಯಾಯಿ ಯಾವ ಧರ್ಮಗ್ರಂಥದ ಪುಟಗಳನ್ನು ಸುಟ್ಟಿದ್ದರು ?’ ಈ ಪ್ರಶ್ನೆಯ ಉತ್ತರಕ್ಕಾಗಿ ‘ವಿಷ್ಣು ಪುರಾಣ, ಭಗವದ್ಗೀತೆ. ಋಗ್ವೇದ ಹಾಗೂ ಮನುಸ್ಮೃತಿ’ ಹೀಗೆ ೪ ಪರ್ಯಾಯಗಳನ್ನು ನೀಡಲಾಗಿತ್ತು. ಉದ್ದೇಶಪೂರ್ವಕವಾಗಿ ಈ ಪ್ರಶ್ನೆಯನ್ನು ಕೇಳುವ ಮೂಲಕ ಹಿಂದೂಗಳ ಭಾವನೆಗಳನ್ನು ನೋಯಿಸುವ ಪ್ರಯತ್ನ ಮಾಡಲಾಯಿತು ಎಂದು ಆರೋಪಿಸಲಾಗಿದೆ.