ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಇಂತಹ ಘಟನೆಗಳು ಮತ್ತು ಅಕ್ರಮ ಕಸಾಯಿಖಾನೆಗಳು ಕಾರ್ಯ ನಿರ್ವಹಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಪೊಲೀಸರ ಮುಂದೆಯೇ ಪತ್ರಕರ್ತೆಯ ಮೇಲೆ ಹಲ್ಲೆ ನಡೆದಿರುವುದು ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ !
ಹಾಸನ – ಅಕ್ರಮವಾಗಿ ಹಸುಗಳನ್ನು ಹತ್ಯೆಗೈದಿದ್ದನ್ನು ವಿರೋಧಿಸಿದ ಪತ್ರಕರ್ತೆಯೊಬ್ಬರ ಮೇಲೆ ಮತಾಂಧ ಕಟುಕರಿಂದ ಹಲ್ಲೆ ನಡೆದ ಘಟನೆ ಇಲ್ಲಿಯ ಪೆನ್ಶನ್ ಮೊಹಲ್ಲಾದಲ್ಲಿ ನಡೆದಿದೆ. ಪತ್ರಕರ್ತೆ, ಪ್ರಾಣಿ ಪ್ರಿಯರು ಮತ್ತು ಪೊಲೀಸರೊಂದಿಗೆ ೪ ಅಕ್ರಮ ಕಸಾಯಿಖಾನೆ ಮತ್ತು ದನಗಳನ್ನು ಇಟ್ಟಿರುವ ೫ ಸ್ಥಳಗಳಲ್ಲಿ ಭೇಟಿ ನೀಡಲು ಪ್ರಯತ್ನಿಸುತ್ತಿದ್ದರು. ಅಲ್ಲಿ ೧೦೦ ಕ್ಕೂ ಹೆಚ್ಚು ಹಸುಗಳನ್ನು ಇಡಲಾಗಿತ್ತು. ಹಸನ್ ಬಾಬು ಮತ್ತು ರಹಮಾನ್ ಎಂಬವರು ಅಕ್ರಮ ಕಸಾಯಿಖಾನೆಗಳನ್ನು ನಡೆಸುತ್ತಿದ್ದರು.
ಪತ್ರಕರ್ತೆಯು ಸ್ಥಳಕ್ಕೆ ತೆರಳಿ ಅಕ್ರಮ ಕಸಾಯಿಖಾನೆ ತೆರೆಯಬೇಕೆಂದು ಒತ್ತಾಯಿಸಿದಾಗ, ಅಲ್ಲಿ ನೆರೆದಿದ್ದ ಮತಾಂಧರು ಅವಳ ಮೇಲೆ ಹಲ್ಲೆ ನಡೆಸಿದರು. ಈ ಸಮಯದಲ್ಲಿ, ಅವಳ ಮಾನಭಂಗವನ್ನು ಮಾಡಲಾಯಿತು. ಇಲ್ಲಿಂದ ಹೊರಹೋಗದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು. ಕೆಲವು ಹಸುಗಳನ್ನು ರಕ್ಷಣೆಯಾದರೆ ಉಳಿದವುಗಳನ್ನು ಕಟುಕರು ಬಚ್ಚಿಟ್ಟರು.