ಬರೇಲಿಯಲ್ಲಿ ಮುಸಲ್ಮಾನ ಯುವಕನಿಂದ ಹಿಂದೂ ಹೆಸರು ಹೇಳಿಕೊಂಡು ಹಿಂದೂ ಯುವತಿಗೆ ವಂಚನೆ

ಯುವತಿಯ ಲೈಂಗಿಕ ಶೊಷಣೆ ಮಾಡಿ ಗರ್ಭಿಣಿಯಾದ ನಂತರ ಕಿರುಕುಳ ನೀಡಿ ಗರ್ಭಪಾತ

ದೇಶದಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವಾಗ ಒಂದೇ ಒಂದು ಮುಸ್ಲಿಂ ನಾಯಕ, ಮೌಲ್ವಿ, ಮುಸ್ಲಿಂ ಸಂಘಟನೆ ಮುಂದೆ ಬಂದು ಸಂಬಂಧಪಟ್ಟವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಬರೇಲಿ (ಉತ್ತರ ಪ್ರದೇಶ) – ಇಲ್ಲಿ ‘ಲವ್ ಜಿಹಾದ್’ನ ಮೊದಲ ಪ್ರಕರಣ ದಾಖಲಾದ ನಂತರ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ತಾಹಿರ ಖಾನ್ ಎಂಬ ಯುವಕನು ಕುನಾಲ್ ಶರ್ಮಾ ಎಂದು ಹೆಸರಿಟ್ಟುಕೊಂಡು ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಎಳೆದು ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ಆಕೆ ಗರ್ಭಿಣಿಯಾದಳು. ನಂತರ ವಿವಾಹ ಮಾಡಿಕೊಳ್ಳಲು ನಿರಾಕರಿಸುತ್ತಾ ಆತ ಮತ್ತು ಆತನ ಕುಟುಂಬದವರು ಆಕೆಗೆ ಕಿರುಕುಳ ನೀಡಿದರು. ಇದರಿಂದಾಗಿ ಆಕೆಯ ಗರ್ಭಪಾತವಾಯಿತು.

ದೌರ್ಜನ್ಯದ ಸಮಯದಲ್ಲಿ, ಕುಟುಂಬವು ‘ಲವ್ ಜಿಹಾದ್ ಎಂದು ವಂಚನೆ ಮಾಡಲಾಗಿದೆ’ ಎಂದು ಹೇಳುತ್ತಿದ್ದರು. ಯುವತಿಯ ದೂರಿನ ನಂತರ ಪೊಲೀಸರು ತಾಹಿರ್ ಖಾನ್‌ನನ್ನು ಬಂಧಿಸಿದ್ದಾರೆ; ಆದರೆ, ‘ಲವ್ ಜಿಹಾದ್’ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ. ಕಾನೂನು ಜಾರಿಗೆ ಬರುವ ಮೊದಲು ಈ ಘಟನೆ ನಡೆದಿರುವುದರಿಂದ, ಕಾನೂನಿನಡಿಯಲ್ಲಿ ಅಪರಾಧವನ್ನು ದಾಖಲಿಸಲಾಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.