ವೇದಾಂತಗಳ ಮಹತ್ವವನ್ನು ಜಗತ್ತಿಗೆ ತಲುಪಿಸುವ ಬ್ರಾಝಿಲ್‌ನ ಜೊನಾಸ ಮಸೆಟಿ ಅಲಿಯಾಸ್ ‘ವಿಶ್ವನಾಥ’

ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿ ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಬ್ರಾಝಿಲ್‌ನ ಜೊನಸ್ ಮಾಸೆಟಿ ಇವರ ಬಗ್ಗೆ ವಿಶೇಷ ಮಾಹಿತಿ ನೀಡಿದ್ದರು. ಭಾರತದಲ್ಲಿ ೪ ವರ್ಷಗಳನ್ನು ಕಳೆದ ನಂತರ ಮಾಸೆಟಿಯವರು ತಂತ್ರಜ್ಞಾನದ ಮೂಲಕ ವೇದಗಳ ಮಹತ್ವವನ್ನು ಜಗತ್ತಿನವರೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಬರೇಲಿಯಲ್ಲಿ ಮುಸಲ್ಮಾನ ಯುವಕನಿಂದ ಹಿಂದೂ ಹೆಸರು ಹೇಳಿಕೊಂಡು ಹಿಂದೂ ಯುವತಿಗೆ ವಂಚನೆ

ಇಲ್ಲಿ ‘ಲವ್ ಜಿಹಾದ್’ನ ಮೊದಲ ಪ್ರಕರಣ ದಾಖಲಾದ ನಂತರ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ತಾಹಿರ ಖಾನ್ ಎಂಬ ಯುವಕನು ಕುನಾಲ್ ಶರ್ಮಾ ಎಂದು ಹೆಸರಿಟ್ಟುಕೊಂಡು ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಎಳೆದು ಲೈಂಗಿಕ ಕಿರುಕುಳ ನೀಡಿದ್ದಾನೆ.

ಶ್ರೀ ಗುರುನಾನಕರ ಜಯಂತಿ ನಿಮಿತ್ತ (ನವೆಂಬರ್ ೩೦)

ಗುರುನಾನಕರು ಸಿಕ್ಖ್ ಪಂಥದ ಸ್ಥಾಪಕರಾಗಿದ್ದಾರೆ. ನಮ್ಮ ಶರೀರವು ಒಂದು ಸುಂದರವಾದ ಹೊಲ. ನಮ್ಮ ಮನಸ್ಸು ರೈತ. ಈಶ್ವರನ ನಾಮವೆಂಬ ಬೀಜವನ್ನು ಈ ಹೊಲದಲ್ಲಿ ಬಿತ್ತಬೇಕು. ಪ್ರೇಮದಿಂದಲೇ ಈ ಬೀಜಗಳು ಮೊಳಕೆಯೊಡೆಯುತ್ತವೆ, ಅರಳುತ್ತವೆ ಹಾಗೂ ಫಲ ನೀಡುತ್ತವೆ. ನನ್ನ ಹೊಲದಿಂದ ನಾನು ಈ ರೀತಿಯಲ್ಲಿ ನನ್ನ ಕುಟುಂಬಕ್ಕೆ ಸಾಕಷ್ಟು ಆದಾಯ ದೊರಕುವಷ್ಟು ಫಸಲು ತೆಗೆಯುತ್ತೇನೆ’ ಇವು ಗುರುನಾನಕರ ಬೋಧನೆಯಾಗಿದೆ.

