೧೨ ವರ್ಷದ ಬಾಲಕಿಯನ್ನು ಅಪಹರಿಸಿದ್ದ ೭ ಮಂದಿಯ ಬಂಧನ

ಅಲ್ಪಸಂಖ್ಯಾತರು ಆದರೆ ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರು !

ಬಂಟಿ ಖಾನ್

ಆಗ್ರಾ (ಉತ್ತರಪ್ರದೇಶ) – ಇಲ್ಲಿಯ ಇಬಾದತ್‌ನಗರದಲ್ಲಿ ಸಪ್ಟೆಂಬರ್ ೧೧ ರಂದು ಅಪಹರಿಸಲಾಗಿದ್ದ ೧೨ ವರ್ಷದ ಹುಡುಗಿಯನ್ನು ೪ ದಿನಗಳ ನಂತರ ಹುಡುಕುವಲ್ಲಿ ಪೊಲೀಸರಿಗೆ ಯಶಸ್ಸು ಸಿಕ್ಕಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟಿ ಖಾನ್ ಸಹಿತ ೭ ಮಂದಿಯನ್ನು ಬಂಧಿಸಲಾಗಿದೆ. ಈ ಹುಡುಗಿಯು ಬಂಟಿ ಖಾನ್ ಎಂಬ ಯುವಕನೊಂದಿಗೆ ಸ್ನೇಹ ಬೆಳೆಸಿದ್ದಳು. ಆತನೇ ಹುಡುಗಿಯನ್ನು ಅಪಹರಿಸಿರಬಹುದು, ಎಂದು ಹುಡುಗಿಯ ಪೋಷಕರು ಶಂಕಿಸಿದ್ದರು.