ಪಾಕಿಸ್ತಾನದಿಂದ ಬಂದ ಹಿಂದೂ ಮತ್ತು ಸಿಖ್ ನಿರಾಶ್ರಿತರಿಗೆ ಭಾರತೀಯ ಪೌರತ್ವ ಸಿಗದೇ ಇದ್ದರಿಂದ ಮತ್ತೆ ಪಾಕಿಸ್ತಾನಕ್ಕೆ ಮರಳಲಿದ್ದಾರೆ !

ಪಾಕಿಸ್ತಾನದ ಹಿಂದೂಗಳ ಹಾಗೂ ಸಿಖ್ಖರ ಮೇಲೆ ಅತ್ಯಾಚಾರ ಆಗುತ್ತಿದೆ ಆದ್ದರಿಂದ ಅವರು ಭಾರತದಲ್ಲಿ ನಿರಾಶ್ರಿತರಾಗಿ ಬರುತ್ತಾರೆ. ಹೀಗಿದ್ದರೂ ಅವರಿಗೆ ಪೌರತ್ವ ಸಿಗದಿರುವುದು ದುರದೃಷ್ಟಕರ. ಇದನ್ನು ಕೇಂದ್ರ ಸರಕಾರ ಮರುಪರಿಶೀಲಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ನವ ದೆಹಲಿ – ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದ ನಂತರವೂ ಪಾಕಿಸ್ತಾನದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದ ಹಿಂದೂಗಳು ಮತ್ತು ಸಿಖ್ಖರಿಗೆ ಭಾರತೀಯ ಪೌರತ್ವ ಸಿಗಲಿಲ್ಲ. ಅದರೊಂದಿಗೆ ಹಣಕಾಸಿನ ತೊಂದರೆಯಿಂದಾಗಿ ಅವರು ಪಾಕಿಸ್ತಾನಕ್ಕೆ ಮರಳಲು ನಿರ್ಧರಿಸಿದ್ದಾರೆ.

ಒಟ್ಟು ೨೪೩ ಪಾಕಿಸ್ತಾನಿ ಪ್ರಜೆಗಳಿಗೆ ಮರಳಲು ಅನುಮತಿ ನೀಡಲಾಗಿದೆ. ಅವರು ಅಟಾರಿ ಗಡಿಯಿಂದ ಮತ್ತೆ ಪಾಕಿಸ್ತಾನಕ್ಕೆ ಹಿಂತಿರುಗುತ್ತಿದ್ದಾರೆ.