ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳ ಮೇಲಾಗುತ್ತಿರುವ ದಾಳಿ ಹಾಗೂ ದೇವಸ್ಥಾನದ ರಥವನ್ನು ಸುಟ್ಟುಹಾಕಿದ್ದನ್ನು ಖಂಡಿಸುತ್ತಾ ಭಾಜಪ ಹಾಗೂ ಜನಸೇನಾದ ಕಾರ್ಯಕರ್ತರಿಂದ ಉಪವಾಸ ಸತ್ಯಾಗ್ರಹ

ಇಂತಹ ಉಪವಾಸ ಸತ್ಯಾಗ್ರಹ ಏಕೆ ಮಾಡಬೇಕಾಗುತ್ತದೆ ? ಆಂಧ್ರಪ್ರದೇಶದ ಸರಕಾರಕ್ಕೆ ಇದು ತಿಳಿಯುವುದಿಲ್ಲವೇ ? ಅಥವಾ ‘ರಾಜ್ಯದ ಮುಖ್ಯಮಂತ್ರಿ ಕ್ರೈಸ್ತರಾಗಿದ್ದರಿಂದ ಅವರು ದೇವಸ್ಥಾನದ ಭದ್ರತೆಯ ಕಡೆ ದುರ್ಲಕ್ಷಿಸುತ್ತಿದ್ದಾರೆ’, ಎಂದು ಜನರು ತಿಳಿದುಕೊಳ್ಳಬೇಕೇ ?

ಅಮರಾವತಿ (ಆಂಧ್ರಪ್ರದೇಶ) – ಹಿಂದೂ ದೇವಸ್ಥಾನಗಳ ಮೇಲಾಗುತ್ತಿರುವ ದಾಳಿ ಹಾಗೂ ದೇವಸ್ಥಾನದ ರಥವನ್ನು ಸುಟ್ಟುಹಾಕಿರುವುದನ್ನು ಖಂಡಿಸುತ್ತಾ ಭಾಜಪ ಹಾಗೂ ಜನಸೇನಾಗಳ ಮುಖಂಡರು ಹಾಗೂ ಅನೇಕ ಸಾವಿರಾರು ಕಾರ್ಯಕರ್ತರು ಸಪ್ಟೆಂಬರ್ ೧೦ ರಂದು ಸಂಪೂರ್ಣ ಆಂಧ್ರಪ್ರದೇಶದಲ್ಲಿ ೧೧ ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಮಾಡಿದರು. ಸಪ್ಟೆಂಬರ್ ೬ ರಂದು ಗೋದಾವರಿ ಜಿಲ್ಲೆಯ ಅಂತರ್ವೇದಿಯಲ್ಲಿನ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ರಥವನ್ನು ಸುಡಲಾಗಿತ್ತು.

೧. ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ರಥವನ್ನು ಸುಡಲು ಕಾರಣಕರ್ತರಾದವರ ಮೇಲೆ ಕ್ರಮಕೈಗೊಳ್ಳಬೇಕು, ಎಂದು ಆಗ್ರಹಿಸುತ್ತಾ ಭಾಜಪ ಹಾಗೂ ಜನಸೇನಾದವರು ‘ಧರ್ಮ ಪರೀಕ್ಷಣ ದೀಕ್ಷಾ’ (ಪ್ರಾಯಶ್ಚಿತ್ತ) ಹೆಸರಿನ ಉಪವಾಸ ಸತ್ಯಾಗ್ರಹವನ್ನು ಮಾಡುವಂತೆ ಜಂಟಿಯಾಗಿ ಕರೆ ನೀಡಿದ್ದರು.

೨. ಜನಸೇನಾ ಪಕ್ಷದ ಮುಖಂಡ ಹಾಗೂ ದಕ್ಷಿಣ ಭಾರತದ ಜನಪ್ರಿಯ ನಟ ಪವನ ಕಲ್ಯಾಣ ಇವರು ಭಾಗ್ಯನಗರದ ನಿವಾಸದಲ್ಲಿ ಬೆಳಗ್ಗೆ ೧೦ ಗಂಟೆಗೆ ಪ್ರಾಯಶ್ಚಿತ್ತ ತೆಗೆದುಕೊಂಡರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗಮೋಹನ ರೆಡ್ಡಿಯ ಸರಕಾರದ ಕಾಲದಲ್ಲಿ ಹಿಂದೂಗಳ ದೇವಸ್ಥಾನಗಳ ಮೇಲಿನ ದಾಳಿ ಹೆಚ್ಚಾಗುತ್ತಿರುವ ಬಗ್ಗೆ ಆರೋಪಿಸಿದ್ದಾರೆ. ಅಂತರ್ವೇದಿ ದೇವಸ್ಥಾನದ ರಥ ಸುಟ್ಟ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯದ ಸೇವಾನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸುವಂತೆ ರಾಜ್ಯ ಸರಕಾರವು ಆದೇಶ ನೀಡಬೇಕು, ಎಂದು ಆಗ್ರಹಿಸಿದರು. ‘ಒಂದು ವೇಳೆ ಸರಕಾರವು ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳದಿದ್ದಲ್ಲಿ, ನಾವು ಈ ಘಟನೆಯ ಬಗ್ಗೆ ಸಿಬಿಐನಿಂದ ತನಿಖೆಯನ್ನು ನಡೆಸುವಂತೆ ಕೇಂದ್ರ ಸರಕಾರಕ್ಕೆ ಸಂಪರ್ಕಿಸುವೆವು’, ಎಂದು ಪವನ ಕಲ್ಯಾಣ ಇವರು ತಿಳಿಸಿದರು.

೩. ಪೂರ್ವ ಗೋದಾವರಿ ಜಿಲ್ಲೆಯ ರಾಜಮುಂದ್ರಿಯ ನಿವಾಸದಲ್ಲಿ ಭಾಜಪದ ಪ್ರದೇಶಾಧ್ಯಕ್ಷ ಸೋಮು ವೀರರಾಜು ಇವರು, ರಾಜ್ಯ ಸರಕಾರವು ಆರೋಪಿಗಳನ್ನು ಬಂಧಿಸುವ ತನಕ ಆಂದೋಲನ ನಡೆಯುತ್ತಲೇ ಇರುವುದು ಎಂದು ಹೇಳಿದರು ಹಾಗೂ ಅಂತರ್ವೇದಿ ದೇವಸ್ಥಾನದ ರಥ ಸುಟ್ಟಿರುವ ಬಗ್ಗೆ ರಾಜ್ಯಪಾಲರಲ್ಲಿ ದೂರನ್ನು ನೋಂದಾಯಿಸಲಾಗುವುದು ಎಂದು ಹೇಳಿದರು.