ಜೆ.ಎನ್.ಯು. ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಪೀಠಗಳ ವಿದ್ಯಾರ್ಥಿಗಳ ಹೆಸರುಗಳೂ ಉಲ್ಲೇಖ
|
ನವ ದೆಹಲಿ – ಪೊಲೀಸರು ಫೆಬ್ರವರಿ ೨೦೨೦ ರ ದೆಹಲಿ ಗಲಭೆಯ ಪ್ರಕರಣದಲ್ಲಿ ದೋಷಾರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಆಪ್‌ನ ಮಾಜಿ ಹಾಗೂ ಸ್ವರಾಜ್ಯ ಅಭಿಯಾನದ ಇಂದಿನ ಮುಖಂಡ ಯೊಗೇಂದ್ರ ಯಾದವ, ದೆಹಲಿ ವಿದ್ಯಾಪೀಠದ ಪ್ರಾಧ್ಯಾಪಕ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರಾದ ಅಪೂರ್ವಾನಂದ, ಅರ್ಥತಜ್ಞ ಜಯಂತಿ ಘೋಷ, ಸಾಕ್ಷ್ಯಚಿತ್ರದ ನಿರ್ಮಾಪಕರಾದ ರಾಹುಲ್ ರಾಯ್ ಮುಂತಾದವರ ಹೆಸರು ಇರುವುದು ಬಹಿರಂಗವಾಗಿದೆ. ಈ ಆರೋಪಪತ್ರದಲ್ಲಿ ದೆಹಲಿಯ ವಿವಾದಿತ ಜೆ.ಎನ್.ಯು. ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಪೀಠದ ವಿದ್ಯಾರ್ಥಿಗಳ ಹೆಸರುಗಳೂ ಇವೆ.
Swaraj Abhiyan Yogendra Yadav, CPM General Secretary Sitaram Yechury, Prof Jayati Ghosh, Prof. Apporvanand and film-maker Rahul Roy have been named in supplementary chargesheet filed in connection with February Northeast Delhi riots.https://t.co/IBWqqSzvES
— The Logical Indian (@LogicalIndians) September 13, 2020
ಇವರೆಲ್ಲರು ‘ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧಿಸುತ್ತಿರುವಾಗ ಯಾವುದೇ ಹಂತಕ್ಕೆ ಹೋಗಿ’ ಎಂದು ಪ್ರಚೋದನೆ ನೀಡಿದ್ದರು. ಇದರೊಂದಿಗೆ ‘ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೊಂದಣಿ(ಎನ್.ಆರ್.ಸಿ.) ಇವು ಮುಸಲ್ಮಾನರ ವಿರುದ್ಧವಿದೆ ಎಂದು ಅಪಪ್ರಚಾರ ಮಾಡಿ ಮುಸಲ್ಮಾನ ಸಮಾಜವನ್ನು ಕೆರಳಿಸಿದ್ದರು, ಅದೇರೀತಿ ಕೇಂದ್ರ ಸರಕಾರದ ಘನತೆಗೆ ಕಳಂಕ ತರುವಂತೆ ಪ್ರತಿಭಟನೆಯನ್ನು ಮಾಡಿದ್ದರು’, ಎಂದು ದೋಷಾರೋಪಪಟ್ಟಿಯಲ್ಲಿ ನಮೂದಿಸಲಾಗಿದೆ. ಈ ಗಲಭೆಯಲ್ಲಿ ೫೩ ಜನರು ಮೃತಪಟ್ಟಿದ್ದರು ಹಾಗೂ ೫೮೧ ಜನರು ಗಾಯಗೊಂಡಿದ್ದರು.