‘ಅಭಿಯಂತರ ದಿನ’ ನಿಮಿತ್ತ ‘ತಂತ್ರಜ್ಞಾನದಲ್ಲಿ ಪ್ರಗತಿಯಲ್ಲಿರುವ ಪ್ರಾಚೀನ ಭಾರತ’ ಈ ವಿಷಯದ ಮೇಲೆ ‘ಆನ್‌ಲೈನ್’ ವಿಶೇಷ ವಿಚಾರಸಂಕಿರಣ !

ಪ್ರಾಚೀನ ಭಾರತೀಯ ವಿಜ್ಞಾನ-ತಂತ್ರಜ್ಞಾನದ ಪರಂಪರೆಯನ್ನು ಪುನರುಜ್ಜೀವನಗೊಳಿಸುವುದು ಆವಶ್ಯಕ ! – ಸದ್ಗುರು ಡಾ. ಚಾರುದತ್ತ ಪಿಂಗಳೆ, ಹಿಂದೂ ಜನಜಾಗೃತಿ ಸಮಿತಿ

ಭಾರತೀಯ ಸಂಸ್ಕೃತಿಯು ನಿಸರ್ಗವನ್ನು ದೇವತೆ ಎಂದು ನಂಬುತ್ತದೆ. ಆಧುನಿಕ ವಿಜ್ಞಾನವನ್ನು ಎಷ್ಟೇ ವೈಭವೀಕರಿಸಿದರೂ ಅದಕ್ಕೆ ಮಿತಿಯಿದೆ. ಭಾರತೀಯ ತತ್ತ್ವಜ್ಞಾನಕ್ಕನುಸಾರ ಧರ್ಮ ಹಾಗೂ ವಿಜ್ಞಾನ ಇವು ಪರಸ್ಪರವಿರೋಧಿ ಇಲ್ಲ. ಪ್ರಾಚೀನ ಭಾರತೀಯ ಋಷಿಗಳು ಆತ್ಮಸಾಕ್ಷಾತ್ಕಾರದ ಪ್ರಕ್ರಿಯೆಯ ಮೂಲಕ ವಿಜ್ಞಾನದ ಸಿದ್ಧಾಂತಗಳನ್ನು ಸೃಷ್ಟಿಸಿದರು. ಆದ್ದರಿಂದ ಭಾರತದಲ್ಲಿ ಶಿಲ್ಪಶಾಸ್ತ್ರ, ಅಗ್ನಿಯಾನಶಾಸ್ತ್ರ, ನೌಕಾಯಾನಶಾಸ್ತ್ರ, ಚಿಕಿತ್ಸಾಶಾಸ್ತ್ರ, ಗಣಿತ, ಖಗೋಳಶಾಸ್ತ್ರ ಇತ್ಯಾದಿ ಅನೇಕ ವಿಷಯಗಳು ಅತ್ಯಂತ ಮುಂದುವರೆದಿದ್ದವು; ಆದರೆ ಮೊಘಲ, ಬ್ರಿಟೀಶರು ಹಾಗೂ ವಿದೇಶಿ ಆಕ್ರಮಣಕಾರರು ಪ್ರಾಚೀನ ಅಮೂಲ್ಯ ಗ್ರಂಥ ಸಂಪತ್ತನ್ನು ನಾಶ ಮಾಡಿದರು, ಅನೇಕ ಅಂಶಗಳನ್ನು ಕದ್ದರು, ಸಾವಿರಾರು ಸ್ಥಳಗಳನ್ನು ವಶಪಡಿಸಿಕೊಂಡರು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ‘ಮೆಕಾಲೆ’ ಪದ್ದತಿಯ ಶಿಕ್ಷಣವ್ಯವಸ್ಥೆಯನ್ನು ಅಂಗೀಕರಿಸಿ ಪ್ರಾಚೀನ ಜ್ಞಾನವನ್ನು ದುರ್ಲಕ್ಷಿಸಿದರು. ಮುಂದೆ ಈ ನಿಜವಾದ ಇತಿಹಾಸ ಹಾಗೂ ಜ್ಞಾನವು ಭಾರತೀಯರ ವರೆಗೆ ತಲುಪಲು ಬಿಡಲಿಲ್ಲ. ಈ ಪ್ರಾಚೀನ ಭಾರತೀಯ ವಿಜ್ಞಾನ-ತಂತ್ರಜ್ಞಾನದ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಆವಶ್ಯಕವಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಪ್ರತಿಪಾದಿಸಿದರು. ‘ಅಭಿಯಂತರ ದಿನ’ದ (ಇಂಜಿನಿಯರ‍್ಸ್ ಡೇ) ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಪ್ರಾಚೀನ ಭಾರತ : ತಂತ್ರಜ್ಞಾನದಲ್ಲಿ ಪ್ರಗತಿ ಹೊಂದಿದ ಭಾರತ’ ಈ ಆನ್‌ಲೈನ್ ವಿಶೇಷ ವಿಚಾರಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು. ‘ಫೇಸ್‌ಬುಕ್’ ಹಾಗೂ ‘ಯೂ-ಟ್ಯೂಬ್’ಗಳ ಮಾಧ್ಯಮದಿಂದ ಈ ವಿಚಾರ ಸಂಕಿರಣವನ್ನು ನೇರ ಪ್ರಸಾರ ಮಾಡಲಾಯಿತು. ಈ ವಿಚಾರ ಸಂಕಿರಣಕ್ಕೆ ೬೦ ಸಾವಿರ ಜನರು ಪ್ರತ್ಯಕ್ಷವಾಗಿ ನೋಡಿದರೆ, ೨ ಲಕ್ಷದ ೨೮ ಸಾವಿರ ಜನರ ತನಕ ಈ ಕಾರ್ಯಕ್ರಮವು ತಲುಪಿತು.

