ಉದ್ದೇಶಪೂರ್ವಕವಾಗಿ ದೇವತೆಗಳ ಅವಮಾನ ಮಾಡುವ ಸಂಸ್ಥೆಗಳ ಉತ್ಪಾದನೆಗಳ ಮೇಲೆ ಹಿಂದೂಗಳು ಬಹಿಷ್ಕಾರ ಹಾಕಿದರೆ ಆಶ್ಚರ್ಯವೇನಿಲ್ಲ
ಮುಂಬಯಿ – ‘ಸೂಪರ್ ಶಕ್ತಿ ಮೆಟಾಲಿಕ್ಸ್’ ಈ ಸಂಸ್ಥೆಯು ಶ್ರೀ ಇಂದ್ರದೇವ, ಶ್ರೀ ವಿಶ್ವಕರ್ಮ ದೇವ ಹಾಗೂ ಶ್ರೀ ನಾರದಮುನಿಯರ ವಿಡಂಬನೆಯನ್ನು ಮಾಡುವ ಜಾಹೀರಾತು ಈಗ ಜಾಲತಾಣದಲ್ಲಿ ಪ್ರಸಾರ ಮಾಡಲಾಗುತ್ತಿದೆ.
‘ಸೂಪರ ಶಕ್ತಿ ಮೆಟಾಲಿಕ್ಸ್’ ಇದು ಗೃಹನಿರ್ಮಾಣಕ್ಕಾಗಿ ಬೇಕಾಗಿರುವ ‘ಟಿ.ಎಮ್.ಟಿ. ಬಾರ‍್ಸ್’ಗಳನ್ನು ಉತ್ಪಾದನೆ ಹಾಗೂ ಮಾರಾಟ ಮಾಡುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ತನ್ನ ಉತ್ಪಾದನೆಯನ್ನು ಮಾರಾಟ ಮಾಡಲು ವ್ಯಾಪಾರದ ಉದ್ದೇಶದಿಂದ ವಿಡಿಯೋ ಮೂಲಕ ಜಾಹೀರಾತನ್ನು ನಿರ್ಮಿಸಿ ಅದರಲ್ಲಿ ಶ್ರೀ ಇಂದ್ರದೇವ, ಶ್ರೀ ವಿಶ್ವಕರ್ಮ ದೇವ ಹಾಗೂ ಶ್ರೀ ನಾರದಮುನಿ ಇವರ ವಿಡಂಬನೆಯನ್ನು ಮಾಡಿದ್ದಾರೆ. ಈ ಬಗ್ಗೆ ಧರ್ಮಾಭಿಮಾನಿಗಳು ಹಿಂದೂ ಜನಜಾಗೃತಿ ಸಮಿತಿಗೆ ಮಾಹಿತಿ ನೀಡಿದರು. ಸಮಿತಿಯು ಫೇಸ್‌ಬುಕ್, ಟ್ವಿಟರ್ ಇತ್ಯಾದಿ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಕಾನೂನು ಮಾರ್ಗದಿಂದ ವಿರೋಧಿಸಿತು ಹಾಗೂ ಹಿಂದೂಗಳಿಗೂ ಕಾನೂನು ಮಾರ್ಗದಿಂದ ವಿರೋಧಿಸುವಂತೆ ಕರೆ ನೀಡಿದ್ದರು. ಇದಕ್ಕೆ ಜಾಹೀರಾತಿನಲ್ಲಿ ಶ್ರೀ ಇಂದ್ರದೇವನ ನಟನೆ ಮಾಡಿದ ದ್ವಿದೇದಿ ಹೆಸರಿನ ವ್ಯಕ್ತಿಯು ಈ ವಿಡಿಯೋವನ್ನು ತನ್ನ ಯು-ಟ್ಯೂಬ್‌ನಿಂದ ತೆಗೆದಿದ್ದರು; ಆದರೆ ಆ ಸಂಸ್ಥೆಯು ತನ್ನ ಅಧಿಕೃತ ಜಾಲತಾಣದಲ್ಲಿ ಇಟ್ಟಿದೆ.
