ಕಳೆದ ೧೫ ವರ್ಷಗಳಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದ ೮೦ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಮತಾಂಧನ ಬಂಧನ

ಕಳೆದ ೧೫ ವರ್ಷಗಳಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದ ೮೦ ದೇವಸ್ಥಾನಗಳಲ್ಲಿ ಅರ್ಪಣೆ ಪೆಟ್ಟಿಗೆಗಳಿಂದ ಹಣವನ್ನು ಕದಿಯುತ್ತಿದ್ದ ಪಠಾಣ ಸಲಾರ್ ಖಾನ್‌ನನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಈತನು ಆಂಧ್ರಪ್ರದೇಶದ ವಿವಿಧ ದೇವಸ್ಥಾನಗಳಿಂದ ೧೮ ಸಾವಿರ ರೂಪಾಯಿಗಳನ್ನು ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ.

ರಾಜಸ್ಥಾನದಲ್ಲಿ ೨೪ ಗಂಟೆಗಳಲ್ಲಿ ೭ ಅತ್ಯಾಚಾರಗಳ ಘಟನೆಗಳು

ಬರಾಂನಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಆಮಿಷವೊಡ್ಡಿ ಆರೋಪಿಗಳು ಅವರನ್ನು ಕೋಟಾ, ಜೈಪುರ ಮತ್ತು ಅಜ್ಮೀರ್‌ಗೆ ಕರೆದೊಯ್ದು ತಮ್ಮ ಸಹಚರರೊಂದಿಗೆ ಸಾಮೂಹಿಕ ಅತ್ಯಾಚಾರ ಮಾಡಿದರು. ಈ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬಾಲಕಿಯರು ಯುವಕರೊಂದಿಗೆ ಸ್ವೇಚ್ಛೆಯಿಂದ ತಾವಾಗಿಯೇ ತಿರುಗಾಡಲು ಹೋಗಿದ್ದರು ಎಂದು ಹೇಳಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣದಲ್ಲಿನ ಫಾರೂಕ್ ಅಬ್ದುಲ್ಲಾ ವಿರುದ್ಧದ ಆನ್‌ಲೈನ್ ಅಭಿಯಾನಕ್ಕೆ ಉತ್ಸಾಹಪೂರ್ಣ ಬೆಂಬಲ

ಕಾಶ್ಮೀರಿ ನಾಗರಿಕರು ತಮ್ಮನ್ನು ಭಾರತೀಯರೆಂದು ತಿಳಿದುಕೊಳ್ಳುವುದಿಲ್ಲ ಮತ್ತು ಅವರು ಭಾರತೀಯರಾಗಲು ಬಯಸುವುದಿಲ್ಲ. ಚೀನಾ ತನ್ನ ಮೇಲೆ ಆಳ್ವಿಕೆ ನಡೆಸಬೇಕು ಎಂದು ಅವರು ಬಯಸುತ್ತಾರೆ, ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಶನಲ್ ಕಾನ್ಫರೆನ್ಸ್‌ನ ನಾಯಕ ಫಾರೂಖ ಅಬ್ದುಲ್ಲಾ ಅವರು ಹೇಳಿಕೆ ನೀಡಿದ್ದರು. ಇದಕ್ಕೆ ದೇಶದ ಎಲ್ಲೆಡೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಸಂಸ್ಕೃತವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಅಭಿನಂದನೆಗಳು ! ಇತರ ರಾಜ್ಯಗಳು ಸಹ ಇದನ್ನು ಅನುಸರಿಸಬೇಕು !

ಉತ್ತರಪ್ರದೇಶ ಸರಕಾರವು ಹಿಂದಿ, ಆಂಗ್ಲ ಮತ್ತು ಉರ್ದುವಿನೊಂದಿಗೆ ಇನ್ನು ಸಂಸ್ಕೃತ ಭಾಷೆಯಲ್ಲಿಯೂ ಸರಕಾರಿ ಸುತ್ತೋಲೆಯನ್ನು ಹೊರಡಿಸಲು ಪ್ರಾರಂಭಿಸಿದೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಈ ಬಗ್ಗೆ ನಿರ್ದೇಶನವನ್ನು ನೀಡಿದ್ದರು. ಇದರ ನಂತರ ರಾಜ್ಯದ ಆರೋಗ್ಯ ಇಲಾಖೆಯು ಕೊರೋನಾದ ಬಗ್ಗೆ ಪ್ರತಿದಿನದ ಪತ್ರಿಕಾ ಪ್ರಕಟಣೆಗಳನ್ನು ಸಂಸ್ಕೃತ ಭಾಷೆಯಲ್ಲಿ ಪ್ರಕಟಿಸಲು ಪ್ರಾರಂಭಿಸಿತು.

ಜಗನಮೋಹನ್ ರೆಡ್ಡಿ, ಇಬ್ಬರು ಮಂತ್ರಿಗಳು, ದೇವಸ್ಥಾನಮ್‌ನ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ವೈ.ಎಸ್. ಜಗನಮೋಹನ ರೆಡ್ಡಿಯವರು ಸೆಪ್ಟೆಂಬರ್ ೨೩ ರಂದು ತಿರುಮಲ ತಿರುಪತಿಯಲ್ಲಿರುವ ವೆಂಕಟೇಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಪಾಟಲಿಪುತ್ರ (ಪಾಟ್ನಾ) ದಲ್ಲಿ ಭಾಜಪ ನಾಯಕನ ಹತ್ಯೆ

ಇಲ್ಲಿಯ ಭಾಜಪದ ಮುಖಂಡ ರಾಜೇಶಕುಮಾರ್ ಝಾ ಅಲಿಯಾಸ್ ರಾಜು ಬಾಬಾರವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಅಕ್ಟೋಬರ್ ೧ ರಂದು ಬೆಳಗ್ಗೆ ೬ ಗಂಟೆಗೆ ಬಿವೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಾಪ ನಗರದ ಸೀತಾರಾಮ್ ಉತ್ಸವ್ ಹಾಲ್ ಬಳಿ ಈ ಘಟನೆ ನಡೆದಿದೆ. ಝಾ ಇವರು ಕೇವಲ ಎರಡು ದಿನಗಳ ಹಿಂದೆ ಭಾಜಪಗೆ ಸೇರಿದ್ದರು.

