ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ಸಭೆಯಲ್ಲಿ ಕಾಶ್ಮೀರದ ಕುರಿತು ಚರ್ಚಿಸಲಾಗುವುದಿಲ್ಲ !

ಪಾಕ್‌ಗೆ ಮತ್ತೆ ಕಪಾಳಮೋಕ್ಷ !

ಇಸ್ಲಾಮಾಬಾದ್ (ಪಾಕಿಸ್ತಾನ) – ‘ಆರ್ಗನೈಜೆಶನ್ ಆಫ್ ಇಸ್ಲಾಮಿಕ್ ಕೊಆಪರೇಶನ್’ (ಒ.ಐ.ಸಿ.), ಇಸ್ಲಾಮಿ ದೇಶಗಳ ಸಂಘಟನೆಯ ಸಭೆಯಲ್ಲಿ ಕಾಶ್ಮೀರ ಕುರಿತು ಚರ್ಚಿಸಲಾಗುವುದಿಲ್ಲ. ಸಭೆಯ ಸೂಚಿಯಲ್ಲಿ ಈ ವಿಷಯವನ್ನು ಇಟ್ಟುಕೊಂಡಿಲ್ಲ. ಆದ್ದರಿಂದ ಪಾಕಿಸ್ತಾನ ಮತ್ತೊಮ್ಮೆ ಮುಜುಗರ ಉಂಟಾಗಿದೆ. ಸಭೆಯಲ್ಲಿ ಇಸ್ಲಾಮಿಕ್ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳು ಭಾಗವಹಿಸಲಿದ್ದಾರೆ. ಈ ಹಿಂದೆ ಸಭೆಯಲ್ಲಿ ಕಾಶ್ಮೀರ ಸಮಸ್ಯೆಯ ಬಗ್ಗೆ ಚರ್ಚಿಸುವುದಾಗಿ ಪಾಕಿಸ್ತಾನ ಘೋಷಿಸಿತ್ತು.

ಒ.ಐ.ಸಿ.ಯ ಪ್ರಧಾನ ಕಾರ್ಯದರ್ಶಿ ಯೂರುಫ್ ಅಲ್-ಒಥೈಮೀನ್ ಇವರು, ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ‘ಭಯೋತ್ಪಾದನೆ ವಿರುದ್ಧ ಶಾಂತಿ ಮತ್ತು ಅಭಿವೃದ್ಧಿಗಾಗಿ ಐಕ್ಯತೆ’ಯ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದರು. ಇದರಲ್ಲಿ ಪ್ಯಾಲೆಸ್ಟೈನ್, ಹಿಂಸಾಚಾರದ ವಿರುದ್ಧ ಯುದ್ಧ, ಕಟ್ಟರವಾದ, ಭಯೋತ್ಪಾದನೆ, ಇಸ್ಲಾಮೋಫೋಬಿಯಾ, ಧರ್ಮನಿಂದನೆ, ಅದೇರೀತಿ ಮುಸ್ಲಿಂ ಅಲ್ಪಸಂಖ್ಯಾತರು, ಸಂಘಟನೆಯ ಹೊರಗಿನ ಮುಸ್ಲಿಮರ ಪರಿಸ್ಥಿತಿ ಮತ್ತು ರೋಹಿಂಗ್ಯಾಗಳಿಗೆ ಹಣ ಸಂಗ್ರಹಿಸುವ ಬಗ್ಗೆ ಚರ್ಚೆ ನಡೆಯಲಿದೆ.