ಹಿಂದೂ ಸಂಘಟನೆ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ ಇವುಗಳಿಗಾಗಿ ಹಿಂದೂ ಜನಜಾಗೃತಿ ಸಮಿತಿ

ಈಗಿನ ಪರಿಸ್ಥಿತಿ ನೋಡಿದರೆ ಹಿಂದೂ ಯುವಕ-ಯುವತಿಯರು ಪಾಶ್ಚಾತ್ಯ ಅಂಧಾನುಕರಣೆಯಿಂದ ಹಿಂದೂ ಧರ್ಮದಿಂದ ದೂರ ಹೋಗುತ್ತಿದ್ದಾರೆ. ಇದರಿಂದಾಗಿ ಲವ್ ಜಿಹಾದ್ ಮತ್ತು ಬೌದ್ಧಿಕವಾಗಿ ಮತಾಂತರ ಆಗುತ್ತಿರುವುದು ಗಮನಕ್ಕೆ ಬರುತ್ತಿದೆ. ಪ್ರತ್ಯಕ್ಷದಲ್ಲಿ ಭಾರತದ ಇತಿಹಾಸವನ್ನು ನೋಡಿದಾಗ ನಮಗೆ ತಿಳಿಯುವುದೇನೆಂದರೆ ಹಿಂದೂ ಧರ್ಮದ ಆಚರಣೆ ಮಾಡುವಂತಹ ಮಹಾಪರಾಕ್ರಮಿ ರಾಜರ ರಕ್ತದ ಕಣಕಣದಲ್ಲಿ ಶೌರ್ಯ ತುಂಬಿತ್ತು.

ಮಂಗಳೂರಿನಲ್ಲಿ ಲಷ್ಕರ್-ಎ-ತೋಯಬಾ ಮತ್ತು ತಾಲಿಬಾನ್ ಬೆಂಬಲವಾಗಿ ಮತ್ತೊಂದು ಗೋಡೆಯ ಮೇಲೆ ಬರವಣಿಗೆ

ಮುಂಬಯಿ ಮೇಲೆ ೨೬/೧೧ ಜಿಹಾದಿ ಭಯೋತ್ಪಾದಕ ದಾಳಿಯ ೧೨ ನೇ ವರ್ಷ ಪೂರ್ಣವಾದ ನಿಮಿತ್ತ ಇಲ್ಲಿ ಗೋಡೆಯ ಮೇಲೆ ಪ್ರಚೋದನಕಾರಿ ಬರಹ ಬರೆಯಲಾಗಿತ್ತು. ನಂತರ ಪೊಲೀಸರು ಅದನ್ನು ಅಳಿಸಿಹಾಕಿ ಅಜ್ಞಾತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈಗ ಮತ್ತೊಂದು ಸ್ಥಳದಲ್ಲಿ ಅದೇ ರೀತಿಯ ಬರವಣಿಗೆ ಬರೆದಿರುವುದು ಬೆಳಕಿಗೆ ಬಂದಿದೆ.

ಬರೇಲಿಯಲ್ಲಿ ಲವ್ ಜಿಹಾದ್ ವಿರೋಧಿ ಮೊದಲನೇಯ ಅಪರಾದ ದಾಖಲು

ಉತ್ತರಪ್ರದೇಶ ಸರಕಾರ ಲವ್ ಜಿಹಾದ್ ವಿರೋಧಿ ಕಾನೂನನ್ನು ಜಾರಿಗೆ ತಂದ ನಂತರ ಮೊದಲ ಪ್ರಕರಣ ಬರೇಲಿಯಲ್ಲಿ ದಾಖಲಿಸಲಾಗಿದೆ. ಹಿಂದೂ ಹುಡುಗಿಯೊಬ್ಬಳನ್ನು ಮದುವೆಗಾಗಿ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಕ್ಕಾಗಿ ಮುಸ್ಲಿಂ ಯುವಕನ ವಿರುದ್ಧ ಹುಡುಗಿಯ ತಂದೆ ದೂರು ನೀಡಿದ ನಂತರ ಈ ಅಪರಾಧವನ್ನು ದಾಖಲಿಸಲಾಗಿದೆ.

