ಬ್ರಾಜಿಲ್‌ನಲ್ಲಿ ಹಿಂದೂಗಳ ಸಂಘಟಿತ ವಿರೋಧದ ಪರಿಣಾಮ !
|
ನವ ದೆಹಲಿ – ದಕ್ಷಿಣ ಅಮೆರಿಕಾದ ಬ್ರಾಜಿಲ್‌ನಲ್ಲಿ ಹಿಂದೂಗಳ ಸಂಘಟಿತ ವಿರೋಧದಿಂದಾಗಿ, ಇಲ್ಲಿಯ ‘ಜಾನ್ ಕೊಟ್ರೆ’ ಸಂಸ್ಥೆಯು ಪ್ರಸಾರ ಮಾಡಿದ್ದ ಗಣಪತಿಯ ವಿಡಂಬನಾತ್ಮಕ ಜಾಹೀರಾತುಗಳನ್ನು ಹಿಂಪಡೆದಿದೆ. ಈ ಜಾಹೀರಾತಿನಲ್ಲಿ ಪುರುಷರು ಮತ್ತು ಮಹಿಳೆಯರು ಗಣಪತಿಯ ಚಿತ್ರವಿರುವ ತುಂಡುಬಟ್ಟೆಗಳನ್ನು ಧರಿಸಿರುವುದನ್ನು ತೋರಿಸಲಾಗಿದೆ.
.@rajanzed, an Indian religious leader, said “Lord Ganesh was meant to be worshipped in temples or home shrines and not to adorn one’s thighs, hips, groin, buttocks, genitals and pelvis.” @htTweets https://t.co/AfyjSLcSjd
— HT Life&Style (@htlifeandstyle) November 21, 2020
ಈ ಜಾಹೀರಾತು ಬಂದಾಗಿನಿಂದ ಸಂಸ್ಥೆಗೆ ವಿರೋಧ ಪ್ರಾರಂಭವಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಬ್ರಾಜಿಲ್‌ನ ಹಿಂದೂಗಳು ಜಾಹೀರಾತನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಹೆಚ್ಚುತ್ತಿರುವ ಹಿಂದೂಗಳ ವಿರೋಧವನ್ನು ಗಮನಿಸಿದ ಬ್ರಾಜಿಲ್‌ನ ಭಾರತದ ರಾಯಭಾರಿ ಸುರೇಶ್ ರೆಡ್ಡಿ ಕೂಡ ಈ ಸಂಸ್ಥೆಯನ್ನು ಸಂಪರ್ಕಿಸಿ ಸೂತ್ರವು ಸೂಕ್ಷ್ಮವಾಗಿದೆ ಎಂದು ಹೇಳಿದರು. ಹೆಚ್ಚುತ್ತಿರುವ ವಿರೋಧದ ನಂತರ, ಸಂಸ್ಥೆಯು ಜಾಹೀರಾತನ್ನು ತೆಗೆದುಹಾಕಿತು ಮತ್ತು ಹಿಂದೂಗಳಲ್ಲಿ ಕ್ಷಮೆಯಾಚಿಸಿತು. ಅದೆರೀತಿ ಈ ‘ತುಂಡುಬಟ್ಟೆ’ಗಳ ಉತ್ಪಾದನೆಯನ್ನು ಸಹ ನಿಲ್ಲಿಸಲಾಗಿದೆ ಎಂದು ಸಾವೊ ಪಾವುಲೊದಲ್ಲಿನ ಸಂಸ್ಥೆಯ ಕಚೇರಿ ತಿಳಿಸಿದೆ.