‘ಮನ್ ಕಿ ಬಾತ್’ ನಲ್ಲಿ ಪ್ರಧಾನಿ ಮೋದಿ ಅವರನ್ನು ಹೊಗಳಿದರು !
|
ನವ ದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿ ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಬ್ರಾಝಿಲ್‌ನ ಜೊನಸ್ ಮಾಸೆಟಿ ಇವರ ಬಗ್ಗೆ ವಿಶೇಷ ಮಾಹಿತಿ ನೀಡಿದ್ದರು. ಭಾರತದಲ್ಲಿ ೪ ವರ್ಷಗಳನ್ನು ಕಳೆದ ನಂತರ ಮಾಸೆಟಿಯವರು ತಂತ್ರಜ್ಞಾನದ ಮೂಲಕ ವೇದಗಳ ಮಹತ್ವವನ್ನು ಜಗತ್ತಿನವರೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
The culture of India is gaining popularity all over the world.
One such effort is by @JonasMasetti, who is based in Brazil and popularises Vedanta as well as the Gita among people there.
He uses technology effectively to popularise our culture and ethos. #MannKiBaat pic.twitter.com/NX4jZtPzJX
— PMO India (@PMOIndia) November 29, 2020
೧. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೆಲವರು ಭಾರತೀಯ ಸಂಸ್ಕೃತಿ, ಶಾಸ್ತ್ರ, ಪುರಾಣಗಳು ಮತ್ತು ವೇದಗಳನ್ನು ಹುಡುಕಿಕೊಂಡು ಭಾರತಕ್ಕೆ ಬಂದು ಇಲ್ಲಿಯೇ ನೆಲೆಸಿದರು, ಕೆಲವರು ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ತಮ್ಮ ದೇಶಕ್ಕೆ ಮರಳಿದರು. ‘ವಿಶ್ವನಾಥ್’ ಎಂದೂ ಕರೆಯಲ್ಪಡುವ ಜೊನಸ್ ಮಾಸೆಟಿ ಅವರ ಕೆಲಸದ ಬಗ್ಗೆ ನಾನು ತಿಳಿದಿದ್ದೇನೆ. ಅವರು ಬ್ರಾಝಿಲ್‌ನಲ್ಲಿ ಭಗವದ್ಗೀತೆ ಮತ್ತು ವೇದಗಳನ್ನು ಕಲಿಸುತ್ತಾರೆ.
೨. ಜೊನಾಸ್ ಇವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು; ಆದರೆ ನಂತರ ಅವರಲ್ಲಿ ಭಾರತೀಯ ಸಂಸ್ಕೃತಿ ಮತ್ತು ವೇದಗಳ ಬಗ್ಗೆ ಆಸಕ್ತಿ ನಿರ್ಮಾಣವಾಗತೊಡಗಿತು. ಅವರು ತಮಿಳುನಾಡಿನ ಕೊಯಮತ್ತೂರಿನ ಅರ್ಶ ವಿದ್ಯಾ ಗುರುಕುಲಮ್‌ನಲ್ಲಿ ೪ ವರ್ಷಗಳ ಕಾಲ ವೇದಗಳ ಅಧ್ಯಯನ ಮಾಡಿದರು. ಅವರು ಪೂರ್ಣ ಸಮಯ ಆಧ್ಯಾತ್ಮಕ್ಕಾಗಿ ನೀಡಲು ನಿರ್ಧರಿಸಿದರು. ಅವರು ಬ್ರಾಝಿಲ್‌ನಲ್ಲಿ ವಿಶ್ವವಿದ್ಯಾ ಎಂಬ ಹೆಸರಿನ ಸಂಘಟನೆಯನ್ನು ನಡೆಸುತ್ತಿದ್ದಾರೆ. ಕಳೆದ ೭ ವರ್ಷಗಳಲ್ಲಿ ಜೊನಾಸ್ ಆನ್‌ಲೈನ್ ಕೋರ್ಸ್‌ಗಳ ಮೂಲಕ ಲಕ್ಷಾಂತರ ಜನರಿಗೆ ವೇದಗಳನ್ನು ಕಲಿಸಿದ್ದಾರೆ. ಅವರು ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ೩೪ ಸಾವಿರಕ್ಕೂ ಹೆಚ್ಚು ಫಾಲೊರ್ಸ್‌ಗಳನ್ನು ಹೊಂದಿದ್ದು, ಅಲ್ಲಿಯೂ ಅವರು ಭಾರತೀಯ ಸಂಸ್ಕೃತಿ ಮತ್ತು ವೇದಗಳನ್ನು ಕಲಿಸುತ್ತಾರೆ. ಪ್ರಧಾನಿ ಮೋದಿ ಜೋನಸ್ ಪ್ರಯಾಣವನ್ನು ಅನುಕರಣೀಯ ಎಂದು ಬಣ್ಣಿಸಿದ್ದಾರೆ.