ಹಾವಡಾ (ಬಂಗಾಲ)ದಲ್ಲಿ ಮತಾಂಧರಿಂದ ಪೊಲೀಸರ ಮೇಲೆ ಹಲ್ಲೆ
ಸಂಚಾರನಿಷೇಧ ಇರುವಾಗ ಇಲ್ಲಿಯ ಬಹುಸಂಖ್ಯಾತ ಟಕಿಯಾಪಾದ ಬೆಲಿಲಿಯಸ್ ಭಾಗದಲ್ಲಿ ಮತಾಂಧರು ಪೊಲೀಸರ ಮೇಲೆ ಹಲ್ಲೆ ಮಾಡಿದರು. ಮತಾಂಧರು ಪೊಲೀಸರನ್ನು ಥಳಿಸಿದರು, ಅದೇರೀತಿ ಅವರ ಮೇಲೆ ಕಲ್ಲು ತೂರಾಟವೂ ಮಾಡಿದರು. ಇದರಲ್ಲಿ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡರು. ಇತರ ಪೊಲೀಸರು ಪಲಾಯನ ಮಾಡಿದ್ದರಿಂದ ಬದುಕಿದರು. ಪೊಲೀಸರ ೨ ವಾಹನಗಳನ್ನೂ ಧ್ವಂಸಗೊಳಿಸಿದರು.