|
ಹಿಂದೂಗಳ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ನೋಯಿಸುವ ಫಾತಿಮಾಳ ಮೇಲೆ ಕೇವಲ ಒಂದೇ ಪದವನ್ನು ಬಳಸುವುದನ್ನು ನಿಷೇಧಿಸುವ ಬದಲು ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಜೀವನಪೂರ್ತಿ ಸಾಮಾಜಿಕ ಮಾಧ್ಯಮವನ್ನು (ಸೋಷಿಯಲ್ ಮೀಡಿಯಾ) ಬಳಸದಿರುವ ಶಿಕ್ಷೆ ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ತಿರುವನಂತಪುರಮ್ : ‘ಗೋಮಾತೆ’ ಎಂಬ ಪದವನ್ನು ಯಾವುದೇ ಮಾಧ್ಯಮದಲ್ಲಿ ಬಳಸದಂತೆ ಕೇರಳ ಉಚ್ಚನ್ಯಾಯಾಲಯ ಹಿಂದೂದ್ವೇಷಿ ಕಾರ್ಯಕರ್ತೆ ರೆಹಾನಾ ಫಾತಿಮಾಳನ್ನು ಆದೇಶಿಸಿದೆ. ಫಾತಿಮಾ ಇನ್ನು ಮುಂದೆ ಗೋಮಾತೆಯ ಬಗ್ಗೆ ಯಾವುದೇ ಅಭಿಪ್ರಾಯ ಅಥವಾ ಟಿಪ್ಪಣೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಫಾತಿಮಾ ಸ್ವಲ್ಪ ಸಮಯದ ಹಿಂದೆ ಗೋಮಾಂಸದಿಂದ ತಯಾರಿಸಿದ ತಿಂಡಿಯನ್ನು ‘ಗೋಮಾತಾ’ ಎಂದು ಉಲ್ಲೇಖಿಸಿದ್ದರು.
बीफ़ के लिए गोमाता शब्द के प्रयोग पर कोर्ट ने कार्यकर्ता के सोशल मीडिया पोस्ट करने पर लगाई रोक#KeralaHC #RehanaFatima #Beef #Gaumata #केरलाहाईकोर्ट #रेहानाफातिमा #बीफ #गोमाताhttps://t.co/4gCjCpRQDH
— द वायर हिंदी (@thewirehindi) November 24, 2020
ನ್ಯಾಯಮೂರ್ತಿ ಸುನಿಲ ಥಾಮಸ್ ಇವರಿಗೆ ೨೦೧೮ ರಲ್ಲಿಯೇ ರೆಹಾನಾ ಫಾತಿಮಾ ‘ಗೋಮಾತಾ’ ಪದದ ಅವಮಾನ ಮಾಡುವಂತಹ ಪೋಸ್ಟಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಪದೇ ಪದೇ ಮಾಡಿರುವುದು ಗಮನಕ್ಕೆ ಬಂದಿದೆ. ಈ ಮಾಧ್ಯಮದ ಮೂಲಕ ಅವರು ಉದ್ದೇಶಪೂರ್ವಕವಾಗಿ ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುತ್ತಿದ್ದಾರೆ, ಎಂದು ನ್ಯಾಯಮೂರ್ತಿ ಥಾಮಸ್ ಹೇಳುತ್ತಾ, ಫಾತಿಮಾಳ ಮೇಲೆ ಈ ಪದವನ್ನು ಬಳಸದಂತೆ ನಿಷೇಧಿಸಿದ್ದಾರೆ.
मांस के लिए बार-बार 'गौमाता' शब्द का प्रयोग, ऐक्टिविस्ट रेहाना फातिमा पर केरल HC ने लगाया प्रतिबंध https://t.co/QFpo0765cy via @NavbharatTimes
— NBT Hindi News (@NavbharatTimes) November 24, 2020
ಇದಕ್ಕೂ ಮುಂಚೆಯೇ ಫಾತಿಮಾ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಬಾರಿ ಪ್ರಸಾರ ಮಾಡಿದ್ದಾರೆ ಎಂದು ನ್ಯಾಯಾಲಯದ ಮುಂದೆ ಬಂದಿತ್ತು. ಈಗ ಜಾಮೀನಿಗಾಗಿ ನೀಡಿದ ಅರ್ಜಿಯು ‘ಫಾತಿಮಾಳಿಗೆ ನೀಡುತ್ತಿರುವ ಕೊನೆಯ ಅವಕಾಶವೆಂದು’ ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.