ಧ್ವನಿವರ್ಧಕವನ್ನು ಬಲವಂತವಾಗಿ ಬಂದ್ ಮಾಡಿಸಿದ ಮತಾಂಧರು !
|
ಲಕ್ಷ್ಮಣಪುರಿ(ಉತ್ತರಪ್ರದೇಶ) – ದೇವಸ್ಥಾನದಲ್ಲಿ ಧ್ವನಿವರ್ಧಕ ಹಾಕಿದ ಕಾರಣವನ್ನು ನೀಡುತ್ತಾ ಮತಾಂಧರು ಸ್ವರಾಜ ಸಿಂಹ ಎಂಬ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದರು. ಉತ್ತರಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ಅಚ್ಛೆಜಾ ಎಂಬ ಗ್ರಾಮದಲ್ಲಿ ಈ ಘಟನೆ ಇತ್ತೀಚೆಗೆ ಸಂಭವಿಸಿದೆ. ಈ ಪ್ರಕರಣದ ಬಗ್ಗೆ ಸ್ವರಾಜ ಸಿಂಹ ಇವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಫಝಲ್, ಶರಾಫ್ ಹಾಗೂ ಗುಲಜಾರನನ್ನು ಬಂಧಿಸಿದ್ದಾರೆ.
ಸ್ವರಾಜ ಸಿಂಹ ಇವರು ತಮ್ಮ ದೂರಿನಲ್ಲಿ, ಪ್ರತಿದಿನ ಧ್ವನಿವರ್ಧಕದಿಂದ ಭಜನೆ ಹಗೂ ಆರತಿಯನ್ನು ಹಾಕುತ್ತೇವೆ. ೪ ಸಪ್ಟೆಂಬರ್ ೨೦೨೦ ರಂದು ಬೆಳಗ್ಗೆ ಗ್ರಾಮದ ಕೆಲವು ಮತಾಂಧರು ಧ್ವನಿವರ್ಧಕವನ್ನು ಬಂದ್ ಮಾಡುವಂತೆ ಬೆದರಿಕೆಯೊಡ್ಡಿದರು. ಅದಕ್ಕೆ ನಾನು ವಿರೋಧಿಸಿದೆ; ಆದರೆ ಮತಾಂಧರು ಧ್ವನಿವರ್ಧಕವನ್ನು ಬಲವಂತವಾಗಿ ಬಂದ್ ಮಾಡಿದರು. ನಾನು ನನ್ನ ಮಗಳೊಂದಿಗೆ ಮಧ್ಯಾಹ್ನದ ಹೊಲದಿಂದ ಮೇವನ್ನು ತರಲು ಹೋಗಿದ್ದಾಗ ಮತಾಂಧರು ಅಲ್ಲಿ ಕೈಯಲ್ಲಿ ಕೋಲುಗಳನ್ನು ಹಿಡಿದು ಬಂದರು ಹಾಗೂ ಅವರಲ್ಲಿ ಅಫಝಲ್, ಶರಾಫ್ ಹಾಗೂ ಗುಲಜಾರ ಇವರು ಮತ್ತೊಮ್ಮೆ ನನಗೆ ಧ್ವನಿವರ್ಧಕವನ್ನು ಹಾಕದಂತೆ ಹಾಗೂ ಹಾಕಿದರೆ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದರು’, ಎಂದು ಹೇಳಿದರು.
A complaint was made by a devotee of himself being beaten up by locals over the issue of playing loudspeakers from a temple in a village under the Dankaur police station limits. His complaint has been registered and a probe has been launched: Vishal Pandey, ADCP, Greater Noida pic.twitter.com/4vqrF3iSr2
— ANI UP (@ANINewsUP) September 9, 2020
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಸುರಕ್ಷೆಯ ದೃಷ್ಟಿಯಿಂದ ಘಟನಾಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ, ಎಂದು ಪೊಲೀಸ್ ಆಯುಕ್ತ ವಿಶಾಲ ಪಾಂಡೆಯವರು ತಿಳಿಸಿದ್ದಾರೆ.