ಅಕ್ಷೇಪಾರ್ಹ ಪೋಸ್ಟ್ ವಿರುದ್ಧ ದೂರನ್ನು ದಾಖಲಿಸಲು ಹೋದಾಗ ಮತಾಂಧರು ನನ್ನ ದ್ವಿಚಕ್ರಕ್ಕೆ ಬೆಂಕಿ ಹಚ್ಚಿದರು!
ಮೌಲ್ವಿಯ ಈ ದೂರಿನಿಂದ ‘ಗಲಭೆಕೋರ ಮತಾಂಧರು ಹಿಂದೂಗಳಿಗೆ ಅಥವಾ ಪೊಲೀಸರನ್ನು ಗುರಿಯಾಗಿಸಿಲ್ಲ, ಅದು ಅವರ ಉದ್ರೇಕ ಇತ್ತು ಹಾಗೂ ಅದರಲ್ಲಿ ನನ್ನ ವಾಹನವು ಹಾನಿಗೀಡಾಯಿತು’, ಎಂದು ತೋರಿಸಲಿಕ್ಕಿದೆ, ಇದನ್ನು ತಿಳಿಯಲು ಜನರು ದಡ್ಡರಲ್ಲ !
ಇದು ಮತಾಂಧರ ಕುಕೃತ್ಯವನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ, ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿದೆ ?
ಬೆಂಗಳೂರು – ಇಲ್ಲಿನ ಗಲಭೆಯ ಸಮಯದಲ್ಲಿ ಕಿಡಿಗೇಡಿಗಳು ನನ್ನ ದ್ವಿಚಕ್ರ ವಾಹನಕ್ಕೂ ಬೆಂಕಿ ಹಚ್ಚಿದ್ದಾರೆ, ಎಂದು ಮೌಲ್ವಿ ಪಿರ್ದೋಷ್ ಪಾಷಾರವರು ಡಿ.ಜೆ.ಹಳ್ಳಿ ಪೊಲೀಸ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
‘ಆಗಸ್ಟ್ ೧೧ ರ ಗಲಭೆಯ ಸಮಯದಲ್ಲಿ ಸಂಜೆ ೭.೩೦ ಕ್ಕೆ ಮೊಹಮ್ಮದ ಪೈಗಂಬರ ಬಗ್ಗೆ ವಿರುದ್ಧ ಅಕ್ಷೇಪಾರ್ಹ ಪೋಸ್ಟ್ ಮಾಡಿದ ನವೀನ್ ವಿರುದ್ಧ ದೂರನ್ನು ದಾಖಲಿಸಲು ಡಿ.ಜೆ. ಹಳ್ಳಿ ಪೊಲೀಸ್ ಠಾಣೆಗೆ ಹೋಗಿದ್ದೆ. ಪೊಲೀಸ್ ಠಾಣೆಯಿಂದ ಹೊರಬಂದ ನಂತರ ನೂರಾರು ಸಂಖ್ಯೆಯಲ್ಲಿ ಜನರು ಒಟ್ಟಾಗಿರುವುದು ನನಗೆ ಕಾಣಿಸಿತು. ಆದ್ದರಿಂದ ನನ್ನ ದ್ವಿಚಕ್ರ ವಾಹನವನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಠಾಣೆಯ ಆವರಣಕ್ಕೆ ನುಗ್ಗಿದ ಜನರು ನನ್ನ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ನವೀನ್ ವಿರುದ್ಧ ದೂರನ್ನು ದಾಖಲಿಸಲು ನಾವು ಕೇವಲ ೧೪ ಮಂದಿ ಹೋಗಿದ್ದೆವು. ಪೊಲೀಸ ನಿರೀಕ್ಷಕರು ದೂರನ್ನು ಸ್ವೀಕರಿಸಿ ‘ಅಪರಾಧಿಯನ್ನು ಬಂಧಿಸುವೆವು’, ಎಂದು ಹೇಳಿದರು. ಸ್ವೀಕೃತಿಯನ್ನು ಪಡೆಯಲು ನಾವು ಪೊಲೀಸ್ ಠಾಣೆಯ ಹತ್ತಿರದಲ್ಲೇ ನಿಂತಿದ್ದೆವು. ಅದೇ ಸಮಯದಲ್ಲಿ ಪೊಲೀಸ್ ಠಾಣೆಯ ಪ್ರವೇಶದ್ವಾರವನ್ನು ಮುರಿದು ಒಳನುಗ್ಗಿದ ಕಿಡಿಗೇಡಿಗಳು ಗಲಾಟೆ ನಡೆಸಿ ನನ್ನ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದರು’ ಎಂದು ಪಿರ್ದೋಷ್ ಪಾಷಾರವರು ಹೇಳಿದ್ದಾರೆ.