ಕೇರಳದಲ್ಲಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಕಾರ್ಯಕರ್ತನ ಹತ್ಯೆಯ ಪರಿಣಾಮ
|
ಕೊಚಿ (ಕೇರಳ) – ಸಯ್ಯದ ಮಹಮ್ಮದ ಸಲಾಹುದ್ದೀನ್ ಈ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ (‘ಪಿ.ಎಫ್.ಐ.’ನ) ಕಾರ್ಯಕರ್ತನನ್ನು ಸಪ್ಟೆಂಬರ್ ೮ ರಂದು ಕೇರಳದ ಕಣ್ಣೂರ ಜಿಲ್ಲೆಯ ಕೊಥೂಪಾರಂಬು ಹತ್ತಿರದ ಕನ್ನವಮ್‌ನಲ್ಲಿ ಹತ್ಯೆ ಮಾಡಲಾಗಿತ್ತು. ನಂತರ ಕೇರಳ ರಾಜ್ಯದ ಭಾಜಪ ಅಧ್ಯಕ್ಷ ಕೆ.ಸುರೇಂದ್ರನ್ ಹಾಗೂ ‘ಹಿಂದೂ ಹೆಲ್ಪಲೈನ್’ನ ನ್ಯಾಯವಾದಿ
ಪ್ರದೀಶ ವಿಶ್ವನಾಥ ಇವರಿಗೆ ಎಸ್.ಡಿ.ಪಿ.ಐ. (ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ), ಪಿ.ಎಫ್.ಐ. ಹಾಗೂ ಇಂಡಿಯನ್ ಯೂನಿಯನ್ ಆಫ್ ಮುಸ್ಲೀಮ್ ಲೀಗ್(ಐ.ಯು.ಎಮ್.ಎಲ್.) ಗುರಿಯಾಗಿಸಿವೆ.
Islamist threat against Pratheesh Viswanath and Kerala BJP President K. Surendran should be taken seriously https://t.co/V3jgvFBxIw
— Hindu Post (@hindupost) September 11, 2020
೧. ೧೯ ಜನವರಿ ೨೦೧೮ ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತ ಶ್ಯಾಮ ಪ್ರಸಾದ ಇವರ ಹತ್ಯೆಯ ಪ್ರಕರಣದಲ್ಲಿ ಸಲಾಹುದ್ದೀನ್ ೭ನೇ ಆರೋಪಿಯಾಗಿದ್ದನು. ಶ್ಯಾಮ ಪ್ರಸಾದ ‘ಐ.ಟಿ.ಐ., ಕಕ್ಕಯನಗಡ’ದ ವಿದ್ಯಾರ್ಥಿ ಹಾಗೂ ಕನ್ನವಮ್‌ನ ರಾ.ಸ್ವ. ಸೇವಕ ಸಂಘದ ಸಕ್ರಿಯ ಸದಸ್ಯನಾಗಿದ್ದನು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ ನಂಟಿದ್ದ ಜಿಹಾದಿಗಳು ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಆತನ ಹತ್ಯೆ ಮಾಡಿದ್ದರು. ಈ ಹತ್ಯೆ ಪ್ರಕರಣದಲ್ಲಿ ೧೩ ಜನರು ಆರೋಪಿಗಳಿದ್ದರು. ಹತ್ಯೆ ಮಾಡಿದವರಿಗೆ ಪರಾರಿಯಾಗಲು ಪಿ.ಎಫ್.ಐ.ಯು ಸಹಾಯ ಮಾಡಿರುವ ಆರೋಪವಿದೆ.
೨. ಸಲಾಹುದ್ದೀನ್ ಪರಾರಿಯಾಗಿದ್ದ. ನಂತರ ಮಾರ್ಚ್ ೨೦೧೯ ರಲ್ಲಿ ಕಣ್ಣೂರಿನ ಮಟ್ಟಾನೂರುದಲ್ಲಿಯ ದಂಡಾಧಿಕಾರಿ ನ್ಯಾಯಾಲಯಕ್ಕೆ ಶರಣಾದ. ನಂತರ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು ಹಾಗೂ ನಂತರ ಆತನ ಹತ್ಯೆಯಾಯಿತು.
