ಸನಾತನ ಸಂಸ್ಥೆಯ ಫೇಸ್‌ಬುಕ್ ಪೇಜ್ ಬಂದ್ ಹಿನ್ನೆಲೆ !

‘ಫೇಸ್‌ಬುಕ್’ನಿಂದ ಸನಾತನ ಸಂಸ್ಥೆಯ ೫ ‘ಫೇಸ್‌ಬುಕ್’ ಪುಟ ಹಾಗೂ ೨ ‘ಇನ್‌ಸ್ಟಾಗ್ರಾಮ್’ ಖಾತೆಯ ಮೇಲೆ ನಿಷೇಧ ಇದು ಫೇಸ್‌ಬುಕ್‌ನ ಹಿಂದೂದ್ವೇಷ ! ಭಯೋತ್ಪಾದಕರು ಹಾಗೂ ಅವರ ಸಂಘಟನೆಯ ಫೇಸ್‌ಬುಕ್ ಪುಟಗಳನ್ನು ನಿಷೇಧಿಸುವ ಬದಲು ಹಿಂದೂ ಧರ್ಮನ್ನು ಶಾಸ್ತ್ರೀಯ ಭಾಷೆಯಲ್ಲಿ ಪ್ರಸಾರ ಮಾಡುವ ಸನಾತನ ಸಂಸ್ಥೆಯ ಲೇಖನಗಳನ್ನು ‘ಆಕ್ಷೇಪಾರ್ಹ’ವೆಂದು ನಿರ್ಧರಿಸಲಾಗುತ್ತಿದೆ !

ಮುಂಬಯಿ – ‘ಫೇಸ್‌ಬುಕ್’ನಿಂದ ಪ್ರಖರ ಹಿಂದುತ್ವನಿಷ್ಠ ಹಾಗೂ ಭಾಜಪದ ಭಾಗ್ಯನಗರದಲ್ಲಿಯ ಶಾಸಕ ಟಿ. ರಾಜಾಸಿಂಹ ಇವರ ಅಸ್ತಿತ್ವದಲ್ಲಿರದ ಫೇಸ್‌ಬುಕ್ ಪೇಜ್ ಮೇಲೆ ನಿಷೇಧ ಹೇರಿದ ನಂತರ ಫೇಸ್‌ಬುಕ್ ಸನಾತನ ಸಂಸ್ಥೆಯ ೫ ಅಧಿಕೃತ ‘ಫೇಸ್‌ಬುಕ್ ಪೇಜಸ್’(ಫೇಸ್‌ಬುಕ್ ಪುಟಗಳು) ಹಾಗೂ ೨ ‘ಇನ್‌ಸ್ಟಾಗ್ರಾಮ್’ ಖಾತೆಗಳನ್ನು ನಿಷೇಧಿಸಿದೆ. ಅದೇರೀತಿ ಕೆಲವು ಸಾಧಕರ ವೈಯಕ್ತಿಕ ಫೇಸ್‌ಬುಕ್ ಖಾತೆಗಳನ್ನೂ ನಿಷೇಧಿಸಿದೆ.

೧. ೩ ಸಪ್ಟೆಂಬರ್ ೨೦೨೦ ರ ಮಧ್ಯರಾತ್ರಿ ಅಧ್ಯಾತ್ಮಪ್ರಸಾರ ಮಾಡುವ ಸನಾತನ ಸಂಸ್ಥೆಯ ‘ಸನಾತನ ಸಂಸ್ಥೆ ಮರಾಠಿ’ ಹಾಗೂ ಸನಾತನ ಸಂಸ್ಥೆ ಆಂಗ್ಲ’, ಅದೇರೀತಿ ‘ಸನಾತನ ಸಂಸ್ಥೆಯ ಅಧಿಕೃತ ಪ್ರೋಫೈಲ್ ಪೇಜ್’ ಹೀಗೆ ೩ ಪೇಜಸ್ ನಿಷೇಧಿಸಿದೆ.

೨. ೪ ಸೆಪ್ಟೆಂಬರ್ ೨೦೨೦ ರಂದು ತೆಲಂಗಾಣ ರಾಜ್ಯದ ಭಾಗ್ಯನಗರದಲ್ಲಿಯ ಭಾಜಪದ ಶಾಸಕ ಹಾಗೂ ಪ್ರಖರ ಹಿಂದುತ್ವನಿಷ್ಠ ಶ್ರೀ. ಟಿ. ರಾಜಾಸಿಂಹ ಇವರ ‘ಫೇಸ್‌ಬುಕ್’ ಹಾಗೂ ‘ಇನ್‌ಸ್ಟಾಗ್ರಾಮ್’ ಪೇಜ್‌ಗಳನ್ನು ನಿಷೇಧಿಸಿದೆ.

೩. ೫ ಸೆಪ್ಟೆಂಬರ್ ೨೦೨೦ ರಂದು ‘ಸನಾತನ ಸಂಸ್ಥೆ ಕರ್ನಾಟಕ’ ಹಾಗೂ ‘ಸನಾತನ ಸಂಸ್ಥೆ ಬೆಳಗಾವ’ ಈ ‘ಪೇಜಸ್’ ನಿಷೇಧಿಸಿತ್ತು.

