‘ಆಶ್ರಮ’ ಈ ವೆಬ್ ಸಿರಿಸ್‌ಗೆ ಧರ್ಮಪ್ರೇಮಿಗಳಿಂದ ವಿರೋಧ : ನಿಷೇಧಿಸುವಂತೆ ಆಗ್ರಹ

#BanAashramWebSeries ಈ ಹ್ಯಾಶ್‌ಟ್ಯಾಗ್ ಟ್ರೆಂಡ್ ೫ ನೇ ಸ್ಥಾನದಲ್ಲಿ

ನವ ದೆಹಲಿ – ಮುಂಬರುವ ‘ಆಶ್ರಮ’ ಈ ವೆಬ್ ಸಿರಿಸ್‌ನಲ್ಲಿ ಸಾಧುಗಳನ್ನು ಅವಮಾನಿಸಿದ್ದರಿಂದ ಅದನ್ನು ನಿಷೇಧಿಸುವಂತೆ ಧರ್ಮಪ್ರೇಮಿಗಳು ಆಗ್ರಹಿಸುತ್ತಿದ್ದಾರೆ. ಈ ವೆಬ್ ಸಿರಿಸ್‌ನಲ್ಲಿ ಓರ್ವ ಕಾಲ್ಪನಿಕ ಪಾತ್ರದಲ್ಲಿ ‘ಬಾಬಾ ನಿರಾಲಾ ಕಾಶಿಪುರವಾಲಾ’ನ ಕಥೆಯನ್ನು ತೋರಿಸಲಾಗಿದೆ. ‘ಈ ಬಾಬಾ ಆಧ್ಯಾತ್ಮಿಕವಾಗಿದ್ದಾನೆಂದು ಹೇಳಿ ಅಪರಾಧಿ ಚಟುವಟಿಕೆಗಳನ್ನು ಮಾಡುತ್ತಾನೆ’, ಎಂದು ಈ ವೆಬ್ ಸಿರಿಸ್‌ನಲ್ಲಿ ತೋರಿಸಲಾಗಿದೆ. ಇದರಿಂದ ಹಿಂದೂ ಹಾಗೂ ಅವರ ಸಂಘಟನೆಗಳಿಂದ ಇದನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಅದಕ್ಕಾಗಿ #BanAashramWebSeries ಈ ಹ್ಯಾಶ್‌ಟ್ಯಾಗ್ ಮೂಲಕ ಟ್ವೀಟರ್‌ನಲ್ಲಿ ಟ್ರೆಂಡ್ ಕೂಡಾ ಮಾಡಲಾಯಿತು. ಈ ಟ್ರೆಂಡ್ ರಾಷ್ಟ್ರೀಯ ಮಟ್ಟದಲ್ಲಿ ೫ ನೇ ಸ್ಥಾನದಲ್ಲಿತ್ತು. ಇದರಲ್ಲಿ ೪೦ ಸಾವಿರಕ್ಕೂ ಹೆಚ್ಚು ಜನರು ಟ್ವೀಟ್ ಮಾಡುವ ಮೂಲಕ ವೆಬ್ ಸಿರಿಸ್‌ಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ, ಅದೇರೀತಿ ಈ ವೆಬ್ ಸಿರಿಸ್‌ಅನ್ನು ನಿಷೇಧಿಸುವಂತೆ ಕೇಂದ್ರ ಸಚಿವ ಪ್ರಕಾಶ ಜಾವಡೆಕರರವರಲ್ಲಿ ಆಗ್ರಹಿಸಲಾಗಿದೆ.

‘ಹಿಂದೂ ವಿರೋಧಿ ವೆಬ್ ಸಿರಿಸ್ ಮಾಡಬೇಕಾದಂತಹ ಅವಶ್ಯಕತೆ ಏನಿತ್ತು ? ಧಾರ್ಮಿಕ ಹಿಂದೂಗಳು ಈ ವೆಬ್ ಸಿರಿಸ್‌ಅನ್ನು ನಿಷೇಧಿಸುವಂತೆ ಆಗ್ರಹಿಸುತ್ತಿದ್ದಾರೆ’, ಎಂದು ಈ ಟ್ರೆಂಡ್‌ನಲ್ಲಿ ಓರ್ವ ವ್ಯಕ್ತಿ ಟ್ವೀಟ್ ಮಾಡುತ್ತಾ ನಿರ್ದೇಶಕ ಪ್ರಕಾಶ ಝಾರಿಗೆ ಪ್ರಶ್ನಿಸಿದ್ದಾರೆ.

