ಹುಡುಗಿ ಅಪ್ರಾಪ್ತೆ ಎಂಬುದನ್ನು ಪೊಲೀಸರು ನಿರಾಕರಿಸಿದರು, ಆದ್ದರಿಂದ ಆಕೆಯನ್ನು ಕರೆದುಕೊಂಡು ಹೋಗಿದ್ದ ಮತಾಂಧ ಯುವಕನಿಗೆ ಜಾಮೀನು

ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಅವನು ಮತ್ತೆ ಹುಡುಗಿಯನ್ನು ಕರೆದುಕೊಂಡು ಓಡಿಹೋದನು !

ಒಂದು ಕಡೆ ಉತ್ತರ ಪ್ರದೇಶ ಸರಕಾರವು ‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸುತ್ತಿದ್ದರೆ, ಮತ್ತೊಂದೆಡೆ, ಪೊಲೀಸರು ಅದಕ್ಕೆ ಸೊಪ್ಪುಹಾಕುತ್ತಿದ್ದಾರೆ ! ಇದರಿಂದ ಮತಾಂಧರ ಮೇಲೆ ಎಂದಾದರೂ ಹಿಡಿತ ಸಾಧಿಸಬಹುದೇ ?

ಭದೋಹಿ (ಉತ್ತರ ಪ್ರದೇಶ) – ಇಲ್ಲಿಯ ಅಪ್ರಾಪ್ತ ಬಾಲಕಿಯನ್ನು ಶಾಹಿದ್ ಎಂಬ ಹೆಸರಿನ ಮುಸ್ಲಿಂ ಯುವಕ ಪ್ರೇಮದ ಬಲೆಯಲ್ಲಿ ಸಿಲುಕಿಸಿ ಆಕೆಯನ್ನು ಅಪಹರಿಸಿದ್ದಾನೆ. ಈ ಪ್ರಕರಣದಲ್ಲಿ ಆತನನ್ನು ಬಂಧಿಸಿದನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಹೊರಗೆ ಬಂದ ನಂತರ ಆತ ಮತ್ತೆ ಆ ಬಾಲಕಿಯನ್ನು ಅಪಹರಿಸಿದ ಘಟನೆ ಬೆಳಕಿಗೆ ಬಂದಿದೆ.

ಬಾಲಕಿ ಅಪ್ರಾಪ್ತೆ ಎಂದು ಆಕೆಯ ಪೋಷಕರು ಹೇಳಿದ್ದರೂ, ಪೊಲೀಸರು ಒಪ್ಪಿಕೊಂಡಿಲ್ಲ ಮತ್ತು ಆತನ ಮೇಲೆ ಪೊಕ್ಸೊ ಕಾಯ್ದೆಯಡಿಯಲ್ಲು ಯಾವುದೇ ಪ್ರಕರಣ ದಾಖಲಾಗಿಲ್ಲ. ಅದಕ್ಕಾಗಿಯೇ ಆತನಿಗೆ ಜಾಮೀನು ಸಿಕ್ಕಿತು ಮತ್ತು ಹೊರಬಂದನು. ಅವಕಾಶದ ದುರುಪಯೋಗ ಮಾಡಿದ ಆತ ಮತ್ತೆ ಬಾಲಕಿಯನ್ನು ಅಪಹರಿಸಿದ್ದಾನೆ. ಈಗಲೂ ಸಹ ಆತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಯಾವುದೇ ದೂರು ದಾಖಲಾಗಿಲ್ಲ. ತನಿಖೆ ನಡೆಸುತ್ತಿರುವ ಪೊಲೀಸರು ಮತ್ತು ವೈದ್ಯಕೀಯ ತಂಡದವರು ಒಪ್ಪಂದ ಮಾಡಿಕೊಂಡಿದ್ದರಿಂದ ಬಾಲಕಿಯ ವಯಸ್ಸು ೧೮ ರಿಂದ ೨೦ ವರ್ಷಗಳು ಎಂದು ಹೇಳಿದ್ದಾರೆ, ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.