೪. ಸನಾತನ ಸಂಸ್ಥೆಯ ಈ ‘ಫೇಸ್‌ಬುಕ್ ಪೇಜಸ್’ ಮೂಲಕ ಅಧ್ಯಾತ್ಮಪ್ರಸಾರ ಮಾಡುವ ಎಲ್ಲ ಸಾಧಕರ ವೈಯಕ್ತಿಕ ‘ಫೇಸ್‌ಬುಕ್’ ಖಾತೆಗಳನ್ನೂ ನಿಷೇಧಿಸಿತ್ತು. ಅದರ ಪರಿಣಾಮ ವಿಶ್ವದಾದ್ಯಂತ ಆಗುತ್ತಿರುವ ಅಧ್ಯಾತ್ಮಪ್ರಸಾರಕ್ಕೆ, ಧರ್ಮಪ್ರಸಾರದ ಕಾರ್ಯಕ್ಕೆ ತೊಡಕುಂಟಾಗಿದೆ.

೫. ಕೆಲವು ದಿನಗಳ ಹಿಂದೆ ಹಿಂದುತ್ವನಿಷ್ಠ ಸಂಪಾದಕ ಶ್ರೀ. ಸುರೇಶ ಚವ್ಹಾಣಕೆಯವರ ‘ಸುದರ್ಶನ ನ್ಯೂಸ್’ನ ‘ಫೇಸ್‌ಬುಕ್ ಪೇಜ್’ ಮೇಲೆಯೂ ಇದೇ ರೀತಿ ನಿಷೇಧ ಹೇರಲಾಗಿತ್ತು.

೬. ‘OpIndia’ ಈ ರಾಷ್ಟ್ರವಾದಿ ಹಾಗೂ ಹಿಂದುತ್ವನಿಷ್ಠ ‘ನ್ಯೂಸ್ ಪೋರ್ಟಲ್’ನ ‘ಫೇಸ್‌ಬುಕ್ ಪೇಜ್’ ಮೇಲೆ ನಿಷೇಧ ಹೇರಲಾಗಿದೆ.

೭. ೨೦೧೨ ರಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಅಧಿಕೃತ ‘ಫೇಸ್‌ಬುಕ್ ಪೇಜ್’ ಮೇಲೆ ಹೇರಿದ್ದ ನಿಷೇಧವು ಇಲ್ಲಿಯವರೆಗೆ ‘ಫೆಸ್‌ಬುಕ್’ ತೆಗೆಯಲಿಲ್ಲ.

ಇದು ಬೆರಳೆಣಿಕೆಯಷ್ಟು ಉದಾಹರಣೆಗಳಾಗಿವೆ. ಹೀಗೆ ಅನೇಕ ಹಿಂದೂ ಮುಖಂಡರ ಹಾಗೂ ಸಂಘಟನೆಗಳ ‘ಫೇಸ್‌ಬುಕ್ ಪೇಜಸ್’ ಮೇಲೆ ನಿಷೇಧ ಹೇರಿರಬಹುದು.

‘ಸನಾತನ ಡಾಟ್ ಓಆರ್‌ಜಿ’ಯ ಲಿಂಕನ್ನು ಶೇರ್ ಮಾಡುವ ಮೇಲೆಯೂ ‘ಫೇಸ್‌ಬುಕ್’ ನಿಷೇಧ ಹೇರಿದೆ.

  • ಭವಿಷ್ಯದಲ್ಲಿ ಹಿಂದೂಗಳು ಫೇಸ್‌ಬುಕ್ ಮೇಲೆ ಬಹಿಷ್ಕಾರ ಹೇರಿ ಅದಕ್ಕೆ ಪಾಠ ಕಲಿಸಿದರೆ ಆಶ್ವರ್ಯ ಪಡಬೇಕಿಲ್ಲ !
  • ಕೇಂದ್ರ ಸರಕಾರವು ಇದರ ಕಡೆ ಗಮನಹರಿಸಿ ‘ಫೇಸ್‌ಬುಕ್’ ಮೇಲೆ ಕ್ರಮ ಕೈಗೊಳ್ಳುವುದು ಅಪೇಕ್ಷಿತವಿದೆ !

‘ಸನಾತನ ಡಾಟ್ ಓಆರ್‌ಜಿ’ಯ ಲಿಂಕ್ ಶೇರ್ ಮಾಡಲೂ ‘ಫೇಸ್‌ಬುಕ್’ ನಿಷೇಧ ಹೇರಿದೆ. ಆದ್ದರಿಂದ ಫೆಸ್‌ಬುಕ್‌ನಿಂದ ಸನಾತನ ಸಂಸ್ಥೆಯ ಜಾಲತಾಣದಿಂದ ಆಗುತ್ತಿದ್ದ ಪ್ರಸಾರವೂ ನಿಂತಿದೆ. ಈ ಜಾಲತಾಣದಿಂದ ಜನರಿಗೆ ಕೊರೋನಾದ ವಿಪತ್ತು, ಅದೇರೀತಿ ಒಟ್ಟಾರೆ ಆಪತ್ಕಾಲದ ಬಗ್ಗೆ ಆಧ್ಯಾತ್ಮಿಕ ಸ್ತರದಲ್ಲಿ ಮಾಡುವ ಮಾರ್ಗದರ್ಶನವೂ ಇದರಿಂದ ನಿಂತಿದೆ.