ಟ್ರೇಲರ್(ಜಾಹಿರಾತಿ)ನಲ್ಲಿ ಏನಿದೆ ?

ಈ ವೆಬ್ ಸಿರಿಸ್‌ನ ಟ್ರೇಲರ್ ಪ್ರಸಾರವಾಗಿದೆ. ಅದರಲ್ಲಿ ಕಾಶಿಪುರವಾಲಾ ಬಾಬಾನ ಒಂದು ದೊಡ್ಡ ಆಶ್ರಮವನ್ನು ತೋರಿಸಲಾಗಿದೆ. ಆತ ಜನರಿಗೆ ನೇರ ಮೋಕ್ಷವನ್ನು ನೀಡುತ್ತಾನೆಂದು ಹೇಳುತ್ತಿರುವಂತೆ ತೋರಿಸಲಾಗಿದೆ. ಆತನಿಗೆ ರಾಜಕೀಯ ವ್ಯಕ್ತಿಗಳ ತನಕ ಪರಿಚಯವಿದೆ. ಇದೇ ಸಮಯದಲ್ಲಿ ೯ ಮಹಿಳೆಯರು ಮಾಯವಾಗುತ್ತಾರೆ ಹಾಗೂ ಬಾಬಾರವರ ಮೇಲೆ ಸಂದೇಹ ಪಡುತ್ತಾರೆ. ಈ ಮಹಿಳೆಯರು ಬಾಬಾರವರ ಆಶ್ರಮದಲ್ಲೆ ಬಂದಿಯಾಗಿರುತ್ತಾರೆ. ಈ ವೆಬ್ ಸಿರಿಸ್ ಆಗಸ್ಟ್ ೨೮ ರಂದು ‘ಎಮ್.ಎಕ್ಸ್. ಪ್ಲೇಯರ್’ ನಲ್ಲಿ ಪ್ರಸಾರವಾಗಲಿದೆ.

‘ಇದೊಂದು ಕಾಲ್ಪನಿಕ ಕಥೆಯಾಗಿದ್ದು ಸಾಧುಗಳ ಪರಂಪರೆಯ ಅವಮಾನ ಆಗುತ್ತಿರುವ ಬಗ್ಗೆ ತೋರಿಸುವ ಪ್ರಯತ್ನ (ವಂತೆ) !’

  • ಸಾಧುಗಳ ಪರಂಪರೆಯ ಅವಮಾನದ ಬಗ್ಗೆ ಇಷ್ಟೇಕೆ ಕಾಳಜಿ ? ಇದರಿಂದ ಅವಮಾನವನ್ನು ತಡೆಗಟ್ಟುವ ಪ್ರಯತ್ನಕ್ಕಿಂತ ಪ್ರತ್ಯಕ್ಷದಲ್ಲಿ ಅದರ ಅವಮಾನವಾಗುತ್ತಿದೆ. ಎಂಬುದೇ ಗಮನಕ್ಕೆ ಬರುತ್ತದೆ !
  • ಇಂತಹ ಕಾಲ್ಪನಿಕ ಕಥೆಯನ್ನು ತೋರಿಸಿ ಮೌಲ್ವಿ, ಪಾದ್ರಿ ಇವರ ಪರಂಪರೆಯ ಅವಮಾನವನ್ನು ತಡೆಯಲು ಯಾರೂ ಪ್ರಯತ್ನಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಈ ಟ್ರೇಲರ್‌ನಲ್ಲಿ ಮೊದಲು ಒಂದು ‘ಡಿಸ್ಕ್ಲೇಮರ್’ (ಬಹಿರಂಗ) ತೋರಿಸಲಾಗಿದೆ. ಅದರಲ್ಲಿ, ‘ವೆಬ್ ಸಿರಿಸ್ ನಿರ್ಮಿಸುವ ನಿರ್ಮಾಪಕರು ಸಾಧುಗಳನ್ನು ಗೌರವಿಸುತ್ತಾರೆ. ಈ ವೆಬ್ ಸಿರಿಸ್‌ನಲ್ಲಿರುವ ಕಥೆ ಕಾಲ್ಪನಿಕವಾಗಿದೆ. ಇದರಲ್ಲಿ ತೋರಿಸಿದ ಸಾಧುಗಳ ಕತೆಯಿಂದ ಸಾಧು ಪರಂಪರೆಯ ಅವಮಾನವನ್ನು ತೋರಿಸುವ ಪ್ರಯತ್ನವಾಗಿದೆ.’