‘ನಿಮ್ಮ ಪೀಳಿಗೆ ಕೊನೆಗೊಳ್ಳಬಹುದು; ಆದರೆ ಹೈದರಾಬಾದ್ ಎಂದಿಗೂ ಭಾಗ್ಯನಗರ ಆಗುವುದಿಲ್ಲ !’- ಅಸದುದ್ದೀನ್ ಒವೈಸಿ

ನಿಮ್ಮ ಇಡೀ ಪೀಳಿಗೆ ಮುಗಿಯಬಹುದು; ಆದರೆ ನಗರದ ಹೆಸರು ಹೈದರಾಬಾದ್ ಆಗಿ ಉಳಿಯುತ್ತದೆ. ಚುನಾವಣೆ ಹೈದರಾಬಾದ್ ಮತ್ತು ಭಾಗ್ಯನಗರಗಳ ನಡುವೆ ಇದೆ. ಹೈದರಾಬಾದ್ ಹೆಸರನ್ನು ಬದಲಾಯಿಸಬಾರದು ಎಂದು ನೀಮಗೆ ಅನಿಸುತ್ತಿದ್ದರೆ, ನೀವು ಎಂ.ಐ.ಎಂ.ಗೆ ಮತ ಚಲಾಯಿಸಿ, ಎಂದು ಎಂ.ಐ.ಎಂನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಒವೈಸಿ ಕರೆ ನೀಡಿದ್ದಾರೆ.

ಗಾಜಿಪುರದಲ್ಲಿ (ದೆಹಲಿ) ಗೋಹತ್ಯೆ ಮಾಡಿ ಎಸೆದ ಗೋವುಗಳ ತಲೆಗಳನ್ನು ತೋರಿಸುವ ವೀಡಿಯೋ ಪ್ರಸಾರ

ಇಲ್ಲಿಯ ಗಾಜಿಪುರದಲ್ಲಿ ೪-೫ ಹಸುಗಳ ಕತ್ತರಿಸಿದ ರುಂಡಗಳು ಪತ್ತೆಯಾಗಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಂತಹ ಘಟನೆಗಳು ಇಲ್ಲಿ ಇದಕ್ಕೂ ಮೊದಲು ನಡೆದಿವೆ; ಆದರೆ ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಿಂದೂಗಳು ಆರೋಪಿಸಿದ್ದಾರೆ.

ಪಾಕಿಸ್ತಾನದಲ್ಲಿ ಸರಕಾರ ಹಿಂದೂಗಳ ಮನೆಗಳನ್ನು ಮತ್ತೆ ಕೆಡವಿತು

ಸಿಂಧ್ ಪ್ರಾಂತ್ಯದ ಭಿಲ್ ಜಾತಿಯ ಹಿಂದೂಗಳ ಅನೇಕ ಮನೆಗಳನ್ನು ಸರಕಾರ ನೆಲಸಮ ಮಾಡಿದೆ. ಈ ಘಟನೆಯ ವಿಡಿಯೋ ಪ್ರಸಾರವಾದ ನಂತರ ಈ ಕ್ರಮವನ್ನು ನಿಲ್ಲಿಸಲಾಗಿದೆ; ಆದರೆ ಮತಾಂಧರು ಈ ಮನೆಯಲ್ಲಿದ್ದ ಹಿಂದೂಗಳನ್ನು ಅಲ್ಲಿಂದ ಪಲಾಯನ ಮಾಡುವಂತೆ ಮಾಡಿದ್ದಾರೆ.

ದೆಹಲಿಯ ಶಿವಶಕ್ತಿ ದೇವಸ್ಥಾನದಲ್ಲಿ ೧೨ ಕ್ಕೂ ಹೆಚ್ಚು ವಿಗ್ರಹಗಳು ಧ್ವಂಸ

ಸ್ಥಳೀಯ ಕೈಲಾಶ ವಿಹಾರ್ ಪನ್ಸಾರಿ ಪ್ರದೇಶದ ಶಿವಶಕ್ತಿ ದೇವಸ್ಥಾನದಲ್ಲಿ ವಿಗ್ರಹಗಳನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ. ಈ ದೇವಾಲಯದಲ್ಲಿ ೧೨ ಕ್ಕೂ ಹೆಚ್ಚು ವಿಗ್ರಹಗಳನ್ನು ಒಡೆಯಲಾಗಿದ್ದು, ತಲೆಗಳನ್ನು ಕಡಿಯಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಿಲ್ಲ.