ಶ್ರೀಕೃಷ್ಣ ಜನ್ಮಭೂಮಿಯ ಮೇಲೆ ಶಾಹಿ ಈದ್ಗಾ ಮಸೀದಿಯಿಂದಾಗಿರುವ ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಅರ್ಜಿ ಮಥುರಾ ನ್ಯಾಯಾಲಯದಿಂದ ತಿರಸ್ಕೃತ

ಮಥುರಾದ ಶ್ರೀಕೃಷ್ಣ ಜನ್ಮಭೂಮಿಗೆ ಸೇರಿದ ೧೩.೩೭ ಎಕರೆ ಜಮೀನಿನ ಮಾಲೀಕತ್ವ ಮತ್ತು ಈ ಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿಯಿಂದಾಗಿರುವ ಅತಿಕ್ರಮಣ ತೆರವುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೆಪ್ಟೆಂಬರ್ ೩೦ ರಂದು ಮಥುರಾ ನ್ಯಾಯಾಲಯ ತಿರಸ್ಕರಿಸಿದೆ. ಭಗವಾನ್ ಕೃಷ್ಣ ವಿರಾಜಮಾನ್, ಕಟರಾ ಕೇಶವ ದೇವ ಖೇವಾಟ್, ರಂಜನಾ ಅಗ್ನಿಹೋತ್ರಿ ಸೇರಿದಂತೆ ಒಟ್ಟು ಆರು ಮಂದಿ ಅರ್ಜಿ ಸಲ್ಲಿಸಿದ್ದರು.

ಬಾಬರಿ ಮಸೀದಿ ಧ್ವಂಸ ಮಾಡಿದ ಪ್ರಕರಣದಲ್ಲಿ ಎಲ್ಲ ೩೨ ಆರೋಪಿಗಳು ನಿರ್ದೋಷಿ

೧೯೯೨ ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಣಪುರಿಯ ಸಿಬಿಐನ ವಿಶೇಷ ನ್ಯಾಯಾಲಯವು ಭಾಜಪದ ಹಿರಿಯ ಮುಖಂಡರಾದ ಲಾಲಕೃಷ್ಣ ಅಡವಾಣಿ, ಮುರಳಿ ಮನೋಹರ ಜೋಶಿ, ವಿನಯ ಕಟಿಯಾರ್, ಉಮಾ ಭಾರತಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಹ, ಸಾಧ್ವಿ ಋತಂಭರಾ ಇವರೊಂದಿಗೆ ಎಲ್ಲ ೩೨ ಆರೋಪಿಗಳನ್ನು ನಿದೋರ್ಷಿಗಳೆಂದು ತೀರ್ಪು ನೀಡಿದೆ.

ನಿಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ‘ಅಪ್‌ಲೋಡ್ ಮಾಡುವಾಗ ಜಾಗರೂಕರಾಗಿರಿ ! – ಸೈಬರ್ ಪೊಲೀಸ್

ಪ್ರಸ್ತುತ ‘ಫೇಸ್‌ಬುಕ್ ಈ ಸಾಮಾಜಿಕ ಪ್ರಸಾರ ಮಾಧ್ಯಮದಿಂದ ‘ಕಪಲ ಚ್ಯಾಲೆಂಜ್ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಅನೇಕ ದಂಪತಿಗಳು ತಮ್ಮ ಫೋಟೋಗಳನ್ನು ‘ಅಪ್‌ಲೋಡ್ ಮಾಡಿದ್ದಾರೆ. ತಮ್ಮ ಛಾಯಾಚಿತ್ರವನ್ನು ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವಾಗ ಬಹಳ ಜಾಗರೂಕರಾಗಿರಬೇಕು.

ತಮಿಳುನಾಡಿನಲ್ಲಿ ಹಿಂದೂ ವಿರೋಧಿ ನಾಯಕ ದಿವಂಗತ ಪೆರಿಯಾರ್ ಅವರ ಪ್ರತಿಮೆಯ ಮೇಲೆ ಕೇಸರಿ ಬಣ್ಣ ಎರಚಲಾಯಿತು

ತಮಿಳುನಾಡಿನ ಹಿಂದೂ ವಿರೋಧಿ ನಾಯಕ ದಿವಂಗತ ಇ.ವಿ. ರಾಮಸ್ವಾಮಿ ‘ಪೆರಿಯಾರ್’ ಪ್ರತಿಮೆಯ ಮೇಲೆ ಅಜ್ಞಾತರು ಕೇಸರಿ ಬಣ್ಣ ಹಾಗೂ ಚಪ್ಪಲಿಗಳನ್ನು ಹಾಕಿರುವ ಘಟನೆ ನಡೆದಿದೆ. ಈ ಪ್ರತಿಮೆ ಇನಾಮಕುಲಾತೂರನ ಸಮತುವಾಪುರಮ್ ಕಾಲೋನಿಯಲ್ಲಿದೆ.