ಸಂಗಾತಿಯನ್ನು ಆರಿಸುವುದು ಯಾವುದೇ ಪ್ರಜ್ಞೆಯುಳ್ಳ ವ್ಯಕ್ತಿಯ ಮೂಲಭೂತ ಅಧಿಕಾರ ! – ಕರ್ನಾಟಕ ಉಚ್ಚ ನ್ಯಾಯಾಲಯ

ಬೆಂಗಳೂರು – ಸ್ವೇಚ್ಛೆಯಿಂದ ಸಂಗಾತಿಯನ್ನು ಆರಿಸುವುದು, ಯಾವುದೇ ಪ್ರಜ್ಞಾವಂತ ವ್ಯಕ್ತಿಯ ಮೂಲಭೂತ ಅಧಿಕಾರವಾಗಿದೆ. ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಈ ಅಧಿಕಾರವನ್ನು ನೀಡಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಒಂದು ಅರ್ಜಿಯನ್ನು ಆಲಿಸುವಾಗ ಹೇಳಿದೆ. ‘ಸಂವಿಧಾನವು ಇಬ್ಬರು ವ್ಯಕ್ತಿಗಳಿಗೆ ನೀಡಿರುವ ಖಾಸಗಿ ಸಂಬಂಧಗಳ ಸ್ವಾತಂತ್ರ್ಯವನ್ನು ಯಾರೂ ಅತಿಕ್ರಮಿಸಲು ಸಾಧ್ಯವಿಲ್ಲ. ಇದರಲ್ಲಿ ಧರ್ಮ ಅಥವಾ ಜಾತಿಗೆ ಯಾವುದೇ ಮಹತ್ವವಿಲ್ಲ’, ಎಂದು ಉಚ್ಚ ನ್ಯಾಯಾಲಯವು ಈ ಸಮಯದಲ್ಲಿ ಹೇಳಿತು. ಈ ಹಿಂದೆ ಅಲಹಾಬಾದ್ ಉಚ್ಚ ನ್ಯಾಯಾಲಯ ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವಾಗ, ‘ಪ್ರಜ್ಞಾವಂತ ನಾಗರಿಕನಿಗೆ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ಅಧಿಕಾರವಿದೆ’, ಎಂದು ಹೇಳಿದ್ದರು.

೧. ಅರ್ಜಿದಾರ ಸಾಫ್ಟ್‌ವೇರ್ ಎಂಜಿನಿಯರ್ ವಾಜಿದ್ ಖಾನ್ ಈತನು ಸಾಫ್ಟ್‌ವೇರ್ ಎಂಜಿನಿಯರ್ ಆದ ರಮ್ಯಾ ಹೆಸರಿನ ಹುಡುಗಿಯನ್ನು ವಿವಾಹವಾದನು. ರಮ್ಯಾ ಈಗ ಮಹಿಳಾ ಸಂರಕ್ಷಣಾ ಕೇಂದ್ರದ ಉಸ್ತುವಾರಿಯಲ್ಲಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗಿ ಅವಳನ್ನು ಬಿಡುಗಡೆ ಮಾಡುವಂತೆ ಕೋರಿ ವಾಜಿದ್ ಅರ್ಜಿ ಸಲ್ಲಿಸಿದ್ದನು.

೨. ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸಿ ಪೊಲೀಸರು ರಮ್ಯಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ಸಮಯದಲ್ಲಿ ರಮ್ಯಾಳ ಪೋಷಕರಾದ ಗಂಗಾಧರ ಮತ್ತು ಗಿರಿಜಾ, ಹಾಗೆಯೇ ವಾಜಿದ್ ಖಾನ್ ಅವರ ತಾಯಿ ಶ್ರೀಲಕ್ಷ್ಮಿ ಉಪಸ್ಥಿತರಿದ್ದರು. ‘ರಮ್ಯಾ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ತನ್ನ ಜೀವನವನ್ನು ನಿರ್ಧರಿಸಲು ಸಕ್ಷಮಳಾಗಿದ್ದಾಳೆ’, ಎಂದು ನ್ಯಾಯಾಲಯ ಅವಳನ್ನು ಬಿಡುಗಡೆ ಮಾಡಲು ಆದೇಶಿಸಿತು.

೩. ವಾಜಿದ್ ಖಾನ್ ನೊಂದಿಗಿನ ಮದುವೆಯನ್ನು ರಮ್ಯಾಳ ಪೋಷಕರು ವಿರೋಧಿಸುತ್ತಿದ್ದಾರೆ ಎಂದು ರಮ್ಯಾ ಆರೋಪಿಸಿದ್ದಾಳೆ. ‘ಈ ಮದುವೆಗೆ ಯಾವುದೇ ವಿರೋಧವಿಲ್ಲ’ ಎಂದು ವಾಜಿದ್‌ನ ತಾಯಿ ಶ್ರೀಲಕ್ಷ್ಮೀ ಹೇಳಿದ್ದಾರೆ. ರಮ್ಯಾಳ ಕುಟುಂಬದಿಂದ ಆಕೆಯ ವಿವಾಹಕ್ಕೆ ವಿರೋಧ ತೀರ್ಪಿನ ನಂತರವೂ ಶಾಶ್ವತವಾಗಿದೆ.