ರಾಯಚೂರಿನಲ್ಲಿ ಭಗವಾನ ಶ್ರೀರಾಮನ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ‘ಪೋಸ್ಟ್’ ಪ್ರಸಾರ ಮಾಡಿದ್ದ ಆರೋಪಿ ಜಹೀರನ ಬಂಧನ

ಬಂಧನಕ್ಕಾಗಿ ಪೊಲೀಸ್ ಠಾಣೆಯ ಎದುರು ಹಿಂದೂ ಧರ್ಮಪ್ರೇಮಿಗಳಿಂದ ಶಾಂತಿಯುತ ಪ್ರತಿಭಟನೆ !

  • ಬೆಂಗಳೂರಿನಲ್ಲಿ ಮತಾಂಧರು ಆಯೋಜನಾಬದ್ಧವಾಗಿ ಗಲಭೆಯನ್ನು ನಡೆಸಿ ಹಾನಿಯನ್ನು ಮಾಡಿದರು ಆದರೆ ಹಿಂದೂಗಳ ಮಾತ್ರ ಕಾನೂನುಮಾರ್ಗದಿಂದ ಆಂದೋಲನವನ್ನು ಮಾಡಿ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಹಿಂದೂಗಳಿಗೆ ಅಸಹಿಷ್ಣು ಎಂದು ಹೇಳುವವರು ಹಾಗೂ ಪ್ರಶಸ್ತಿಯನ್ನು ಹಿಂದಿರುಗಿಸುವವರು, ಇದರತ್ತ ಗಮನ ಹರಿಸುವುದಿಲ್ಲ. ತದ್ವಿರುದ್ಧ ಅವರು ಮತಾಂಧರ ಹಿಂಸಾಚಾರದ ಬಗ್ಗೆ ಮೌನವಾಗಿರುತ್ತಾರೆ, ಎಂಬುದು ಗಮನಕ್ಕೆ ಬರುತ್ತದೆ !

ರಾಯಚೂರು – ಫೇಸ್‌ಬುಕ್‌ನಲ್ಲಿ ಭಗವಾನ ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಸಾರ ಮಾಡಿದ್ದ ಪ್ರಕರಣದಲ್ಲಿ ಇಲ್ಲಿಯ ಪೊಲೀಸರು ಜಹೀರನನ್ನು ಬಂಧಿಸಿದ್ದಾರೆ. ಈ ಪೋಸ್ಟ್‌ನಿಂದಾಗಿ ದೇವದುರ್ಗ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿತ್ತು. ಈ ಅವಹೇಳನಕಾರಿ ಪೋಸ್ಟ್ ವಿರುದ್ಧ ಹಿಂದೂ ಧರ್ಮಪ್ರೇಮಿಗಳು ಪೊಲೀಸ್ ಠಾಣೆಯ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದರು ಹಾಗೂ ಶಾಂತಿಯಿಂದ ಪ್ರತಿಭಟನೆಯನ್ನು ಮಾಡಿದರು. ಆರೋಪಿಯನ್ನು ಬಂಧಿಸಿದ ನಂತರ ಹಾಗೂ ಎಫ್‌ಐಆರ್ ದಾಖಲಿಸಿದ್ದನ್ನು ನೋಡಿದ ಬಳಿಕ ಸ್ಥಳದಿಂದ ತೆರಳುವುದಾಗಿ ಠಾಣೆ ಮುಂದೆ ಜಮಾಯಿಸಿರುವ ಗುಂಪು ಪಣತೊಟ್ಟಿತ್ತು. ಈ ಧರ್ಮಪ್ರೇಮಿಗಳಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರೂ ಸಹಭಾಗಿಯಾಗಿದ್ದರು.