ಸನಾತನ ಸಂಸ್ಥೆ ವತಿಯಿಂದ ನಿಷೇಧ ಹಿಂಪಡೆಯಲು ಒತ್ತಾಯಿಸಿ ಬೆಂಗಳೂರಿನಲ್ಲಿ ಸಂಸದರಾದ ತೇಜಸ್ವಿ ಸೂರ್ಯರವರಿಗೆ ಮನವಿ

ಕೆಲವು ದಿನಗಳ ಹಿಂದೆ ನಿಯಮಿತವಾಗಿ ಧರ್ಮಶಾಸ್ತ್ರ, ಅಧ್ಯಾತ್ಮ, ಸಾಧನೆ ಇತ್ಯಾದಿ ವಿಷಯಗಳ ಬಗ್ಗೆ ಪೋಸ್ಟ್ ಮಾಡಲಾಗುತ್ತಿದ್ದ ಸನಾತನ ಸಂಸ್ಥೆಯ ೫ ‘ಫೇಸ್‌ಬುಕ್ ಪುಟ’ಗಳನ್ನು ‘ಫೇಸ್‌ಬುಕ್’ ಏಕಾಏಕಿ ಬಂದ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೧೨ ರಂದು ಬೆಂಗಳೂರಿನಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ‘ಸ್ಟ್ಯಾಂಡಿಂಗ್ ಕಮಿಟಿ’ಯ ಸದಸ್ಯರು ಮತ್ತು ಸಂಸದರಾದ ತೇಜಸ್ವಿ ಸೂರ್ಯ ಇವರಿಗೆ ‘ಹೀಗೆ ಏಕಾಏಕಿ ಮಾಡಿದ ಬಂದ್ ಹಿಂಪಡೆಯಲು ಪ್ರಯತ್ನಿಸಬೇಕು’ ಎಂದು ಮನವಿಯನ್ನು ನೀಡಲಾಯಿತು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ, ಸನಾತನ ಸಂಸ್ಥೆಯ ಶ್ರೀ. ಸೋಮಶೇಖರ, ಭಾಜಪದ ನವೀನ್ ಸೇರಿದಂತೆ ಇತರ ಧರ್ಮನಿಷ್ಠ ಸಂಸ್ಥೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ವೇಳೆ ಶ್ರೀ. ತೇಜಸ್ವಿ ಸೂರ್ಯ ಇವರಿಗೆ ಈ ಮನವಿಯನ್ನು ನೀಡುತ್ತಾ ‘ಫೇಸ್‌ಬುಕ್ ಕಾರಣ ಇಲ್ಲದೇ ಹಿಂದುತ್ವನಿಷ್ಠರು, ಹಿಂದೂ ನೇತಾರಾರ ಮತ್ತು ಹಿಂದೂ ಸಂಘಟನೆಗಳ ‘ಪೇಜ್’ಗಳನ್ನು ಬಂದ್ ಮಾಡುತ್ತಿದೆ. ಆದರೆ ಭಯೋತ್ಪಾದನೆ ಹಬ್ಬಿಸುವ ‘ಪೇಜ್’ ಗಳ ಮೇಲೆ ಯಾವುದೇ ಕ್ರಮಗೊಳ್ಳುತ್ತಿಲ್ಲ’ ಎಂದು ಹೇಳಲಾಯಿತು.

ಸಂಸದೀಯ ಅಧಿವೇಶನದಲ್ಲಿಯೂ ಚರ್ಚಿಸುವೆನು ! – ತೇಜಸ್ವೀ ಸೂರ್ಯ

ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ ಇವರು ಈ ವೇಳೆ ಮಾತನಾಡುತ್ತಾ “ಫೇಸ್‌ಬುಕ್, ಹಿಂದೂಪರ ಕಾರ್ಯ ಮಾಡುತ್ತಿರುವ ಸಂಘಟನೆಗಳ ‘ಪೇಜ್’ಗಳನ್ನು ಬಂದ್ ಮಾಡುತ್ತಿರುವ ಷಡ್ಯಂತ್ರ ನನ್ನ ಗಮನಕ್ಕೆ ಬಂದಿದೆ, ಅದರ ಬಗ್ಗೆ ನಾನು ಸ್ವತಃ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಹಾಗೆಯೇ ಇದರ ಬಗ್ಗೆ ‘ಫೇಸ್‌ಬುಕ್’ ನ ಭಾರತದ ಮುಖ್ಯಸ್ಥರ ವಿಚಾರಣೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು. ಹಾಗೆಯೇ ಇದರ ಬಗ್ಗೆ ಸಂಸದೀಯ ಅಧಿವೇಶನದಲ್ಲಿಯೂ ಚರ್ಚೆ ಮಾಡುತ್ತೇನೆ” ಎಂದು ತಿಳಿಸಿದರು.