ಸಂಸದೆ ಸಾಧ್ವಿ ಪ್ರಜ್ಞಾಸಿಂಹ ಇವರನ್ನು ಜೀವಂತವಾಗಿ ಸುಡುವ ಬೆದರಿಕೆಯೊಡ್ಡಿದ್ದ ಕಾಂಗ್ರೆಸ್‌ನ ಶಾಸಕ ಗೋವರ್ಧನ ಡಾಂಗಿಯ ಕೊರೋನಾದಿಂದ ಸಾವು

ಭೋಪಾಳ (ಮಧ್ಯಪ್ರದೇಶ) – ಮಧ್ಯಪ್ರದೇಶದ ಕಾಂಗ್ರೆಸ್‌ನ ಶಾಸಕ ಗೋವರ್ಧನ ಡಾಂಗಿಯವರು ಗುರುಗ್ರಾಮ್(ಹರಿಯಾಣಾ)ದ ಖಾಸಗೀ ಆಸ್ಪತ್ರೆಯಲ್ಲಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಡಾಂಗಿ ಇವರು ೨೦೧೯ ರಲ್ಲಿ ಭೋಪಾಲದಲ್ಲಿಯ ಭಾಜಪದ ಸಾಂಸದೆ ಸಾಧ್ವಿ ಪ್ರಜ್ಞಾಸಿಂಹ ಇವರನ್ನು ‘ಅವರು ಒಂದುವೇಳೆ ಮಧ್ಯಪ್ರದೇಶಕ್ಕೆ ಕಾಲಿಟ್ಟರೇ, ಅವರ ಪ್ರತಿಕೃತಿಯಲ್ಲ, ಅವರನ್ನೇ ಪ್ರತ್ಯಕ್ಷವಾಗಿ ಸುಡುತ್ತೇನೆ’, ಎಂದು ಬೆದರಿಕೆಯೊಡ್ಡಿದ್ದರು. ನಂತರ ಸಾಧ್ವಿ ಪ್ರಜ್ಞಾಸಿಂಹ ಭೋಪಾಳಕ್ಕೆ ತಲುಪಿದರು ಹಾಗೂ ಪೊಲೀಸ್ ಠಾಣೆಯ ಎದುರು ಆಂದೋಲನ ಮಾಡಿ ಡಾಂಗಿಯವರ ಮೇಲೆ ಅಪರಾಧವನ್ನು ದಾಖಲಿಸುವಂತೆ ಆಗ್ರಹಿಸಿದ್ದರು; ಆದರೆ ಆಗ ರಾಜ್ಯದಲ್ಲಿ ಕಾಂಗ್ರೆಸ್‌ನ ಸರಕಾರ ಇದ್ದುದರಿಂದ ಡಾಂಗಿಯವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ.