ಬೆಂಗಳೂರಿನ ೨ ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದ ಉಂಟಾಗುವ ಶಬ್ದಮಾಲಿನ್ಯ ತಡೆದ ಬೆಂಗಳೂರು ಉಚ್ಚನ್ಯಾಯಾಲಯದ ನ್ಯಾಯವಾದಿ ಜಿ. ಎಂ. ನಟರಾಜ!

ನ್ಯಾಯವಾದಿ ನಟರಾಜ ಹಾಗೂ ಅನೇಕ ವಕೀಲರ ಕಚೇರಿಗಳು ಮಲ್ಲೇಶ್ವರಂನಲ್ಲಿದೆ. ಅಲ್ಲಿಂದ ೧ ಕಿ.ಮೀ ದೂರದಲ್ಲಿ ೨ ಮಸೀದಿಗಳಿವೆ. ಈ ಮಸೀದಿಯಲ್ಲಿ ಧ್ವನಿವರ್ಧಕದಿಂದ ಬೆಳಗ್ಗೆ ೫.೩೦ ರಿಂದ ರಾತ್ರಿ ೮.೩೦ ರ ವರೆಗೆ ೫ ಸಲ ಆಜಾನ್ ನೀಡಲಾಗುತ್ತಿದ್ದು ಶಬ್ದ ಮಾಲಿನ್ಯ ಆಗುತ್ತಿತ್ತು.

ಅಯೋಧ್ಯೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಮರ್ಯಾದಾ ಪುರುಷೋತ್ತಮ ಶ್ರೀರಾಮ್’ ಎಂದು ಹೆಸರು !

ಅಯೋಧ್ಯೆಯಲ್ಲಿ ನಿರ್ಮಿಸಲಾಗುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ‘ಮರ್ಯಾದಾ ಪುರುಷೋತ್ತಮ ಶ್ರೀರಾಮ್ ವಿಮಾನ ನಿಲ್ದಾಣ, ಅಯೋಧ್ಯಾ’ ಎಂದು ಹೆಸರಿಸುವ ಪ್ರಸ್ತಾವನೆಗೆ ಉತ್ತರ ಪ್ರದೇಶ ಸರ್ಕಾರದ ಸಂಪುಟ ಅನುಮೋದನೆ ನೀಡಿದೆ.

ಮೈಸೂರಿನಲ್ಲಿ ದಲಿತನ ಕ್ಷೌರ ಮಾಡಿದ ಕ್ಷೌರದಂಗಡಿಯ ಮಾಲೀಕನಿಗೆ ೫೦ ಸಾವಿರ ದಂಡ ಹಾಗೂ ಸಾಮಾಜಿಕ ಬಹಿಷ್ಕಾರ

ಹಲ್ಲಾರೆ ಗ್ರಾಮದಲ್ಲಿರುವ ಮಲ್ಲಿಕಾರ್ಜುನ್ ಶೆಟ್ಟಿಯವರ ಕ್ಷೌರದಂಗಡಿಯಲ್ಲಿ ದಲಿತ ವ್ಯಕ್ತಿಯೊಬ್ಬರ ಕೂದಲನ್ನು ಕತ್ತರಿಸಿದಕ್ಕೆ ಶೆಟ್ಟಿಯವರಿಗೆ ಗ್ರಾಮಸ್ಥರು ೫೦ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಅದೇರೀತಿ ಇದರಿಂದಾಗಿಯೇ ಕಳೆದ ಕೆಲವು ದಿನಗಳಿಂದ ಶೆಟ್ಟಿ ಹಾಗೂ ಅವರ ಕುಟುಂಬದವರ ಸಾಮಾಜಿಕ ಬಹಿಷ್ಕಾರ ಮಾಡಿದ್ದಾರೆ. ದಲಿತರ ಕೂದಲನ್ನು ಕತ್ತರಿಸಬೇಡಿ ಎಂದು ಶೆಟ್ಟಿಯವರಿಗೆ ಮೊದಲೇ ಹೇಳಲಾಗಿತ್ತು.

