ರಾಜ್ಯದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆ ಆಯೋಜಿಸಿದ ಸಾಮೂಹಿಕ ನಾಮಜಪಕ್ಕೆ ಅತ್ಯುತ್ತಮ ಜನಸ್ಪಂದನ
ಬೆಂಗಳೂರು – ತುಳಸಿ ವಿವಾಹದ ನಿಮಿತ್ತ ನವೆಂಬರ್ ೨೬ ರ ಮಧ್ಯಾಹ್ನ ೨.೩೦ ಕ್ಕೆ ‘ಆನ್ಲೈನ್’ ಮೂಲಕ ಸಾಮೂಹಿಕ ನಾಮಜಪದ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಅಭೂತಪೂರ್ಣ ಜನಸ್ಪಂದನ ಸಿಕ್ಕಿತು. ಈ ಸಮಯದಲ್ಲಿ ‘ಓಂ ನಮೋ ಭಗವತೇ ವಾಸುದೇವಾಯ |’ ಈ ನಾಮಜಪವನ್ನು ಸಾಮೂಹಿಕವಾಗಿ ಮಾಡಲಾಯಿತು. ಇದರಲ್ಲಿ ೪೫೦ ಕ್ಕೂ ಅಧಿಕ ಜಿಜ್ಞಾಸುಗಳು ಜೊಡಣೆಯಾಗಿ ಚೈತನ್ಯಮಯ ಅನುಭೂತಿ ಪಡೆದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸೇವಕರಾದ ಶ್ರೀ. ಚಂದ್ರ ಮೋಗರ್ ಇವರು ತುಳಸಿಪೂಜೆಯ ಮಹತ್ವವನ್ನು ಹೇಳಿದರು. ‘ಸಸ್ಯ ಜೀವರಾಶಿಗಳಲ್ಲಿ ತುಳಸಿಯು ಅತ್ಯಂತ ಸಾತ್ತ್ವಿಕ ಸಸ್ಯವಾಗಿದೆ. ಹಿಂದೂಗಳು ಅದನ್ನು ದೇವತೆಯೆಂದು ಪೂಜಿಸುತ್ತಾರೆ. ತುಳಸಿಯು ವೈದ್ಯರಿಗೆ ವನಸ್ಪತಿ, ಋಷಿಮುನಿಗಳಿಗೆ ಸಂಜೀವಿನಿಯಾಗಿದೆ. ಧರ್ಮಶಾಸ್ತ್ರದಲ್ಲಿ ತುಳಸಿ ಇರುವ ಜಾಗದಲ್ಲಿ ಶ್ರೀ ಹರಿಯು (ಶ್ರೀವಿಷ್ಣುವು) ಸದಾ ವಾಸ ಮಾಡುತ್ತಾನೆ. ತುಳಸಿಯನ್ನು ಶೈವರು, ವೈಷ್ಣವರು, ಗಾಣಸತ್ಯರು, ದೇವಿ ಉಪಾಸಕರು ಹೀಗೆ ಪ್ರತಿಯೊಬ್ಬರು ಪೂಜೆ ಮಾಡುತ್ತಾರೆ. ತುಳಸಿಯೊಂದಿಗೆ ಶ್ರೀಕೃಷ್ಣನ ವಿವಾಹ ಮಾಡುವುದೇ ತುಳಸಿ ವಿವಾಹವಾಗಿದೆ. ಕಾರ್ತಿಕ ಮಾಸದಲ್ಲಿ ಈ ತುಳಸಿ ವಿವಾಹದ ಪವಿತ್ರ ಸಮಯದಲ್ಲಿ ಶ್ರೀಮನ್‌ನಾರಾಯಣನು ನಿದ್ರಾವಸ್ಥೆಯಿಂದ ಹೊರಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಅದಕ್ಕಾಗಿ ನಾವು ಭಗವಾನ್ ಶ್ರೀಕೃಷ್ಣನ ದರ್ಶನ ಪಡೆಯಲು ಅವನ ಸ್ಮರಣೆ ಅಂದರೆ ಅವನ ನಾಮಜಪವನ್ನು ಮಾಡೋಣ’ ಎಂದು ಶ್ರೀ. ಚಂದ್ರ ಮೊಗೇರ್ ಇವರು ಕರೆ ನೀಡಿದರು.
ವಿಶೇಷ
೧. ಫೇಸಬುಕ್ ಹಾಗೂ ಯೂಟ್ಯೂಬ್ ಮೂಲಕ ಈ ಸಾಮೂಹಿಕ ನಾಮಜಪದ ಕಾರ್ಯಕ್ರಮದ ನೇರವೀಕ್ಷಣೆಯನ್ನು ಮಾಡಲಾಯಿತು. ಫೇಸ್‌ಬುಕ್ ಮಾಧ್ಯಮದಿಂದ ಈ ಕಾರ್ಯಕ್ರಮವನ್ನು ೧೬ ಸಾವಿರದ ೭೦೦ ಜನರು ಪ್ರತ್ಯಕ್ಷ ನೋಡಿದರೆ ೪೭ ಸಾವಿರದ ೭೪ ಜನರ ತನಕ ವಿಷಯ ತಲುಪಿತು (ರೀಚ್) ಮತ್ತು ಯೂಟ್ಯೂಬ್‌ನಿಂದ ೧ ಸಾವಿರದ ೨೦೦ ಜನರು ಇದನ್ನು ವೀಕ್ಷಿಸಿದರು.
ಅನುಭೂತಿ
೧. ಈ ಸಾಮೂಹಿಕ ನಾಮಜಪದಿಂದ ಮನೆಯ ವಾತವಾರಣ ದೇವಸ್ಥಾನದಂತಾಗಿತ್ತು. – ಹೇಮಾ ಗಣೇಶ
೨. ಸಾಮೂಹಿಕ ನಾಮಜಪ ಮಾಡುವಾಗ ತುಳಸಿ ಗಿಡದ ಹಿಂದೆ ಸೂಕ್ಷ್ಮದಲ್ಲಿ ಶ್ರೀಕೃಷ್ಣನು ನಿಂತು ಕೊಳಲು ಊದುತ್ತಿದ್ದಾನೆ ಎಂದೆನಿಸುತ್ತಿತ್ತು. – ಸೌ. ಕಲಾವತಿ, ಬೆಂಗಳೂರು
ಅಭಿಪ್ರಾಯ
ಇಂತಹ ನಾಮಜಪವನ್ನು ಇನ್ನೂ ಹೆಚ್ಚು ಹೆಚ್ಚು ಸಮಯ ಆಯೋಜನೆ ಮಾಡಬೇಕು. – ಆನಂದ ಉಪ್ಪಾರ