‘ಮಂಗಲಮ್ ಕರ್ಪೂರ’ದ ಉತ್ಪಾದನೆಯ ಜಾಹೀರಾತಿನಲ್ಲಿ ಪ್ರಭು ಶ್ರೀರಾಮನ ಅವಹೇಳನೆ ನಡೆಯುತ್ತಲೇ ಇದೆ !

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ದೇವಸ್ಥಾನವನ್ನು ನಿರ್ಮಿಸುವ ಕಾರ್ಯ ಆರಂಭವಾಗಿದೆ; ಆದರೆ ದೇಶದಲ್ಲಿ ಇಂದಿಗೂ ವಿವಿಧ ಮಾಧ್ಯಮಗಳಿಂದ ಭಗವಾನ ಶ್ರೀರಾಮನೊಂದಿಗೆ ಇತರ ದೇವತೆಗಳ ಅವಮಾನ ಆಗುತ್ತಲೇ ಇದೆ. ಅದನ್ನು ತಡೆಗಟ್ಟಲು ಸರಕಾರವು ಕಠಿಣ ಕಾನೂನನ್ನು ಜಾರಿಗೆ ತರಬೇಕು !

(ಈ ಚಿತ್ರವನ್ನು ಯಾರ ಧಾರ್ಮಿಕ ಭಾವನೆಗೆ ನೋವಾಗಬೇಕೆಂದೆಂದು ಪ್ರಕಾಶಿಸಿಲ್ಲ, ಬದಲಾಗಿ ಯಾವರೀತಿ ವಿಡಂಬನೆ ಮಾಡಿದ್ದಾರೆ, ಎಂಬುದನ್ನು ತಿಳಿಸಲು ಪ್ರಕಾಶಿಸಿದ್ದೇವೆ.- ಸಂಪಾದಕರು)

ಮುಂಬಯಿ – ಕರ್ಪೂರದ ಉತ್ಪಾದನೆ ಹಾಗೂ ಮಾರಾಟ ಮಾಡುವ ರಾಯಗಡ ಜಿಲ್ಲೆಯ ಕುಂಭಿವಲಿಯಲ್ಲಿನ ‘ಮಂಗಲಮ್ ಆರಗ್ಯಾನಿಕ್ಸ್ ಲಿಮಿಟೆಡ್’ ಈ ಸಂಸ್ಥೆಯು ತನ್ನ ‘ಮಂಗಲಮ್ ಕರ್ಪೂರ’ದ ಉತ್ಪಾದನೆಯ ಜಾಹೀರಾತಿನಲ್ಲಿ ಪ್ರಭು ಶ್ರೀರಾಮನು ಸೆಲ್ಫೀ (ಸಂಚಾರವಾಣಿಯಲ್ಲಿ ಸ್ವಂತದ ಫೋಟೊವನ್ನು ಸ್ವತಃ ತೆಗೆಯುವುದು) ತೆಗೆದುಕೊಳ್ಳುತ್ತಿರುವಂತೆ ತೋರಿಸಿ ಪ್ರಭು ಶ್ರೀರಾಮನ ಘೋರ ಅವಹೇಳನೆಯು ಇಂದಿಗೂ ಮುಂದುವರೆದಿದೆ. ಇದಕ್ಕೆ ಕೆಲವು ತಿಂಗಳಿಂದ ಹಿಂದೂ ಧರ್ಮಾಭಿಮಾನಿಗಳಿಂದ ಕಾನೂನಿನ ಮೂಲಕ ವಿರೋಧಿಸುತ್ತಿರುವಾಗಲೂ ಈ ಜಾಹೀರಾತು ತೆಗೆಯಲಿಲ್ಲ. ಆದ್ದರಿಂದ ಈಗ ಮತ್ತೊಮ್ಮೆ ಅದನ್ನು ವಿರೋಧಿಸುತ್ತಿದ್ದಾರೆ. ಈ ಜಾಹೀರಾತಿನಲ್ಲಿ ‘ಪ್ರಭು ಶ್ರೀರಾಮನ ವೇಶದಲ್ಲಿ ಓರ್ವ ವ್ಯಕ್ತಿ ಸೆಲ್ಫೀ ತೆಗೆಯುತ್ತಿರುವಾಗ ಆತನ ತಾಯಿಯ ದೂರವಾಣಿ ಕರೆ ಬರುತ್ತದೆ ಹಾಗೂ ಅವರು ಆತನಿಗೆ ಕರ್ಪೂರ ತರುವಂತೆ ನೆನಪಿಸಿಕೊಡುತ್ತಾರೆ. ನಂತರ ಆತನು ಕರ್ಪೂರವನ್ನು ಖರೀದಿಸಲು ಅಂಗಡಿಗೆ ಹೋಗುತ್ತಾನೆ. ಆತನ ವೇಶಭೂಷಣವನ್ನು ನೋಡಿ ಅಂಗಡಿಯವನು ತನ್ನಬಳಿ ಇರುವ ‘ಮಂಗಲಮ್ ಕರ್ಪೂರ’ವನ್ನು ಕೊಡುತ್ತಾರೆ. ನಂತರ ಅವರಿಬ್ಬರು ಕರ್ಪೂರದೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಾರೆ’, ಈ ರೀತಿಯಲ್ಲಿ ತೋರಿಸಲಾಗಿದೆ.

ಈ ಜಾಹೀರಾತಿನಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿರುವ ಧರ್ಮಾಭಿಮಾನಿ ಹಿಂದೂಗಳು ಈ ಮುಂದಿನ ಸಂಪರ್ಕ ಸಂಖ್ಯೆಗೆ ಕರೆ ಮಾಡುತ್ತಿದ್ದಾರೆ
ಸಂಪರ್ಕ ಸಂಖ್ಯೆ : (೦೨೨)೪೯೨೦೪೦೮೯
[email protected]

ರಾಷ್ಟ್ರದ್ರೋಹಿ ಹಾಗೂ ಹಿಂದೂದ್ರೋಹಿ ಘಟನೆಗಳನ್ನು ಸಂಯಮದಿಂದ ನಿಷೇಧಿಸಿರಿ !

ಹಿಂದೂದ್ರೋಹಿಗಳನ್ನು ನಿಷೇಧಿಸುವ ಮುಖ್ಯ ಉದ್ದೇಶವೆಂದರೆ ಅದರ ಸೈದ್ಧಾಂತಿಕವಾಗಿ ಬದಲಾವಣೆ ಮಾಡುವುದಾಗಿದೆ. ಆದ್ದರಿಂದ ಯಾರೇ ನಿಷೇಧ ಮಾಡಿದರೂ ಸೈದ್ಧಾಂತಿಕ ಸೂತ್ರಗಳ ಆಧಾರದ ಮೇಲೆ ಮಾಡಿರಿ ! ತಪ್ಪು ಮಾಡುವ ವ್ಯಕ್ತಿಗೆ ತಪ್ಪನ್ನು ತೋರಿಸಿ ಯೋಗ್ಯ ಮಾರ್ಗಕ್ಕೆ ತರುವುದು, ಈ ವ್ಯಾಪಕ ದೃಷ್ಟಿಕೋನದಿಂದ ಖಂಡಿಸಲಾಗುತ್ತಿದ್ದೇವೆ ಎಂದಿರಬೇಕು !