‘ನೆಟ್‌ಫ್ಲಿಕ್ಸ್’ನಲ್ಲಿ ಪ್ರಸಾರವಾಗುವ ‘ಲುಡೋ’ ಚಲನಚಿತ್ರದಲ್ಲಿಯೂ ಹಿಂದೂ ದೇವತೆಗಳ ವಿಡಂಬನೆ !

ಎ ಸೂಟಬಲ್ ಬಾಯ್’ ಎಂಬ ವೆಬ್ ಸರಣಿಯು ಮುಸ್ಲಿಂ ಹುಡುಗನೊಬ್ಬ ದೇವಾಲಯದ ಆವರಣದಲ್ಲಿ ಹಿಂದೂ ಹುಡುಗಿಯನ್ನು ಚುಂಬಿಸುತ್ತಿರುವುದನ್ನು ಚಿತ್ರಿಸಿದರೆ, ದೀಪಾವಳಿಯಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಂಡ ‘ಲುಡೋ’ ಚಲನಚಿತ್ರವು ಹಿಂದೂ ದೇವತೆಗಳನ್ನು ಬಹುರೂಪಿಗಳ (ಛದ್ಮವೇಷ ಧರಿಸುವವರ) ಹಾಗಿ ಚಿತ್ರಿಸಿ ಅವಮಾನ ಮಾಡಲಾಗಿದೆ.

ಇನ್ನು ಪಾಕಿಸ್ತಾನದಲ್ಲಿ ಅತ್ಯಾಚಾರ ಮಾಡುವವರನ್ನು ನಪುಂಸಕರನ್ನಾಗಿ ಮಾಡಲಾಗುವುದು

ಪಾಕಿಸ್ತಾನದಲ್ಲಿ ಇನ್ನು ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಚುಚ್ಚುಮದ್ದಿನ ಮೂಲಕ ನಪುಂಸಕರನ್ನಾಗಿಸುವ ಶಿಕ್ಷೆ ವಿಧಿಸಲಾಗುವುದು. ಪಾಕಿಸ್ತಾನ ಸರಕಾರದ ಕ್ಯಾಬಿನೆಟ್ ಸಭೆಯಲ್ಲಿ ಇಂತಹ ಕರಡು ಕಾನೂನನ್ನು ಮಂಡಿಸಲಾಯಿತು.

ಧೈರ್ಯವಿದ್ದರೆ, ಬಿಜೆಪಿ ಸರಕಾರ ಚೀನಾ ಸೈನ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ತೋರಿಸಲಿ ! – ಅಸದುದ್ದೀನ್ ಒವೈಸಿ ಅವರ ಸವಾಲು

ಧೈರ್ಯವಿದ್ದರೆ, ಚೀನಾ ಸೈನ್ಯದ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ಮಾಡಿ ತೋರಿಸಲಿ. ಭಾರತದ ಭೂಪ್ರದೇಶವನ್ನು ಚೀನಾ ಸ್ವಾಧೀನಪಡಿಸಿಕೊಂಡಿರುವ ಲಡಾಖ್‌ನಲ್ಲಿ ಅಂತಹ ಧೈರ್ಯವನ್ನು ಬಿಜೆಪಿ ಏಕೆ ತೋರಿಸುತ್ತಿಲ್ಲ ಎಂದು ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಒವೈಸಿ ಬಿಜೆಪಿಗೆ ಸವಾಲು ಹಾಕಿದ್ದಾರೆ. ಇಲ್ಲಿ ನಡೆದ ಮಹಾನಗರ ಪಾಲಿಕೆಯ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕೇಂದ್ರ ಸರಕಾರವು ಲವ್ ಜಿಹಾದ್ ವಿರುದ್ಧ ರಾಷ್ಟ್ರಮಟ್ಟದಲ್ಲೇ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ

