ಬರೇಲಿ(ಉತ್ತರಪ್ರದೇಶ)ಯ ಹಿಂದೂ ಯುವಾ ವಾಹಿನಿಯ ನಾಯಕ ಡಾ. ಸಂಜಯ ಸಿಂಹ ಇವರ ಹತ್ಯೆ

  • ಇತರ ರಾಜ್ಯಗಳ ತುಲನೆಯಲ್ಲಿ ಉತ್ತರಪ್ರದೇಶದಲ್ಲಿ ಹಿಂದುತ್ವನಿಷ್ಠರ ಹಾಗೂ ಹಿಂದೂ ಸಂತರ ಹತ್ಯೆಯಾಗುವ ಘಟನೆ ಹೆಚ್ಚಿದೆ. ಅಲ್ಲಿ ಹಿಂದುತ್ವನಿಷ್ಠ ಭಾಜಪದ ರಾಜ್ಯವಿದೆ. ಭಾಜಪದ ರಾಜ್ಯದಲ್ಲಿಯಾದರೂ ಹಿಂದುತ್ವನಿಷ್ಠರ ಹತ್ಯೆ ತಡೆಯಲಾಗುವುದು ಹಾಗೂ ದಾಳಿಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

  • ಹಿಂದೂ ಯುವಾ ವಾಹಿನಿಯನ್ನು ಈಗಿನ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರೇ ಸ್ಥಾಪಿಸಿದ್ದಾರೆ ಹಾಗೂ ಅವರ ಸಂಘಟನೆಯ ನಾಯಕರದ್ದೇ ಹತ್ಯೆಯಾಗುವುದು, ಇದು ಅಪೇಕ್ಷಿತವಿಲ್ಲ !

ಬರೇಲಿ (ಉತ್ತರಪ್ರದೇಶ) – ಇಲ್ಲಿಯ ಹಿಂದೂ ಯುವಾ ವಾಹಿನಿಯ ನಾಯಕ ಡಾ. ಸಂಜಯ ಸಿಂಹ ಇವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಯಿತು. ಇಲ್ಲಿ ಅವರ ಖಾಸಗಿ ಆಸ್ಪತ್ರೆಯ ಎದುರಲ್ಲೇ ರಾತ್ರಿಯ ಸಮಯದಲ್ಲಿ ಅವರ ಹತ್ಯೆ ಮಾಡಲಾಯಿತು. ಅವರು ಕಳೆದ ೨ ವರ್ಷಗಳಿಂದ ಈ ಸಂಘಟನೆಯ ಮಿರಜಗಂಜ್ ತಾಲೂಕಿನ ಮುಖಂಡರಾಗಿದ್ದರು. ಪೊಲೀಸರು ಹಂತಕರನ್ನು ಹುಡುಕುತ್ತಿದ್ದಾರೆ. ಅದಕ್ಕಾಗಿ ಅಲ್ಲಿ ಹಾಕಲಾಗಿರುವ ಸಿಸಿ ಟಿವಿಯ ಚಿತ್ರೀಕರಣವನ್ನು ಪರಿಶೀಲಿಸಲಾಗುತ್ತಿದೆ. ಯೋಗಿ ಆದಿತ್ಯನಾಥರು ೨೦೦೨ ರಲ್ಲಿ ಹಿಂದೂ ಯುವಾ ವಾಹಿನಿಯ ಸ್ಥಾಪನೆಯನ್ನು ಮಾಡಿದ್ದರು.