ಪ್ರಾಚೀನ ಭಾರತೀಯ ಜ್ಞಾನವನ್ನು ಕಲಿಸಿದರೆ, ಭಾರತವು ವಿಶ್ವಗುರು ಎಂದು ಪುನರ್‌ಸ್ಥಾಪಿತವಾಗುವುದು ! – ವಿಜಯ ಕುಮಾರ್ ಉಪಾಧ್ಯಾಯ

ನಾಲ್ಕು ವೇದಗಳು ಜ್ಞಾನದ ಮೂಲ ಸ್ರೋತಗಳಾಗಿವೆ. ವೇದಗಳಲ್ಲಿನ ಬೀಜರೂಪದಲ್ಲಿರುವ ಜ್ಞಾನವನ್ನು ವೇದಾಂಗ, ದರ್ಶನಶಾಸ್ತ್ರ, ಉಪವೇದಗಳು ಇತ್ಯಾದಿಗಳಿಗೆ ವಿಸ್ತರಿಸಲಾಗಿದೆ; ಆದರೆ ದುರದೃಷ್ಟವಶಾತ್ ಇಂದು ಪ್ರಾಚೀನ ಜ್ಞಾನಗ್ರಂಥಗಳು ಅಖಂಡವಾಗಿ ಲಭ್ಯವಿಲ್ಲ. ಲಭ್ಯವಿರುವ ಪ್ರಾಚೀನ ಜ್ಞಾನವು ಕ್ರಮೇಣ ಪಠ್ಯಕ್ರಮಗಳಲ್ಲಿ ಕಲಿಸುತ್ತಿಲ್ಲ. ಅದು ಸಂಭವಿಸಿದ್ದಲ್ಲಿ, ಭಾರತವನ್ನು ವಿಶ್ವಗುರು ಎಂದು ಪುನರ್‌ಸ್ಥಾಪಿಸಬಹುದು. ಭಾರತೀಯ ದೃಷ್ಟಿಯ ಕೊರತೆ, ನೈಜಶಾಸ್ತ್ರದ ಅಜ್ಞಾನ, ಕಲುಷಿತ ಉದ್ದೇಶಗಳು ಮತ್ತು ವಿದೇಶಿ ವಿಚಾರಗಳಿಂದ ಇಂದು ಭಾರತೀಯ ಶಾಸ್ತ್ರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ವಿಮಾನಶಾಸ್ತ್ರವನ್ನು ಕಾಲ್ಪನಿಕ ಎಂದು ಅಪಪ್ರಚಾರ ಮಾಡಲಾಗುತ್ತದೆ; ಆದರೆ ಇಂದು ನಡೆಸಿದ ಸಂಶೋಧನೆಯು ಪ್ರಾಚೀನ ಭಾರತೀಯ ಜ್ಞಾನವನ್ನು ಸಹ ದೃಢ ಪಡಿಸುತ್ತಿದೆ. ಯುರೋಪಿನಲ್ಲಿ ಕಂಡುಬರುವ ವೈಜ್ಞಾನಿಕ ಪ್ರಗತಿಯ ಹಿಂದಿನ ಜ್ಞಾನವು ಪರೋಕ್ಷವಾಗಿ ಭಾರತದಿಂದಲೇ ಅರಬ್ ಮತ್ತು ಪರ್ಷಿಯಾ ಮೂಲಕ ಯುರೋಪ್‌ಗೆ ಹೋಗಿದೆ ಎಂದು ಪ್ರಾಚೀನ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಅಧ್ಯಯನಕಾರರಾದ ಮತ್ತು ಲೇಖಕರಾದ ಶ್ರೀ. ವಿಜಯಕುಮಾರ ಉಪಾಧ್ಯಾಯ ಇವರು ಹೇಳಿದರು.