ಜಾಹೀರಾತಿನಲ್ಲಿಯ ವಿಡಂಬನೆ
ಈ ಜಾಹೀರಾತಿನಲ್ಲಿ ದೇವರಾಜ ಇಂದ್ರನ ಸ್ವರ್ಗಲೋಕದಲ್ಲಿ ಒಂದು ನೃತ್ಯದ ಕಾರ್ಯಕ್ರಮ ಇರುತ್ತದೆ. ಅಲ್ಲಿ ಅಪ್ಸರೆಯರು ಎಲ್ಲರೆದುರಿಗೆ ನೃತ್ಯವನ್ನು ಮಾಡುತ್ತಿರುತ್ತಾರೆ. ನೃತ್ಯ ನಡೆಯುತ್ತಿರುವಾಗ ಮಹಲಿನ ಛಾವಣಿಯ ‘ಪ್ಲಾಸ್ಟರ್’ ಕೆಳಗೆ ಬೀಳುತ್ತದೆ. ಆದರೂ ಅಪ್ಸರೆಯರು ನೃತ್ಯವನ್ನು ಮುಂದುವರಿಸುತ್ತಾರೆ. ಕೆಲವು ಸಮಯಗಳ ನಂತರ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟರ್ ಬೀಳುತ್ತದೆ, ಆಗ ನೃತ್ಯದ ಕಾರ್ಯಕ್ರಮವನ್ನು ನಿಲ್ಲಿಸಲಾಗುತ್ತದೆ. ಇದನ್ನು ನೋಡಿ ಶ್ರೀ ಇಂದ್ರದೇವನು ‘ಇದೇನು ನಡೆಯುತ್ತಿದೆ ?’, ಎಂದು ಕೇಳಿದಾಗ ಶ್ರೀ ವಿಶ್ವಕರ್ಮ ದೇವರು ಅವರಿಗೆ, ಇದು ‘ಕಳಪೆ ಗುಣಮಟ್ಟದ ಟಿ.ಎಮ್.ಟಿ. ಬಾರ‍್ಸ್’ಅನ್ನು ಉಪಯೋಗಿಸಿರುವುದರ ಪರಿಣಾಮವಾಗಿದೆ ಎಂದು ಹೇಳುತ್ತಾರೆ. ಅದಕ್ಕೆ ಶ್ರೀ ಇಂದ್ರದೇವನು ‘ಇದಕ್ಕೆ ಪರಿಹಾರ ಏನು ?’ ಎಂದು ಕೇಳಿದಾಗ, ಅಲ್ಲಿ ಶ್ರೀ ನಾರದಮುನಿಗಳು ಪ್ರಕಟವಾಗಿ ‘ಇದಕ್ಕೆ ಉಪಾಯವೆಂದರೆ ಭೂಲೋಕದಲ್ಲಿಯ ‘ಸುಪರ ಶಕ್ತಿ ಟಿ.ಎಮ್.ಟಿ. ಬಾರ‍್ಸ್’ ಆಗಿದ್ದು ಗಟ್ಟಿಮುಟ್ಟಾಗಿರುತ್ತದೆ’ ಎಂದು ಹೇಳುತ್ತಾರೆ. ನಂತರ ಪುನಃ ನೃತ್ಯದ ಕಾರ್ಯಕ್ರಮ ಆರಂಭವಾಗುತ್ತದೆ. ಕೊನೆಗೆ ಶ್ರೀ ನಾರದಮುನಿಯವರು, ‘ಕುಣಿಯಿರಿ ಈಗ ದೇವಲೋಕವೂ ‘ಸೂಪರ ಶಕ್ತಿ’ಯಿಂದ ‘ಸೂಪರ್ ಸ್ಟ್ರಾಂಗ್’ ಆಗಿದೆ ಎಂದು ಹೇಳುತ್ತಾರೆ.
Super Shakti Metaliks ने विज्ञापन से किया भगवान इंद्र, विश्वकर्मा देवता तथा नारदमुनि का घोर अपमानक्या कंपनी अन्य…
Posted by Hindu Adhiveshan on Monday, 31 August 2020
ಈ ಜಾಹೀರಾತಿನಿಂದ ಹಿಂದೂಗಳ ದೇವತೆಗಳ ಅವಮಾನ ಆಗಿದ್ದರಿಂದ ಕೋಟಿಗಟ್ಟಲೆ ಹಿಂದೂಗಳ ಧಾರ್ಮಿಕ ಭಾವನೆಗೆ ನೋವಾಗಿತ್ತು.
(ಈ ಚಿತ್ರವನ್ನು ಯಾರ ಧಾರ್ಮಿಕ ಭಾವನೆಗೆ ನೋವಾಗಬೇಕೆಂದೆಂದು ಪ್ರಕಾಶಿಸಿಲ್ಲ, ಬದಲಾಗಿ ಯಾವರೀತಿ ವಿಡಂಬನೆ ಮಾಡಿದ್ದಾರೆ, ಎಂಬುದನ್ನು ತಿಳಿಸಲು ಪ್ರಕಾಶಿಸಿದ್ದೇವೆ.- ಸಂಪಾದಕರು)