ಸನಾತನ ಸಂಸ್ಥೆಯ ‘ಶ್ರಾದ್ಧ ರಿಚ್ಯುವಲ್ಸ್ (Shraddh Rituals) ಆಪ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ನೂತನ ಸ್ವರೂಪದ ‘ಅಂಡ್ರಾಯ್ಡ್ ಆಪ್ನ ಲೋಕಾರ್ಪಣೆ

ಸನಾತನ ಸಂಸ್ಥೆಯ ‘ಶ್ರಾದ್ಧ ರಿಚ್ಯುವಲ್ಸ್ ‘ಆಪ್ ಲೋಕಾರ್ಪಣೆ ಮಾಡುತ್ತಿರುವ ಪೂ. ನಿಲೇಶ ಸಿಂಗಬಾಳ

ಫೊಂಡಾ (ಗೋವಾ) – ಸನಾತನ ಸಂಸ್ಥೆಯ ನೂತನ ‘ಶ್ರಾದ್ಧ ರಿಚ್ಯುವಲ್ಸ್ (Shraddh Rituals) ಆಪ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ನೂತನರೂಪದ ‘ಅಂಡ್ರೈಡ್ ಆಪನ್ನು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಪೂ.ನೀಲೇಶ ಸಿಂಗಬಾಳ ಇವರ ಹಸ್ತದಿಂದ ಸೆಪ್ಟೆಂಬರ್ ೨ ರಂದು ಲೋಕಾರ್ಪಣೆಯನ್ನು ಮಾಡಲಾಯಿತು. ಸನಾತನ ಸಂಸ್ಥೆಯ ‘ಶ್ರಾದ್ಧ ರಿಚ್ಯುವಲ್ಸ್ ಈ ‘ಆಪ್ ಶ್ರಾದ್ಧ ವಿಧಿಗೆ ಸಂಬಂಧಿಸಿದ್ದು ಇದು ಕನ್ನಡ, ಮರಾಠಿ, ಹಿಂದಿ ಹಾಗೂ ಆಂಗ್ಲ ಈ ೪ ಭಾಷೆಗಳಲ್ಲಿ ಲಭ್ಯವಿದೆ. ಹಿಂದೂ ಜನಜಾಗೃತಿ ಸಮಿತಿಯ ನೂತನ ಸ್ವರೂಪದ ಆಪ್ ಮರಾಠಿ, ಹಿಂದಿ ಮತ್ತು ಆಂಗ್ಲ ಈ ೩ ಭಾಷೆಗಳಲ್ಲಿ ಲಭ್ಯವಿದೆ ಜಾಲತಾಣದ ವಾಚಕರು, ಜಿಜ್ಞಾಸುಗಳು, ಧರ್ಮಪ್ರೇಮಿಗಳು, ಜಾಹೀರಾತುದಾರರು ಹಾಗೂ ಹಿತಚಿಂತಕರು ಈ ಆಪ್‌ಅನ್ನು ಸಂಚಾರವಾಣಿಯಲ್ಲಿ ‘ಡೌನ್‌ಲೋಡ್ ಮಾಡಿಕೊಂಡು ಅದರ ಅಮೂಲ್ಯ ಜ್ಞಾನದ ಲಾಭವನ್ನು ಪಡೆದುಕೊಳ್ಳಬೇಕು, ಅದೇರೀತಿ ತಮ್ಮ ಪರಿಚಯದವರಿಗೆ, ಸಂಬಂಧಿಕರಿಗೂ ಡೌನ್‌ಲೋಡ್ ಮಾಡಲು ಹೇಳಿರಿ, ಎಂದು ಎರಡೂ ಸಂಸ್ಥೆಗಳು ಕರೆ ನೀಡಿವೆ.

ಹಿಂದೂ ಜನಜಾಗೃತಿ ಸಮಿತಿಯ ನೂತನ ಸ್ವರೂಪದ ‘ಆಪ್’ನ ವೈಶಿಷ್ಟ್ಯಗಳು

  • ಹಿಂದೂ ಹಾಗೂ ರಾಷ್ಟ್ರಗಳ ಮೇಲೆ ಆಗುವ ದೌರ್ಜನ್ಯವನ್ನು ಬಹಿರಂಗ ಪಡಿಸುವ ವಾರ್ತೆಗಳು
  • ಲವ್ ಜಿಹಾದ್, ದೇವಸ್ಥಾನ ರಕ್ಷಣೆ, ಮತಾಂತರ, ಗೋಹತ್ಯೆ, ಇತಿಹಾಸದ ವಿಕೃತೀಕರಣ ಇತ್ಯಾದಿ ಸಮಸ್ಯೆಗಳ ಮೇಲೆ ಜಾಗೃತಿಯ ಬರವಣಿಗೆಗಳು
  • ಧರ್ಮಶಾಸ್ತ್ರ, ಹಬ್ಬ-ವ್ರತ ಇತ್ಯಾದಿ ವಿಷಯಗಳ ಶಾಸ್ತ್ರೀಯ ಮಾಹಿತಿ
  •  ಹಿಂದೂ ರಾಷ್ಟ್ರದ ಬಗ್ಗೆ ಮಾರ್ಗದರ್ಶನ ಮಾಡುವ ಲೇಖನಗಳು

ಸನಾತನ ಸಂಸ್ಥೆಯ ‘ಶ್ರಾದ್ಧ ರಿಚ್ಯುವಲ್ಸ್ ಆಪ್‌ನ ವೈಶಿಷ್ಟ್ಯಗಳು

  • ಶ್ರಾದ್ಧದ ಬಗ್ಗೆ ಶಾಸ್ತ್ರೀಯ ಮಾಹಿತಿ ಶ್ರಾದ್ಧ ವಿಧಿಗೆ ಸಂಬಂಧಿಸಿದ ವಿವಿಧ ವಿಡಿಯೋಗಳು
  • ಭಗವಾನ ದತ್ತಾತ್ರೇಯರಿಗೆ ಸಂಬಂಧಿಸಿದ ಲೇಖನಗಳು
  • ‘ಶ್ರೀ ಗುರುದೇವ ದತ್ತ ನಾಮಜಪದ ಆಡಿಯೋಗಳು

ಹಿಂದೂ ಜನಜಾಗೃತಿ ಸಮಿತಿಯ ನೂತನ ಸ್ವರೂಪದ ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಲಿಂಕ್ :

https://www.hindujagruti.org/hjsapp

Shraddh Rituals ಈ ಆಪ್ ಡೌನ್‌ಲೋಡ್ ಮಾಡಲು ಲಿಂಕ್ :

https://www.sanatan.org/shraddh-app