ಜರ್ಮನಿಯಿಂದ ಗಣಿತಜ್ಞ ಹಾಗೂ ‘ಹಿಂದೂ ಮೆಥಮೆಟಿಕ್ಸ್’ ಈ ಪುಸ್ತಕದ ಲೇಖಕ ಡಾ. ಭಾಸ್ಕರ್ ಕಾಂಬಳೆ ಇವರು ‘ಹಿಂದೂ ಗಣಿತದಲ್ಲಿನ ಟ್ರಿಗ್ನೋಮೆಟ್ರಿ’ ಈ ವಿಷಯದ ಬಗ್ಗೆ ಮಾಹಿತಿ ನೀಡುತ್ತಾ, ಗಣಿತವು ಗ್ರೀಕ್‌ನಲ್ಲಿ ಅಲ್ಲ, ಭಾರತದಲ್ಲೇ ಉಗಮವಾಗಿದೆ, ಎಂದು ಹೇಳಿದರು. ವಿದೇಶಿ ಗಣಿತಜ್ಞರಿಗಿಂತ ಸಾವಿರಾರು ವರ್ಷಗಳ ಹಿಂದೆಯೇ, ಶ್ಲೋಕ ಮತ್ತು ಸೂತ್ರದ ರೂಪದಲ್ಲಿ ಮಾಹಿತಿ ನೀಡಿದ ಭಾಸ್ಕರಾಚಾರ್ಯ, ಆರ್ಯಭಟ್, ಮಾಧವ, ಬ್ರಹ್ಮಗುಪ್ತರ ಬಗ್ಗೆ ಡಾ. ಭಾಸ್ಕರ್ ಕಾಂಬಳೆ ಇವರು ನೀಡಿದರು. ಹಾಗೆಯೇ ಸದ್ಗುರು (ಡಾ.) ಪಿಂಗಳೆ ಇವರು ಪ್ರಾಚೀನ ನೌಕಾಯಾನಶಾಸ್ತ್ರ, ಹಾಗೆಯೇ ಶ್ರೀ. ವಿಜಯ ಕುಮಾರ್ ಉಪಾಧ್ಯಾಯ ಇವರು ಶಿಲ್ಪಶಾಸ್ತ್ರ ಈ ವಿಷಯ ಬಗ್ಗೆ ಪರಿಸಂವಾದದಲ್ಲಿ ಮಾಹಿತಿ ನೀಡಿದರು.