ಬಿಜೆಪಿಯಿಂದ ೫೦೦ ಕ್ರೈಸ್ತರು ಮತ್ತು ೧೧೨ ಮುಸ್ಲಿಂ ಅಭ್ಯರ್ಥಿಗಳು

  1. ಕೇರಳ ಸ್ಥಳೀಯ ಚುನಾವಣೆ

  2. ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ ಪ್ರಚಾರ ಮಾಡುವರು

ಈ ಅಭ್ಯರ್ಥಿಗಳು ಚುನಾಯಿತರಾದರೆ ಹಿಂದುತ್ವದ ಪರವಾಗಿರುತ್ತಾರೆ; ಲವ್ ಜಿಹಾದ್, ಮತಾಂತರವನ್ನು ವಿರೋಧಿಸುತ್ತದೆ; ಸಮಾನ ನಾಗರಿಕ ಸಂಹಿತೆ, ಜನಸಂಖ್ಯಾ ನಿಯಂತ್ರಣ ಕಾನೂನು ಇತ್ಯಾದಿಗಳನ್ನು ಬೆಂಬಲಿಸುವರು, ಎಂಬ ಅಪೇಕ್ಷೆ !

ತಿರುವನಂತಪುರಂ (ಕೇರಳ) – ಕೇರಳದಲ್ಲಿ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ೫೦೦ ಕ್ರೈಸ್ತರಿಗೆ ಮತ್ತು ೧೧೨ ಮುಸ್ಲಿಮರಿಗೆ ಟಿಕೇಟ್ ನೀಡಿದೆ. ಕೇರಳದಲ್ಲಿ ಡಿಸೆಂಬರ್ ೮, ೧೦ ಮತ್ತು ೧೪ ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಕೇರಳದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಒಟ್ಟಾಗಿ ಶೇ. ೪೫ ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಹಿಂದೂಗಳು ಶೇ. ೫೫ ರಷ್ಟಿದ್ದಾರೆ. ಕೇರಳದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ೬ ತಿಂಗಳು ಬಾಕಿ ಇದೆ.