ಪ್ರಜಾಪ್ರಭುತ್ವವನ್ನು ವೈಭವೀಕರಿಸುವ ಡಾ. ದಾಭೊಲಕರರ ಕುಟುಂಬದವರಿಗೆ ಪ್ರಜಾಪ್ರಭುತ್ವದ ಪ್ರಕ್ರಿಯೆಯ ಮೇಲೆಯೇ ನಂಬಿಕೆ ಇಲ್ಲ !
ಸರ್ವೋಚ್ಚ ನ್ಯಾಯಾಲಯವು ಸುಶಾಂತಸಿಂಹ ರಾಜಪೂತ್ ಇವರ ಮೃತ್ಯು ಪ್ರಕರಣದ ತನಿಖೆಯನ್ನು ಮುಂಬಯಿ ಪೊಲೀಸರಿಂದ ‘ಸಿಬಿಐ’ಗೆ ಒಪ್ಪಿಸಿದ್ದರಿಂದ ಸಿಡಿಮಿಡಿಗೊಂಡಿದ್ದರಿಂದ ‘ಸಿಬಿಐ’ಗೆ ಗುರಿ ಮಾಡಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ನಾಯಕರು ಹೇಳಿಕೆಯನ್ನು ನೀಡುತ್ತಿದ್ದಾರೆ; ಆದರೆ ದಾಭೊಲಕರ ಪ್ರಕರಣದಲ್ಲಿ ಅವರದ್ದೇ ಗೃಹ ಇಲಾಖೆಯು ಮಾಡಿದ ತಪ್ಪಾದ ತನಿಖೆಯ ಪರಿಣಾಮವನ್ನು ಸನಾತನ ಸಂಸ್ಥೆಯು ಅನುಭವಿಸಬೇಕಾಗುತ್ತಿದೆ.