ಬಂಗಾಲದಲ್ಲಿ ಭಾಜಪದ ಮತ್ತೋರ್ವ ಕಾರ್ಯಕರ್ತನ ಹತ್ಯೆ
ಪಶ್ಚಿಮ ಮೆದಿನಿಪುರ ಜಿಲ್ಲೆಯ ಸಬಂಗ್‌ನ ಮೊಯನಾದಲ್ಲಿ ಭಾಜಪದ ಕಾರ್ಯಕರ್ತ ದೀಪಕ ಮಂಡಲ್ (ವಯಸ್ಸು ೩೨)ನ ಹತ್ಯೆ ಯಾಗಿದೆ. ಈ ಸಂಬಂಧ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರನ್ನು ದಾಖಲಿಸಲಾಗಿದೆ ಎಂದು ಸ್ಥಳೀಯ ಭಾಜಪ ಮುಖಂಡ ನಬಾರುನ್ ನಾಯಕ ಮಾಹಿತಿ ನೀಡಿದ್ದಾರೆ.