ತುರ್ಕಸ್ತಾನದಲ್ಲಿಯ ಮಲ್ಯಾಳಿ ಮಹಿಳಾ ಜಿಹಾದಿ ಭಯೋತ್ಪಾದಕಿಯಿಂದ ಹಿಂದೂ ಮುಖಂಡನ ಹತ್ಯೆ ಮಾಡುವಂತೆ ಆಗ್ರಹತುರ್ಕಸ್ತಾನದಲ್ಲಿ ವಾಸಿಸುವ ಓರ್ವ ಮಲ್ಯಾಳಿ ಮಹಿಳಾ ಜಿಹಾದಿ ಭಯೋತ್ಪಾದಕಿಯು ಸಲಾಹುದ್ದೀನ್ ಹತ್ಯೆಯ ಸೇಡನ್ನು ತೀರಿಸಿಕೊಳ್ಳಲು ಹಿಂದೂಗಳ ರಕ್ತವನ್ನು ಬೇಡಿದಳು ಹಾಗೂ ಆಕೆಯ ಸ್ಥಳೀಯ ಸ್ನೇಹಿತರಿಗೆ ಭಾಜಪದ ಅಧ್ಯಕ್ಷ ಕೆ.ಸೆರೇಂದ್ರನ್ ಹಾಗೂ ನ್ಯಾಯವಾದಿ ಪ್ರದೀಶ ವಿಶ್ವನಾಥ ಇವರೊಂದಿಗೆ ಸಂಘದ ನಾಯಕರನ್ನು ಹತ್ಯೆ ಮಾಡುವಂತೆ ಆಗ್ರಹಿಸಿದ್ದಾಳೆ. ನ್ಯಾಯವಾದಿ ಪ್ರದೀಶ ವಿಶ್ವನಾಥರ ಪರಿಚಯನ್ಯಾಯವಾದಿ ಪ್ರದೀಶ ವಿಶ್ವನಾಥ ಇವರು ‘ಹಿಂದೂ ಸೇವಾ ಕೇಂದ್ರ’ ಹೆಸರಿನ ಸಂಸ್ಥೆಯು ನಡೆಸುತ್ತಿದ್ದಾರೆ. ಅವರು ದೇವಸ್ಥಾನದ ಭೂಮಿಯ ಮೇಲಿನ ಅನೇಕ ಅತಿಕ್ರಮಣಗಳನ್ನು ಬಹಿರಂಗ ಪಡಿಸಿದ್ದು ನ್ಯಾಯಾಲಯಗಳಲ್ಲಿ ಈ ಬಗ್ಗೆ ಸಕ್ರಿಯವಾಗಿ ಬೆಂಬತ್ತುವಿಕೆ ಮಾಡಿದ್ದಾರೆ. ಹೀಗೆ ಅನೇಕ ಭೂಮಿಗಳು ದೇವಸ್ಥಾನಗಳ ಹೆಸರಿನಲ್ಲಿವೆ; ಆದರೆ ಅದರ ಮೇಲೆ ರಾಜ್ಯ ಸರಕಾರ, ಮುಸಲ್ಮಾನ ಅಥವಾ ಕ್ರೈಸ್ತರ ವಶದಲ್ಲಿದೆ. ಅವರು ಶಬರಿಮಲೈ ಪ್ರಕರಣದ ಆಂದೋಲನದ ನೇತೃತ್ವವನ್ನು ವಹಿಸಿದ್ದರು. ಪ್ರದೀಶ ಇವರ ಸಂಸ್ಥೆಯು ಕೇರಳದಲ್ಲಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲ್ಲಿನ ೯ ಸಾವಿರಕ್ಕೂ ಹೆಚ್ಚು ಪೀಡಿತರನ್ನು ಕಾಪಾಡಿದ್ದಾರೆ. |