ಅನ್ಯಧರ್ಮಿಯರ ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ಅವರೊಂದಿಗೆ ಮದುವೆಯಾಗಿ ಅವರನ್ನು ‘ಲವ್ ಜಿಹಾದ್’ ಮೂಲಕ ಇಸ್ಲಾಂಗೆ ಮತಾಂತರಿಸುವ ಸಂಚನ್ನು ಕಟ್ಟರವಾದಿ ಜಿಹಾದಿಗಳು ರೂಪಿಸುತ್ತಿದ್ದಾರೆ. ಈ ಬಗ್ಗೆ ಕೇವಲ ಭಾರತದ ಹಿಂದುತ್ವನಿಷ್ಠ ಸಂಘಟನೆಗಳು ಮಾತ್ರವಲ್ಲ, ಕೇರಳದ ಅನೇಕ ಕ್ರೈಸ್ತ ಸಂಘಟನೆಗಳ ಸಹಿತ ಅಂತರರಾಷ್ಟ್ರೀಯ ಸ್ತರದ ಸಿಕ್ಖ್ ಮತ್ತು ಕ್ರೈಸ್ತ ಸಂಘಟನೆಗಳು ಸಹ ಈ ವಿಷಯದಲ್ಲಿ ಧ್ವನಿ ಎತ್ತಿವೆ.

೩೦ ಸಾವಿರ ರೋಹಿಂಗ್ಯಾಗಳನ್ನು ಮತದಾರರ ಪಟ್ಟಿಯಲ್ಲಿ ದಾಖಲಿಸುವವರೆಗೆ ಅಮಿತ್ ಶಾಹ ನಿದ್ದೆ ಮಾಡುತ್ತಿದ್ದರೇ ? – ತೇಜಸ್ವಿ ಸೂರ್ಯನಿಗೆ ಅಸದುದ್ದೀನ್ ಒವೈಸಿಯಿಂದ ಪ್ರತ್ಯುತ್ತರ

೩೦ ಸಾವಿರ ರೋಹಿಂಗ್ಯಾಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗಿದೆ ಎಂದು ನೀವು ಹೇಳುತ್ತಿದ್ದರೆ, ಇದೆಲ್ಲ ನಡೆಯುವವರೆಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಹ ನಿದ್ದೆ ಮಾಡುತ್ತಿದ್ದರೇ ?, ಎಂದು ಎಂ. ಐ. ಎಂ. ಅಧ್ಯಕ್ಷ ಹಾಗೂ ಸಂಸದ ಅಸದುದ್ದೀನ್ ಓವೈಸಿ ಇವರು ಬಿಜೆಪಿಯ ಸಂಸದ ತೇಜಸ್ವೀ ಸೂರ್ಯ ಇವರನ್ನು ಪ್ರಶ್ನಿಸಿದ್ದಾರೆ.

ಕರ್ನಾಟಕ ಸರಕಾರದಿಂದ ‘ಕರ್ನಾಟಕ ವೀರಶೈವ-ಲಿಂಗಾಯತ ನಿಗಮ’ಕ್ಕೆ ೫೦೦ ಕೋಟಿ ರೂಪಾಯಿ ಅನುದಾನ

ಬಿಜೆಪಿ ಸರಕಾರ ರಾಜ್ಯದಲ್ಲಿ ‘ಕರ್ನಾಟಕ ವೀರಶೈವ-ಲಿಂಗಾಯತ ನಿಗಮ’ದ ಸ್ಥಾಪನೆಗಾಗಿ ಪ್ರಕ್ರಿಯೆ ಆರಂಭಸಿ, ಅದಕ್ಕೆ ೫೦೦ ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿದೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಈ ನಿಗಮವನ್ನು ಸ್ಥಾಪಿಸುವ ಬಗ್ಗೆ ಘೋಷಿಸಿದ್ದರು.

ಸಂತಶ್ರೀ ಪುಜ್ಯಪಾದ ಆಸಾರಾಮಜಿ ಬಾಪು ಅವರ ಜಾಮೀನು ಅರ್ಜಿಯ ಬಗ್ಗೆ ಜೋಧಪುರ ನ್ಯಾಯಾಲಯ ವಿಚಾರಣೆ ನಡೆಸಲು ಸಿದ್ಧ

ಲೈಂಗಿಕ ಕಿರುಕುಳ ಆರೋಪದ ಮೇಲೆ ಕಳೆದ ೭ ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಂತಶ್ರೀ ಪೂಜ್ಯಪಾದ ಅಸಾರಾಮಜಿ ಬಾಪು ಇಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದರ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಲಯ ಒಪ್ಪಿದೆ.