ಹಿಂದೂ ಜನಜಾಗೃತಿ ಸಮಿತಿಯಿಂದ ವಿರೋಧ
‘ಝೀ’ ಸಂಸ್ಥೆಯು ತನ್ನನ್ನು ಹಿಂದುತ್ವನಿಷ್ಠ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತದೆ; ಆದರೆ ತಮ್ಮದೇ ವಾಹಿನಿಯಲ್ಲಿ ಹಿಂದೂ ದೇವತೆಗಳ ಅವಮಾನವಾಗುತ್ತಿದೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !
ಈ ಚಿತ್ರವನ್ನು ಯಾರ ಧಾರ್ಮಿಕ ಭಾವನೆಗೆ ನೋವಾಗಬೇಕೆಂದೆಂದು ಪ್ರಕಾಶಿಸಿಲ್ಲ, ಬದಲಾಗಿ ಶ್ರೀ ಗಣೇಶನ ಯಾವರೀತಿ ವಿಡಂಬನೆ ಮಾಡಿದ್ದಾರೆ, ಎಂಬುದನ್ನು ತಿಳಿಸಲು ಪ್ರಕಾಶಿಸಿದ್ದೇವೆ.
ನವದೆಹಲಿ – ‘ಝೀ ಟಿವಿ’ ಈ ಖಾಸಗಿ ವಾಹಿನಿಯಲ್ಲಿ ಅಕ್ಟೋಬರ್ ೫ ರಿಂದ ‘ರಾಮ ಪ್ಯಾರೆ ಸಿರ್ಫ್ ಹಮಾರೆ’ ಹೆಸರಿನ ಹಿಂದಿ ಧಾರಾವಾಹಿಯು ಪ್ರಸಾರವಾಗಲಿದೆ. ಈ ಧಾರಾವಾಹಿಯ ‘ಪ್ರೋಮೊ’ (ಪ್ರಸಿದ್ಧಿಗಾಗಿ ಮಾಲಿಕೆಯಲ್ಲಿನ ಆಯ್ದ ಭಾಗಗಳನ್ನು ತೋರಿಸುವುದು) ತೋರಿಸಲಾಗುತ್ತಿದ್ದು ಅದರಲ್ಲಿ ದುಲಾರಿ ಹೆಸರಿನ ಮಹಿಳೆಯ ಗಂಡನ ಹೆಸರು ‘ರಾಮ’ ಇದೆ. ಇದರಲ್ಲಿ ರಾಮನ ಹೆಸರಿನ ಪಾತ್ರಧಾರಿಯನ್ನು ಪ್ರಭು ಶ್ರೀ ರಾಮನ ರೂಪದಲ್ಲಿ ತೋರಿಸಿ ಅವರ ಅವಮಾನ ಮಾಡಲಾಗುತ್ತಿದೆ. ಹಿಂದೂ ಜನಜಾಗೃತಿ ಸಮಿತಿಯು ಪ್ರಭು ಶ್ರೀ ರಾಮನ ಅವಮಾನವನ್ನು ಖಂಡಿಸಿದೆ. ಇದಕ್ಕೆ ಕಾನೂನಿನ ಚೌಕಟ್ಟಿನಲ್ಲಿ ವಿರೋಧಿಸಲು ಕರೆ ನೀಡಿದೆ.
ಧಾರಾವಾಹಿಯಲ್ಲಿ ಮಾಡಿದ ಅವಮಾನ !
ಇದರಲ್ಲಿ ರಾಮ ಹಾಗೂ ದುಲಾರಿ ದ್ವಿಚಕ್ರ ವಾಹನದಿಂದ ಹೋಗುವಾಗ ರಾಮ ರಸ್ತೆಯಲ್ಲಿನ ಹುಡುಗಿಯರ ಕಡೆ ಆಕರ್ಷಿತವಾಗುವಂತೆ ತೋರಿಸಲಾಗಿದೆ. ಆ ಸಮಯದಲ್ಲಿ ಪತ್ನಿ ದುಲಾರಿಯು, ‘ಮಹಿಳೆಯರಿಗೆ ನನ್ನ ಗಂಡ ರಾಮನಲ್ಲಿ ಪುರುಷ ಉತ್ತಮ (ಪುರುಷೋತ್ತಮ)ನಂತೆ ಕಾಣಿಸಿದರೇ, ನನಗೆ ಈ ಹುಡುಗಿಯರಲ್ಲಿ ಶೂರ್ಪಣಖಿ ಕಂಡುಬರುತ್ತದೆ !’ ಹೀಗೆ ಹೇಳುತ್ತಾಳೆ, ಅನಂತರ ಆ ಹುಡುಗಿಯು ‘ಈಗ ಮೂಗು ಅಥವಾ ತಲೆ ಕತ್ತರಿಸಿದರೂ, ಹೃದಯಯದಲ್ಲಿ ಕೇವಲ ರಾಮನೇ !’ ಎಂದು ಹೇಳುತ್ತಾಳೆ.
ಒಂದು ಪ್ರಸಂಗದಲ್ಲಿ ದುಲಾರಿಯು, ‘ನನ್ನ ರಾಮನನ್ನು ಕಾಪಾಡಲು ಪ್ರತಿಯೊಂದು ಲಕ್ಷ್ಮಣರೇಖೆಯನ್ನು ನಾನು ದಾಟುತ್ತೇನೆ’ ಎಂದು ಹೇಳುತ್ತಾಳೆ.
ಹಿಂದೂ ಧರ್ಮಪ್ರೇಮಿಗಳು ಈ ಮುಂದಿನ ಸಂಪರ್ಕಕ್ಕೆ ಕಾನೂನುಮಾರ್ಗದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ
ಟ್ವಿಟರ್ : twitter.com.ZeeTV
ಫೇಸ್ಬುಕ್ : facebook.com/ZeeTVIndia/
ಇನ್ಸ್ಟಾಗ್ರಾಂ : instagram.com/zeetv/?hI=en