ಅಮಾಯಕರನ್ನು ಬಿಡುಗಡೆಗೊಳಿಸಿ !

ಬೆಂಗಳೂರು ಗಲಭೆ ಪ್ರಕರಣ

ಮುಸಲ್ಮಾನ ಸಮೂಹದಿಂದ ವಿರೋಧ ಪ್ರಕ್ಷದ ಮುಖಂಡ ಸಿದ್ದರಾಮಯ್ಯ ಇವರಲ್ಲಿ ಆಗ್ರಹ

ಗಲಭೆ ಮಾಡಿ ಹಿಂದೂಗಳ ಮೇಲೆ ದಾಳಿ ಮಾಡಿದ ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳಿರಿ ಹಾಗೂ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಇಂತಹ ಸಮೂಹದವರು ಎಂದಾದರೂ ಸರಕಾರಕ್ಕೆ ಒತ್ತಾಯಿಸಿದ್ದಾರೆಯೇ ?

ಬೆಂಗಳೂರು – ಇಲ್ಲಿ ನಡೆದ ಗಲಭೆಯ ಪ್ರಕರಣದಲ್ಲಿ ಬಂಧಿಸಲಾಗಿದ್ದ ಮತಾಂಧರನ್ನು ಬಿಡುಗಡೆ ಮಾಡಲು ಕಾಂಗ್ರೆಸ್‌ನ ಮುಖಂಡ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರಿಗೆ ಮುಸಲ್ಮಾನರ ಸಮೂಹವೊಂದು ಭೇಟಿ ನೀಡಿ ಮನವಿ ಸಲ್ಲಿಸಿದೆ.
ಈ ಗಲಭೆಗೆ ಸಂಬಂಧಪಟ್ಟವರಿಗೆ ಶಿಕ್ಷೆಯಾಗಬೇಕು, ಅದನ್ನು ನಾವು ಬೆಂಬಲಿಸುತ್ತೇವೆ; ಆದರೆ ಈ ಘಟನೆಯ ಸಮಯದಲ್ಲಿ ವೈಯಕ್ತಿಕ ಕೆಲಸಕ್ಕಾಗಿ ಹೊರಗೆ ಹೋಗಿದ್ದ ಅಮಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯೋಗ ಮಾಡುವವರನ್ನು ಬಂಧಿಸಿದ್ದರಿಂದ ಅವರ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳು ಸೃಷ್ಟಿಯಾಗಿವೆ. ಅದಕ್ಕಾಗಿ ಯಾರ ವಿರುದ್ಧ ಯಾವುದೇ ಪುರಾವೆಗಳು ಇಲ್ಲವೋ ಅಂತಹ ಅಮಾಯಕ ವ್ಯಕ್ತಿಗಳನ್ನು ಬಿಡುಗಡೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಮನವಿಯಲ್ಲಿ ಕೋರಲಾಗಿದೆ.