ಮಂಗಳೂರಿನಲ್ಲಿ ಲಷ್ಕರ್-ಎ-ತೋಯಬಾ ಮತ್ತು ತಾಲಿಬಾನ್ ಬೆಂಬಲವಾಗಿ ಗೋಡೆ ಬರಹ ಪತ್ತೆ

ಇಂತಹ ರಾಷ್ಟ್ರ ವಿರೋಧಿ ಬರಹಗಳನ್ನು ಬರೆಯುವವರನ್ನು ಹುಡುಕಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !

ಮಂಗಳೂರು – ೨೦೦೮ ರ ಮುಂಬಯಿನ ಭಯೋತ್ಪಾದಕ ದಾಳಿಯ ೧೨ ನೇ ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ಲಷ್ಕರ್-ಎ-ತೋಯಬಾ ಮತ್ತು ತಾಲಿಬಾನ್ ಭಯೋತ್ಪಾದಕ ಸಂಘಟನೆಗಳ ಬೆಂಬಲವಾಗಿ ಮಂಗಳೂರಿನ ವಸತಿ ಕಟ್ಟಡವೊಂದರ ಗೋಡೆಯ ಮೇಲೆ ಪ್ರಚೋದನಕಾರಿ ಬರಹವೊಂದು ಬರೆದಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಬರೆದವರನ್ನು ಹುಡುಕುತ್ತಿದ್ದಾರೆ.

೧. “ನಮ್ಮನ್ನು ಪ್ರಚೋದಿಸಿದರೆ, ನಾವು ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳನ್ನು ಕರೆಸುವೆವು”, ಎಂದು ಬೆದರಿಕೆಯನ್ನು ನೀಡಲಾಗಿದೆ. “ಇನ್ನು ಮುಂದೆ ರಾ.ಸ್ವ.ಸಂಘ ಹಾಗೂ ಮನುವಾದಿಗಳನ್ನು ಎದುರಿಸಲು ಲಷ್ಕರ್-ಎ-ತೋಯಿಬಾ ಮತ್ತು ತಾಲಿಬಾನ್‌ನನ್ನು ಆಹ್ವಾನಿಸುವಂತೆ ನಮ್ಮನ್ನು ಮಾಡದಿರಿ. # ಲಷ್ಕರ್ ಜಿಂದಾಬಾದ್’, ಎಂದು ಬರೆಯಲಾಗಿದೆ.

೨. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಬರವಣಿಗೆಯನ್ನು ಅಳಿಸಿ ಹಾಕಿದರು. ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡಲು ಮತ್ತು ಆಸ್ತಿಗೆ ಹಾನಿ ಮಾಡಿದ್ದಕ್ಕಾಗಿ ಅಪರಾಧಗಳನ್ನು ನೋಂದಾಯಿಸಲಾಗಿದೆ.