ಹಿಂದೂ ಸಂಘಟನೆ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ ಇವುಗಳಿಗಾಗಿ ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಆನ್‌ಲೈನ್’ ಶೌರ್ಯಜಾಗೃತಿ ಕಾರ್ಯಕ್ರಮದ ಆಯೋಜನೆ

ಶ್ರೀ. ರಮೇಶ ಶಿಂದೆ

ಹಿಂದೂಗಳು ತಮ್ಮ ಮತ್ತು ಕುಟುಂಬದ ರಕ್ಷಣೆಗಾಗಿ ಸ್ವರಕ್ಷಣಾ ಪ್ರಶಿಕ್ಷಣ ಕಲಿಯಬೇಕು ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ಶ್ರೀ. ರಮೇಶ ಶಿಂದೆ

ಬೆಂಗಳೂರು –  ಈಗಿನ ಪರಿಸ್ಥಿತಿ ನೋಡಿದರೆ ಹಿಂದೂ ಯುವಕ-ಯುವತಿಯರು ಪಾಶ್ಚಾತ್ಯ ಅಂಧಾನುಕರಣೆಯಿಂದ ಹಿಂದೂ ಧರ್ಮದಿಂದ ದೂರ ಹೋಗುತ್ತಿದ್ದಾರೆ. ಇದರಿಂದಾಗಿ ಲವ್ ಜಿಹಾದ್ ಮತ್ತು ಬೌದ್ಧಿಕವಾಗಿ ಮತಾಂತರ ಆಗುತ್ತಿರುವುದು ಗಮನಕ್ಕೆ ಬರುತ್ತಿದೆ. ಪ್ರತ್ಯಕ್ಷದಲ್ಲಿ ಭಾರತದ ಇತಿಹಾಸವನ್ನು ನೋಡಿದಾಗ ನಮಗೆ ತಿಳಿಯುವುದೇನೆಂದರೆ ಹಿಂದೂ ಧರ್ಮದ ಆಚರಣೆ ಮಾಡುವಂತಹ ಮಹಾಪರಾಕ್ರಮಿ ರಾಜರ ರಕ್ತದ ಕಣಕಣದಲ್ಲಿ ಶೌರ್ಯ ತುಂಬಿತ್ತು. ಆ ರಾಜರು ಶತ್ರು ಸೈನ್ಯದ ವಿರುದ್ಧ ಹೋರಾಡಿ ತಮ್ಮ ಪರಾಕ್ರಮದಿಂದ ಹೆಸರು ಪಡೆದಿದ್ದಾರೆ. ಮಹಾರಾಣಾ ಪ್ರತಾಪ, ಛತ್ರಪತಿ ಶಿವಾಜಿ ಮಹಾರಾಜರು,  ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಇವರ ಶೌರ್ಯ ಎಷ್ಟಿತ್ತೆಂದರೆ  ಇವರಲ್ಲಿ ಸೈನ್ಯಬಲ ಕಡಿಮೆ ಇದ್ದರೂ ಶತ್ರುಗಳ ವಿರುದ್ಧ ಹೋರಾಡಿ ಇತಿಹಾಸವನ್ನು ನಿರ್ಮಿಸಿದ್ದಾರೆ. ಇಂತಹ ಪರಾಕ್ರಮಿ ರಾಜರ ಆದರ್ಶವನ್ನು ಇಟ್ಟುಕೊಂಡು ಹಿಂದೂಗಳು ತಮ್ಮ ಹಾಗೂ ತಮ್ಮ ಕುಟುಂಬದವರ ರಕ್ಷಣೆಯಾಗಲು ಸ್ವರಕ್ಷಣಾ ತರಬೇತಿ ಕಲಿಯಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಪ್ರತಿಪಾದಿಸಿದರು. ಇತ್ತೀಚೆಗೆ ಧರ್ಮಪ್ರೇಮಿಗಳಿಗಾಗಿ ಸಮಿತಿ ವತಿಯಿಂದ ‘ಆನ್‌ಲೈನ್’ ಶೌರ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ೨೦೦ ಕ್ಕೂ ಹೆಚ್ಚು ಧರ್ಮಪ್ರೇಮಿಗಳು ಈ ಕಾರ್ಯಕ್ರಮದ ಲಾಭ ಪಡೆದರು.

ಧರ್ಮಪ್ರೇಮಿಗಳ ಅಭಿಪ್ರಾಯ

೧. ನಾವು ನಮ್ಮ ಸ್ನೇಹಿತರು ಮತ್ತು ಕುಟುಂಬ ದವರನ್ನು ಸಂಪರ್ಕಿಸಿ ಹಿಂದೂ ಧರ್ಮದ ಕಾರ್ಯದಲ್ಲಿ ಜೋಡಿಸಲು ಪ್ರಯತ್ನಿಸುತ್ತೇವೆ.

೨. ಧರ್ಮಕಾರ್ಯಕ್ಕಾಗಿ ನಾವು ನೀಡುತ್ತಿರುವ ಸಮಯ ಕಡಿಮೆ ಇದೆ. ಅದಕ್ಕಾಗಿ ಇನ್ನು ಹೆಚ್ಚು ಸಮಯ ನೀಡುತ್ತೇವೆ.

೩. ರಾಷ್ಟ್ರ, ಧರ್ಮ ಮತ್ತು ಲವ್ ಜಿಹಾದ್‌ನಂತಹ

ವಿಷಯಗಳನ್ನು ನಮ್ಮ ಸ್ನೇಹಿತರಿಗೆ ನನ್ನ ಕರ್ತವ್ಯವೆಂದು ಹೇಳುವೆನು.

೪. ಇತಿಹಾಸದ ಪ್ರಸಂಗಗಳನ್ನು ಕೇಳಿದಾಗ ನಮ್ಮಲ್ಲಿರುವ ಜಾಗರೂಕತೆ ಇನ್ನಷ್ಟು ಹೆಚ್ಚಾಗುವ ಆವಶ್ಯಕತೆ  ಇದೆ ಎಂದು ಅರಿವಾಯಿತು.